ನಾನು ಶ್ರೀಮಂತ ಕುಟುಂಬದಿಂದ ಬಂದಿಲ್ಲ. ಬಾಲಿವುಡ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನನಗೆ ಅರ್ಥವಾಗುವುದಿಲ್ಲ. ಇಲ್ಲಿನ ಆರಂಭಿಕ ದಿನಗಳಲ್ಲಿ ನನ್ನ ಬಡತನಕ್ಕಾಗಿ ನನ್ನನ್ನು ಜಡ್ಜ್ ಮಾಡಲಾಗುತ್ತಿತ್ತು- ಹೀಗೆಂದು ಹೇಳಿದ್ದಾರೆ ಪರಿಣೀತಿ ಚೋಪ್ರಾ.
ಅಮರ್ ಸಿಂಗ್ ಚಮ್ಕಿಲಾ ನಟಿಯು, ಬಾಲಿವುಡ್‌ನ ಆರಂಭಿಕ ದಿನಗಳಲ್ಲಿ ಫಿಟ್ನೆಸ್ ಟ್ರೇನರ್‌ಗೆ ತಿಂಗಳಿಗೆ 4 ಲಕ್ಷ ರೂ. ಕೊಡಲು ತನ್ನ ಬಳಿ ಹಣವಿರಲಿಲ್ಲ ಎಂದಿದ್ದಾರೆ. ಈ ಮಾತು ಕೇಳಿದಾಗ ಸಹನಟನೊಬ್ಬ, ಹಾಗಿದ್ದಲ್ಲಿ ನೀನು ಬಾಲಿವುಡ್‌ಗೆ ಬರಬಾರದಿತ್ತು ಎಂದಿದ್ದನಂತೆ!
'ನಾನು ತುಂಬಾ ಶ್ರೀಮಂತ ಹಿನ್ನೆಲೆಯಿಂದ ಬಂದವಳಲ್ಲ. ನಾನು ನಿಜವಾಗಿ ತುಂಬಾ ಸರಳ, ಮಧ್ಯಮ ವರ್ಗದ ಹುಡುಗಿ. ಮುಂಬೈನಲ್ಲಿ ಜನರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದು ನನಗೆ ನಿಜವಾಗಿ ತಿಳಿದಿಲ್ಲ. ನಾನು ಶ್ರೀಮಂತ ಸ್ನೇಹಿತರನ್ನು ಹೊಂದಿಲ್ಲ' ಎಂದು ನಟಿ ಹೇಳಿದ್ದಾರೆ.
'ನನ್ನ ಬಳಿ ತರಬೇತುದಾರ, ಸ್ಟೈಲಿಸ್ಟ್ ಇಲ್ಲ. ಮತ್ತು ಈಗಾಗಲೇ ಇಲ್ಲಿಂದ ಬಂದವರು ಮತ್ತು ಈಗಾಗಲೇ ಈ ಜಗತ್ತನ್ನು ತಿಳಿದಿರುವ ಜನರು ನನ್ನನ್ನು ಬಹಳಷ್ಟು ನಿರ್ಣಯಿಸಿದ್ದಾರೆ' ಎಂದು ನಟಿ ಹೇಳಿದ್ದಾರೆ.
ಬಾಲಿವುಡ್‌ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸೋದರ ಸಂಬಂಧಿಯಾಗಿರುವ ಪರಿಣೀತಿ ಚೋಪ್ರಾ ಈ ರೀತಿ ಹೇಳಿರುವುದು ಅಚ್ಚರಿ ಮೂಡಿಸಿದೆ.
'ನನ್ನ ಮೊದಲ ಚಿತ್ರಕ್ಕೆ (ಲೇಡೀಸ್ ವರ್ಸಸ್ ರಿಕಿ ಬಹ್ಲ್) ₹ 5 ಲಕ್ಷ ಸಂಭಾವನೆ ಪಡೆದಿದ್ದೇನೆ. ಅದನ್ನಿಟ್ಟುಕೊಂಡು ಫಿಟ್ನೆಸ್ ಟ್ರೇನರ್, ಡಯಟಿಶಿಯನ್ ಪಡೆದುಕೊಳ್ಳುವುದು ದೂರದ ಮಾತೇ ಸರಿ' ಎಂದಿರುವ ನಟಿ ಸುಮಾರು 5 ಚಿತ್ರಗಳಲ್ಲಿ ನಟಿಸುವವರೆಗೆ ತಾವಂದುಕೊಂಡಿದ್ದನ್ನು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ನೆನೆದಿದ್ದಾರೆ.
ನಟಿ ಏನು ಧರಿಸಬೇಕೆಂದು ಜನರು ಸೂಚಿಸುವ ಸಮಯವನ್ನು ನೆನಪಿಸಿಕೊಂಡ ಪರಿಣೀತಿ, ಅವುಗಳ್ಯಾವುದನ್ನೂ ತನಗೆ ಕೊಳ್ಳಲಾಗುತ್ತಿರಲಿಲ್ಲ. ಮತ್ತು ಇದಕ್ಕಾಗಿ ಜನ ತನ್ನನ್ನು ಜಜ್ ಮಾಡುತ್ತಿದ್ದರು ಎಂದಿದ್ದಾರೆ.
ಫಿಗರಿಂಗ್ ಔಟ್ ವಿತ್ ರಾಜ್ ಶಾಮಾನಿ ಪಾಡ್‌ಕ್ಯಾಸ್ಟ್‌ನಲ್ಲಿ ನಟಿಯು ಈ ಮಾತುಗಳನ್ನು ಆಡಿದ್ದು, ಬಾಲಿವುಡ್‌ನಲ್ಲಿ ಸ್ಥಾನ ಕಂಡುಕೊಳ್ಳುವುದು ಸವಾಲಿನ ವಿಷಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಸಧ್ಯ ನಟಿಯ ಅಮರ್ ಸಿಂಗ್ ಚಮ್ಕೀಲಾ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಓಡುತ್ತಿದ್ದು, ಅಭಿನಯಕ್ಕಾಗಿ ಉತ್ತಮ ಪ್ರಶಂಸೆಗಳು ಹರಿದು ಬರುತ್ತಿವೆ.