ಶಾಹಿದ್ ಕಪೂರ್ ತಂದೆ Pankaj Kapoor ಅವರ ತಾಯಿಯಿಂದ ಬೇರೆಯಾಗಿದ್ದೇಕೆ?

First Published May 28, 2022, 4:08 PM IST

ತಮ್ಮ ಅದ್ಬುತ ಅಭಿನಯಕ್ಕೆ ಹೆಸರಾಗಿರುವ ಬಾಲಿವುಡ್‌ ನಟ ಪಂಕಜ್ ಕಪೂರ್ (Pankaj Kapoor) ಮೇ 29 ರಂದು ತಮ್ಮ 68 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಪಂಕಜ್ 1954 ರಲ್ಲಿ ಪಂಜಾಬ್‌ನ ಲುಧಿಯಾನಾದಲ್ಲಿ ಜನಿಸಿದರು. ಪಂಕಜ್ ಅವರು ಬಾಲಿವುಡ್ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿದರು ಆದರೆ ಟಿವಿ ಧಾರಾವಾಹಿಗಳಲ್ಲಿ ತಮ್ಮ ಅತ್ಯುತ್ತಮ ಅಭಿನಯವನ್ನು ನೀಡಿದರು. ಅಂದಹಾಗೆ,  ಅವರು ತಮ್ಮ ಜೀವನದಲ್ಲಿ ಎರಡು ಮದುವೆಗಳನ್ನು ಮಾಡಿದರು. ಅವರ ಮೊದಲ ಪತ್ನಿ ನೀಲಿಮಾ ಅಜೀಂ, ಅವರು ವಿಚ್ಛೇದನ ಪಡೆದಿದ್ದಾರೆ ಮತ್ತು ಅವರ ಪತ್ನಿ ಸುಪ್ರಿಯಾ ಪಾಠಕ್. ನೀಲಿಮಾ ಮತ್ತು ಪಂಕಜ್‌  ದಂಪತಿಗೆ ಶಾಹಿದ್ ಕಪೂರ್ (Shahid Kapoor) ಎಂಬ ಮಗನಿದ್ದಾನೆ. ಪಂಕಜ್ ಕಪೂರ್ ಅವರ ಮೊದಲ ಹೆಂಡತಿಯಿಂದ ದೂರವಾಗಲು ಕಾರಣವೇನು ಗೊತ್ತಾ?

ಎನ್‌ಎಸ್‌ಡಿಯಿಂದ ಪದವಿ ಪಡೆದ ನಂತರ, ಪಂಕಜ್ ಕಪೂರ್ ಅವರು ಗಾಂಧಿ ಸಿನಿಮಾದಲ್ಲಿ ನಟಿಸುವವರೆಗೆ  ಸುಮಾರು 4 ವರ್ಷಗಳ ಕಾಲ ರಂಗಭೂಮಿಯಲ್ಲಿ ಕೆಲಸ ಮಾಡಿದರು. ಒಂದೆಡೆ ಕಿರುತೆರೆ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರೆ, ಮತ್ತೊಂದೆಡೆ ಸಿನಿಮಾಗಳಲ್ಲೂ ತಮ್ಮ ಅಭಿನಯವನ್ನು ತೋರಿಸಿದ್ದಾರೆ.

 ಅವರು 21 ವರ್ಷ ವಯಸ್ಸಿನವರಾಗಿದ್ದಾಗ, ಅವರ ಹೃದಯವು 16 ವರ್ಷದ ನೀಲಿಮಾ ಅಜೀಮ್ ಅವರಿಗೆ ಸೋತಿತ್ತು. ಇಬ್ಬರೂ ಒಟ್ಟಿಗೆ ರಂಗಭೂಮಿ ಮಾಡುತ್ತಿದ್ದರು. ಇಬ್ಬರೂ ಪರಸ್ಪರ ಹತ್ತಿರವಾದರು ಮತ್ತು 1979ರಲ್ಲಿ ಇಬ್ಬರೂ ವಿವಾಹವಾದರು. ಮದುವೆಯ ನಂತರ ಶಾಹಿದ್ ಕಪೂರ್ 1981 ರಲ್ಲಿ ಜನಿಸಿದರು.

ನಂತರ 1984 ರಲ್ಲಿ ಇಬ್ಬರೂ ವಿಚ್ಛೇದನ ಪಡೆದರು. ಈ ವಿಚ್ಛೇದನವು ನೀಲಿಮಾಳ ಇಡೀ ಜೀವನವನ್ನು ಬೆಚ್ಚಿಬೀಳಿಸಿತು. ಪಂಕಜ್ ಕಪೂರ್‌ನಿಂದ ವಿಚ್ಛೇದನದ 36 ವರ್ಷಗಳ  ನಂತರ, ನೀಲಿಮಾ ಅಜೀಮ್ ತನ್ನ ಜೀವನಕ್ಕೆ ಸಂಬಂಧಿಸಿದ ಕೆಲವು ವಿಷಯ ಬಹಿರಂಗಪಡಿಸಿದರು.

ನಾನು ಎಂದಿಗೂ ಬೇರ್ಪಡಲು ಬಯಸಲಿಲ್ಲ ಆದರೆ ಬಹುಶಃ ಅವರು ಜೀವನದಲ್ಲಿ ಮುಂದುವರಿಯಲು ಬಯಸಿದ್ದರು ಎಂದು  ನೀಲಿಮಾ ಅಜೀಮ್  ಸಂದರ್ಶನದಲ್ಲಿ ಹೇಳಿದ್ದರು ನನ್ನ ವಿಚ್ಛೇದನದಂತಹ ವಿಷಯವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟಕರವಾಗಿತ್ತು ಮತ್ತು ನಾನು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ನಾವು ದೀರ್ಘಕಾಲ ಒಟ್ಟಿಗೆ ವಾಸಿಸುತ್ತಿದ್ದೆವು, ಆದರೆ ವಿಚ್ಛೇದನದೊಂದಿಗೆ ಎಲ್ಲವೂ ಮುಗಿದಿದೆ. ಎಂದು ಅವರು ಹೇಳಿದ್ದರು.
 

ನಾವು ಬೇರ್ಪಟ್ಟಾಗ ಶಾಹಿದ್ ಕೇವಲ 3 ವರ್ಷ ವಯಸ್ಸಿನವನಾಗಿದ್ದನು.  ನಾನು ಅವನನ್ನು ಒಬ್ಬಂಟಿಯಾಗಿ ಬೆಳೆಸಿದೆ ಮತ್ತು ನನ್ನನ್ನು ಮರಳಿ ಟ್ರ್ಯಾಕ್ ತರಲು  ಕುಟುಂಬ ಮತ್ತು ಸ್ನೇಹಿತರ ಸಹಾಯವನ್ನು ಪಡೆದುಕೊಂಡೆ. ನಾನು ಬೆಳೆದಾಗ, ಶಾಹಿದ್ ನನ್ನ ಶಕ್ತಿಯಾದನು ಮತ್ತು ಯಾವಾಗಲೂ ನನ್ನನ್ನು ಬೆಂಬಲಿಸಿದನು.

ಪಂಕಜ್ ಕಪೂರ್ ಅವರು 1982 ರ ಆರೋಹನ್ ಚಲನಚಿತ್ರದಿಂದ ಪಂಕಜ್ ಕಪೂರ್ ಅವರ ವೃತ್ತಿಯನ್ನು ಪ್ರಾರಂಭಿಸಿದರು. ಅದೇ ವರ್ಷದಲ್ಲಿ ಅವರು ಗಾಂಧಿ ಚಿತ್ರದಲ್ಲೂ ಕೆಲಸ ಮಾಡಿದರು. ನಂತರ ಅವರು ಮಂಡಿ, ಜಾನೇ ಭಿ ದೋ ಯಾರೋ, ಮೋಹನ್ ಜೋಶಿ ಹಜಾರ್ ಹೋ, ಖಾಮೋಶ್ ಚಿತ್ರಗಳಲ್ಲಿ ಕೆಲಸ ಮಾಡಿದರು.

ಕೆಲವು ಚಿತ್ರಗಳಲ್ಲಿ ಕೆಲಸ ಮಾಡಿದ ನಂತರ, 1986 ರಲ್ಲಿ, ಅವರು ಟಿವಿ  ಧಾರಾವಾಹಿಗಳಲ್ಲಿ ಕೆಲಸ ಮಾಡಲು ಮನಸ್ಸು ಮಾಡಿದರು. ಅವರು ಕರಮಚಂದ್ ಎಂಬ ಪತ್ತೇದಾರಿ ಧಾರಾವಾಹಿಯಲ್ಲಿ ಕೆಲಸ ಮಾಡಿದರು ಮತ್ತು ಇದರಿಂದಾಗಿ  ಪ್ರಸಿದ್ಧರಾದರು. ಇದಲ್ಲದೇ ಆಫೀಸ್ ಆಫೀಸ್, ನೀಮ್ ಕಾ ಪೇಡ್ ಮುಂತಾದ ಧಾರಾವಾಹಿಗಳಲ್ಲೂ ಕೆಲಸ ಮಾಡಿದ್ದಾರೆ.
 

click me!