ಅಂಥಾ ಸೀನ್ ಅಲ್ಲಿ ಮಾಡಿದ್ರೆ ಅಪ್ಪಅಮ್ಮ ಬೈತಾರಂತ ಸುಮಾರು ಚಿತ್ರ ಕಳ್ಕೊಂಡ ನಟಿ, ಕಡೆಗೇನು ಮಾಡಿದ್ರು?

First Published | Apr 28, 2024, 2:19 PM IST

ಇಂಟಿಮೇಟ್ ಸೀನ್‌ಗಳಿರೋ ಚಿತ್ರಗಳಲ್ಲಿ ಮಾಡಿದ್ರೆ ಅಪ್ಪ ಅಮ್ಮನಿಗೆ ಕೋಪ ಬರುತ್ತೆ ಅಂತ ಹೆದರಿ ಬಹಳಷ್ಟು ಒಳ್ಳೆಯ ಚಿತ್ರಗಳನ್ನು ಕಳೆದುಕೊಂಡರಂತೆ ಈ ನಟಿ. ಕಡೆಗೂ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗುತ್ತಿರೋ ಈ ನಟಿ ತಂದೆತಾಯಿಯ ಮನವೊಲಿಸಿದ್ದು ಹೇಗೆ?

ಸಿನಿಮಾದಲ್ಲಿ ನಾಯಕಿ ಪಾತ್ರ ಎಂದ ಮೇಲೆ ಕೊಂಚ ರೊಮ್ಯಾನ್ಸ್, ಕಿಸ್ಸಿಂಗ್ ಸೀನ್ ಮತ್ತಷ್ಟು ಹಾಟ್ ದೃಶ್ಯಾವಳಿಗಳಲ್ಲಿ ಮಾಡಬೇಕಿರುವುದು ಈಗಂತೂ ಸರ್ವೇಸಾಮಾನ್ಯ.

ಈ ಕಾರಣಕ್ಕಾಗಿಯೇ ಹಲವಾರು ಹೆಣ್ಣುಮಕ್ಕಳು ಸಿಕ್ಕ ಅವಕಾಶ ಕೈ ಚೆಲ್ಲಿ ಕೂರುತ್ತಾರೆ. ಅವರಲ್ಲೊಬ್ಬರಾಗಿದ್ದರಂತೆ ನಟಿ ಮೃಣಾಲ್ ಠಾಕೂರ್. 

Tap to resize

ಇಂಟಿಮೇಟ್ ದೃಶ್ಯಗಳಲ್ಲಿ ನಟಿಸಿದ್ರೆ ತಂದೆತಾಯಿಗೆ ಕೋಪ ಬರುತ್ತೆ ಅಂತ ಹೆದರಿ ಸಾಕಷ್ಟು ಅವಕಾಶಗಳನ್ನು ದೂರ ತಳ್ಳಿದರಂತೆ. ಇದೇ ರೀತಿ ಆಗುತ್ತಾ ಅವರ ನಟಿಯಾಗುವ ಕನಸು ದೂರಾಗುತ್ತಾ ಬಂದಂತೆಲ್ಲ ಅವರಿಗೆ ಭಯ ಶುರುವಾಯಿತು. 

ಎಷ್ಟು ದಿನ ಹೀಗೇ ಬೇಡ ಎನ್ನುತ್ತಾ ಕೂರುವುದು ಎನಿಸುತ್ತಲೇ ತಂದೆತಾಯಿಯನ್ನು ಕೂರಿಸಿಕೊಂಡು ನಟಿ ಮಾತನಾಡಿದರಂತೆ, 'ಅಪ್ಪಾ, ಒಬ್ಬ ನಟಿಯಾಗಿ ಕೆಲವೊಮ್ಮೆ ಚುಂಬನ ದೃಶ್ಯವಿದ್ದರೆ ನಾನದನ್ನು ಮಾಡಬೇಕಾಗುತ್ತದೆ. ಏಕೆಂದರೆ ಅದು ಬೇಡಿಕೆಯಾಗಿರುತ್ತದೆ. ಆದರೆ, ಆ ಒಂದು ಭಾಗದಲ್ಲಿ ಮಾಡುವುದಿಲ್ಲ ಎಂದು ನಾನು ಇಡೀ ಚಿತ್ರವನ್ನೇ ಕಳೆದುಕೊಳ್ಳುತ್ತಿದ್ದೇನೆ' ಎಂದರಂತೆ.

ಮುಂದುವರಿದು, 'ನಿಮಗೆ ಬೇಡ ಅಂದರೆ ಮಾಡುವುದಿಲ್ಲ. ನೀವು ಅದರ ಬಗ್ಗೆ ಮಾತನಾಡಬಹುದು. ಆದರೆ, ನಾನು ಇದರಿಂದ ಎಲ್ಲ ಅವಕಾಶಗಳನ್ನು ಕಳೆದುಕೊಳ್ಳುತ್ತಿದ್ದೇನೆ' ಎಂದರಂತೆ. ಕಡೆಗೂ ಅವರ ಪೋಷಕರು ಒಪ್ಪಿಗೆ ಕೊಟ್ಟರಂತೆ.

ಇನ್ನು ಪಾಪಾರಾಜಿಗಳು ವಿವಿಧ ಕೋನಗಳಿಂದ ಫೋಟೋ ತೆಗೆಯುವ ಬಗ್ಗೆ ತಮಗೆ ಹಿಂಸೆಯಾಗುತ್ತದೆ ಎಂದಿರುವ ನಟಿ, ಈ ಬಗ್ಗೆ ಕೆಲ ಪಾಪಾರಾಜಿಗಳ ಜೊತೆ ಮಾತಾಡಿದ್ದೇನೆ. ವೃತ್ತಿಯನ್ನು ಗೌರವಿಸುವ ಕೆಲವರು ಅರ್ಥ ಮಾಡಿಕೊಳ್ಳುತ್ತಾರೆ, ಹಾಗೆ ಎಲ್ಲ ಕೋನಗಳಿಂದ ಫೋಟೋ ತೆಗೆಯಲು ಹೋಗುವುದಿಲ್ಲ ಎಂದಿದ್ದಾರೆ. 

ಹೀಗೆ ಪಾಪಾರಾಜಿಗಳು ತಮ್ಮ ಟಿಆರ್‌ಪಿಗಾಗಿ ಮಾಡುವ ತಪ್ಪಿಗಾಗಿ ನಮ್ಮ ವೃತ್ತಿ ಮೇಲೆ ಆಪ್ತ ಬಳಗದವರ ಗೌರವ ಕಡಿಮೆಯಾಗುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ನಟಿ ಹೇಳಿದ್ದಾರೆ. 

ಮೃಣಾಲ್ ಠಾಕೂರ್ ದೂರದರ್ಶನದೊಂದಿಗೆ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಜನಪ್ರಿಯ ಧಾರಾವಾಹಿ ಕುಂಕುಮ್ ಭಾಗ್ಯದಲ್ಲಿ ಕೆಲಸ ಮಾಡಿದ್ದಾರೆ. ನಂತರ ಅವರು 2014 ರಲ್ಲಿ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. 

ಮೃಣಾಲ್ ತನ್ನ ಪ್ರತಿಯೊಂದು ಪ್ರಾಜೆಕ್ಟ್‌ಗಳಲ್ಲಿ ತನ್ನ ಶಕ್ತಿ ತುಂಬಿದ ಮತ್ತು ಬಹುಮುಖ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಿದ್ದಾರೆ. ಅವರು ಸೂಪರ್ 30, ಸೀತಾ ರಾಮಮ್, ಜೆರ್ಸಿ, ಲಸ್ಟ್ ಸ್ಟೋರೀಸ್ 2, ಮೇಡ್ ಇನ್ ಹೆವೆನ್ 2 ಮತ್ತು ಇನ್ನೂ ಅನೇಕ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 

ಮೃಣಾಲ್ ಕೊನೆಯದಾಗಿ ವಿಜಯ್ ದೇವರಕೊಂಡ ಜೊತೆ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಪೂಜಾ ಮೇರಿ ಜಾನ್, ವಿಶ್ವಂಬರ, ಬಾಹುಬಲಿ: ಬಿಫೋರ್ ದಿ ಬಿಗಿನಿಂಗ್, STR48 ಮತ್ತು ಹೆಚ್ಚಿನವುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ನಟಿ ತಮ್ಮ ಕಾಲೇಜಿನ ದಿನಗಳಲ್ಲಿಯೇ ಧಾರಾವಾಹಿ ನಟನೆಗೆ ಇಳಿಯಬೇಕೆಂದಾಗ ತಿಂಗಳ 30 ದಿನವೂ ಶೂಟಿಂಗ್ ಇರುತ್ತದೆ ಎಂದಾಗ ಆಕೆಯ ತಂದೆ ನೋ ಎಂದಿದ್ದರಂತೆ. ಆಗ ಕೂಡಾ ನಟಿ, ಅಪ್ಪಾ, ನಾನು ಪ್ರತಿ ಕತೆ, ಚಲನಚಿತ್ರದ ಸ್ಕ್ರಿಪ್ಟ್ ನಿಮ್ಮ ಬಳಿ ಚರ್ಚಿಸಿಯೇ ಮುಂದುವರಿಯುತ್ತೇನೆ, ನೀವು ಬೇಡ ಅಂದರೆ ಮಾಡುವುದಿಲ್ಲ ಎಂದು ಹೇಳಿದರಂತೆ. 

ಆಗ ಒಪ್ಪಿದ ತಂದೆ, ನಂತರ ನಟಿ ಹಾಜರಾತಿ ಇಲ್ಲದೆ, 5ನೇ ಸೆಮಿಸ್ಟರ್‌ನಲ್ಲಿ ಡಿಸ್‌ಕ್ವಾಲಿಫೈ ಆದಾಗಲೂ ಮಗಳೊಂದಿಗೆ ನಿಂತರು ಎಂದು ನಟಿ ಹೇಳಿದ್ದಾರೆ. 

Latest Videos

click me!