ಆದ್ರೆ ಅದೇ ಟೈಮ್‌ನಲ್ಲಿ ಚಿರಂಜೀವಿ ಇನ್ನಷ್ಟು ಸ್ಪೀಡ್ ಜಾಸ್ತಿ ಮಾಡಿದ್ರು. 'ಅತ್ತಕು ಯಮುಡು ಅಮ್ಮಾಯಿಕಿ ಮೊಗುಡು', 'ಕೊಂಡವೀಟಿ ದೊಂಗ', 'ಜಗದೇಕ ವೀರುಡು ಅತಿಲೋಕ ಸುಂದರಿ', 'ಗ್ಯಾಂಗ್ ಲೀಡರ್' ತರ ಬ್ಲಾಕ್ ಬಸ್ಟರ್ ಸಿನಿಮಾಗಳು ಎರಡೇ ವರ್ಷದಲ್ಲಿ ಚಿರಂಜೀವಿ ಅವರಿಗೆ ಸಿಕ್ತು. ಇದರಿಂದ ಚಿರು ಟಾಲಿವುಡ್‌ನಲ್ಲಿ ಯಾರೂ ಮುಟ್ಟಕ್ಕಾಗ್ದೆ ಇರೋ ಎತ್ತರಕ್ಕೆ ಹೋಗ್ಬಿಟ್ಟರು. ಅದೇ ಟೈಮ್‌ನಲ್ಲಿ ರಾಜಶೇಖರ್ ಕಥೆಗಳ ಸೆಲೆಕ್ಷನ್ ಟ್ರ್ಯಾಕ್ ತಪ್ಪಿತು. 'ಅಂಕುಶಂ' ಆದ್ಮೇಲೆ 'ಅಲ್ಲರಿ ಪ್ರಿಯಡು' ವರೆಗೂ ಸಖತ್ ಹಿಟ್ ಅಂತ ಏನೂ ಸಿಗಲಿಲ್ಲ. ಇದರಿಂದ ರಾಜಶೇಖರ್ ನಂಬರ್ 1 ರೇಸ್‌ನಲ್ಲಿ ಹಿಂದೇ ಉಳಿದುಬಿಟ್ಟರು.