ಅಮಿತಾಬ್‌ ಬಚ್ಚನ್‌ ಸೇರಿ 4 ನಟರ ಜೊತೆ ಡೇಟ್‌ ಮಾಡಿದ ನಟಿಗೆ ದಕ್ಕದ ನಿಜವಾದ ಪ್ರೀತಿ!

First Published | Apr 4, 2024, 4:53 PM IST

ಗತಕಾಲದ ಬಾಲಿವುಡ್‌ ನಾಯಕಿ ಪರ್ವೀನ್ ಬಾಬಿ (Parveen Babi) ಅವರ ಜನ್ಮದಿನ ಇಂದು. ಏಪ್ರಿಲ್ 4, 1954 ರಂದು ಜುನಾಗಢದಲ್ಲಿ ಜನಿಸಿದ  ಪರ್ವೀನ್ ತನ್ನ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್‌ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಅವರು  ತಮ್ಮ ವೈಯಕ್ತಿಕ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ನಾಲ್ಕು ಜನರೊಂದಿಗೆ ಡೇಟ್‌ ಮಾಡಿದರೂ ಕೊನೆಗೂ ಪರ್ವೀನ್ ಬಾಬಿ ಮದುವೆಯಿಲ್ಲದೆ ಒಂಟಿಯಾಗಿ ದುರಂತ  ಅಂತ್ಯ ಕಂಡರು. ಪರ್ವೀನ್ ಬಾಬಿಯ ಲವ್‌ ಲೈಫ್ (Love Life) ಹೇಗಿತ್ತು ನೋಡಿ. 
 

1970 ಮತ್ತು 1980 ರ ದಶಕದಲ್ಲಿ ಬಾಲಿವುಡ್‌ನ ಅತ್ಯಂತ ಜನಪ್ರಿಯ ಹಾಗೂ ಸುಂದರ ನಟಿಯಾಗಿ ಮಿಂಚಿದ ಪರ್ವೀನ್ ಬಾಬಿ ಅತ್ಯಂತ ಘೋರ ಅಂತ್ಯ ಕಂಡರು

ಬಾಲಿವುಡ್ ಚಿತ್ರಗಳಿಗೆ ಬೋಲ್ಡ್‌ನೆಸ್ ಸೇರಿಸಿದ ಕೀರ್ತಿ ಪರ್ವೀನ್ ಅವರಿಗೇ ಸಲ್ಲುತ್ತದೆ. ಅವರು ತಮ್ಮ ಸ್ಟೈಲ್‌ ಹಾಗೂ ಬೋಲ್ಡ್‌ನೆಸ್‌ನಿಂದ ಇಡೀ ಬಾಲಿವುಡ್‌ನ ಟ್ರೆಂಡ್ ಅನ್ನೇ ಬದಲಾಯಿಸಿದವರು. 

Tap to resize

 ತನ್ನ ಸೌಂದರ್ಯ ಮತ್ತು ನಟನೆಯಿಂದ ಕೋಟ್ಯಂತರ ಜನರ ಮನಗೆದ್ದಿದ್ದ ಪರ್ವೀನ್ ಬಾಬಿ ಅಫೇರ್‌ಗಳು ಮತ್ತು ಸಂಬಂಧಗಳು ಮಾಧ್ಯಮದ ಗಮನ ಸೆಳೆದಿದ್ದವು. ಈ ಪ್ರೀತಿ ಹುಚ್ಚು ಎನಿಸಿದ್ದೂ ಇದೆ ಸಿನಿ ಪ್ರೇಮಿಗಳಿಗೆ.

ಪರ್ವೀನ್ ಬಾಬಿ ಮತ್ತು ನಟ ಅಮಿತಾಬ್ ಬಚ್ಚನ್ ಹಲವಾರು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ ಮತ್ತು ಇವರಿಬ್ಬರೂ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವದಂತಿಗಳು ಹರಿದಾಡುತ್ತಲೇ ಇದ್ದವು. ಆದಾಗ್ಯೂ, ಬಚ್ಚನ್ ಮತ್ತು ಬಾಬಿ ಇಬ್ಬರೂ ಈ ವದಂತಿಗಳನ್ನು ಎಂದಿಗೂ ಸಾರ್ವಜನಿಕವಾಗಿ ದೃಢಪಡಿಸಿರಲಿಲ್ಲ.

ಪರ್ವೀನ್ ಬಾಬಿ ತನ್ನ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ಚಲನಚಿತ್ರ ನಿರ್ಮಾಪಕ ಮಹೇಶ್ ಭಟ್ ಜೊತೆ ಸಂಬಂಧ ಹೊಂದಿದ್ದರು. ಅವರ ಸಂಬಂಧವು  ನಟಿ  ಮಾನಸಿಕ ಆರೋಗ್ಯ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಕೊನೆಗೊಂಡಿತು ಎಂದು ವರದಿಯಾಗಿದೆ. ಒಮ್ಮೆ ಮಹೇಶ್ ಭಟ್ ಮನೆಯಿಂದ ನಗ್ನರಾಗಿ ಪರ್ವಿನ್ ಓಡಿ ಹೋಗಿದ್ದರು ಎಂಬ ಸುದ್ದಿಯೂ ಜಗಜ್ಜಾಹೀರ.

ಪರ್ವೀನ್ ಬಾಬಿ ಮತ್ತು ನಟ ಡ್ಯಾನಿ ಡೆನ್ಜಾಂಗ್ಪಾ ನಡುವಿನ ಸಂಬಂಧದ ವದಂತಿಗಳಿವೆ. ಆದಾಗ್ಯೂ, ಅವರ ಸಂಬಂಧದ  ಬಗ್ಗೆ ವಿವರಗಳು ಸ್ಪಷ್ಟವಾಗಿಲ್ಲ.

ಪರ್ವೀನ್ ಬಾಬಿ ನಟ ಕಬೀರ್ ಬೇಡಿ ಅವರೊಂದಿಗೆ ಪ್ರಣಯ ಸಂಬಂಧ ಹೊಂದಿದ್ದರು. ಅವರ ಸಂಬಂಧವು ಹೆಚ್ಚು ಪ್ರಚಾರದಲ್ಲಿಯೂ ಇತ್ತು. ಪತ್ರಿಕೆಗಳಲ್ಲಿ ದೊಡ್ಡ ದೊಡ್ಡ ಸುದ್ದಿಯಾಗುತ್ತಿತ್ತು. 

Latest Videos

click me!