ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್: ಇದು ನಮ್ಮ ಸೀತಾ ಮಹಾಲಕ್ಷ್ಮೀನಾ ಅಂತಿದ್ದಾರೆ ಫ್ಯಾನ್ಸ್

Published : Apr 04, 2024, 09:45 AM IST

ಸೀತಾ ರಾಮಂ ಸಿನಿಮಾ ಮೂಲಕ ಸೌತ್ ಸಿನಿಮಾ ಇಂಡಸ್ಟಿಯಲ್ಲಿ ಜನಪ್ರಿಯತೆ ಪಡೆದ ಮೃಣಾಲ್ ಠಾಕೂರ್, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇದೀಗ ನಟಿ ಮೃಣಾಲ್ ಠಾಕೂರ್ ಮಸ್ತ್ ಫೋಟೋಸ್ ಶೇರ್ ಮಾಡಿದ್ದಾರೆ.

PREV
17
ವಿಭಿನ್ನ ಹೇರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ಮೃಣಾಲ್ ಠಾಕೂರ್: ಇದು ನಮ್ಮ ಸೀತಾ ಮಹಾಲಕ್ಷ್ಮೀನಾ ಅಂತಿದ್ದಾರೆ ಫ್ಯಾನ್ಸ್

ಟಾಲಿವುಡ್​ನಲ್ಲಿ ನಟಿ ಮೃಣಾಲ್ ಠಾಕೂರ್​ಗೆ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಸಿನಿಮಾ ಶೂಟಿಂಗ್, ಪ್ರಮೋಷನಲ್​​​ನಲ್ಲಿ ಬ್ಯುಸಿ ಆಗಿರುವ ನಟಿ  ಮೃಣಾಲ್ ಠಾಕೂರ್​ ಗ್ಲಾಮರಸ್‌​ ಫೋಟೋಶೂಟ್ ಮಾಡಿಸಿದ್ದಾರೆ.

27

ಮೃಣಾಲ್ ಠಾಕೂರ್ ಫ್ಯಾಷನ್‌ ಬಹಳ ಆಸಕ್ತಿಯನ್ನು ಹೊಂದಿದ್ದಾರೆ. ಇತ್ತೀಚೆಗೆ ಇವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿ ಅದ್ಭುತ ನೋಟ, ಟ್ರೆಂಡಿ ಹೊಸ ಕೇಶವಿನ್ಯಾಸದಿಂದ ಎಲ್ಲರೂ ತಿರುಗಿ ನೋಡುವಂತೆ ಮಾಡಿದ್ದಾರೆ.

37

ಈ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿ ಅಭಿಮಾನಿಗಳಿಗೆ ಮಸ್ತಿ ನೀಡಿದ್ದಾರೆ ಮೃಣಾಲ್‌ ಠಾಕೂರ್‌. ಡಿಸೈನರ್‌ ಬ್ರಾಂಡ್‌ ಮಡೋನಾ ಸಂಗ್ರಹದ ಚಿಕ್‌ ಉಡುಗೆಯಲ್ಲಿ ಮೃಣಾಲ್ ಗ್ಲಾಮರಸ್‌ ಆಗಿ ಕಾಣಿಸಿದ್ದಾರೆ.

47

ಮೃಣಾಲ್ ಧರಿಸಿರುವ ಉಡುಗೆಗಳಲ್ಲಿ ಮನಮೋಹಕ ಕಪ್ಪು ಬ್ಲೇಜರ್‌ ಆಕರ್ಷಕವಾಗಿತ್ತು. ಬೂದು ಬಣ್ಣದ ಆರ್ಗಾಂಜಾ ಫ್ಲೇರ್ಡ್ ಸ್ಕರ್ಟ್ ಕೂಡ ಧರಿಸಿದ್ದರು. ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಶೀಫಾ ಗಿಲಾನಿ ಅವರ ಸಹಾಯದಿಂದ ಮೃಣಾಲ್ ತನ್ನ ಸೌಂದರ್ಯ ಹೆಚ್ಚಿಸಿಕೊಂಡಿದ್ದರು. 

57

ಕಿವಿಗೆ ಒಂದು ಜೋಡಿ ಬೆಳ್ಳಿಯ ಸ್ಟೇಟ್‌ಮೆಂಟ್‌ ಕಿವಿಯೋಲೆ ಧರಿಸಿದ್ದರು. ಬೆರಳಿಗೆ ಆಕರ್ಷಕ ಉಂಗುರಗಳನ್ನು ಧರಿಸಿದ್ದರು. ಈ ಉಡುಗೆಗೆ ಸೂಕ್ತವಾದ ಹೈಹೀಲ್ಡ್‌ ಧರಿಸಿದ್ದಾರೆ. ಹೇರ್ ಸ್ಟೈಲಿಸ್ಟ್ ಸ್ವಪ್ನಿಲ್ ಕಾಶಿದ್ ಅವರು ಮೃಣಾಲ್ ಠಾಕೂರ್‌ಗೆ ಸುಂದರವಾದ ಕೇಶವಿನ್ಯಾಸ ಮಾಡಿದ್ದಾರೆ. 

67

ಭುಜಗಳ ಮೇಲೆ ಹರಡುವಂತಹ ಕೇಶವಿನ್ಯಾಸ ಮತ್ತು ಮುಂಭಾಗದಲ್ಲಿ ಕ್ಯೂಟ್‌ ಆಗಿ ಕತ್ತರಿಸಿದ ಕೂದಲುಗಳು ನಟಿಯ ಅಂದ ಹೆಚ್ಚಿಸಿವೆ. ಮೇಕಪ್ ಕಲಾವಿದ ಲೋಚನ್ ಅವರ ಸಹಾಯದಿಂದ, ಮೃಣಾಲ್ ತನ್ನ ಮುಖದ ಅಂದ ಹೆಚ್ಚಿಸಿಕೊಂಡಿದ್ದಾರೆ.

77

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮೃಣಾಲ್ ಠಾಕೂರ್ ಫೋಟೋಸ್ ವೈರಲ್‌ ಆಗಿದ್ದು, ನೆಟ್ಟಿಗರಿಂದ ಲೆಕ್ಸ್‌ಗಳ ಸುರಿಮಳೆಯಾಗಿದೆ. ಜೊತೆಗೆ ನಾನಾ ರೀತಿಯ ಕಮೆಂಟ್‌ಗಳನ್ನು ಸಹ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories