ಪಾನಿ ಪುರಿ ಸವಿದ ಆಮೀರ್ ಖಾನ್; ಸೆಲ್ಫಿಗಾಗಿ ಮುಗಿದ್ದ ಫ್ಯಾನ್ಸ್

First Published | May 28, 2022, 4:03 PM IST

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು ಆಮೀರ್ ಖಾನ್ ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ಸೆಟ್ಟೇರಿದಾಗಿನಿಂದ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿದ್ದು ಆಮೀರ್ ಖಾನ್ ನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಸಿನಿಮಾದ ಬಗ್ಗೆ ಅಪ್ ಡೇಟ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದರು. ಇದೀಗ ಚಿತ್ರದ ಟ್ರೈಲರ್ ರಿಲೀಸ್ ಮಾಡಲು ಸಿನಿಮಾತಂಡ ತಯಾರಿ ನಡೆಸಿದೆ. ಅಂದಹಾಗೆ ಟ್ರೇಲರ್ ರಿಲೀಸ್‌ಗೆ ಆಮೀರ್ ಖಾನ್ ಆಂಡ್ ತಂಡ ಭರ್ಜರಿ ಪ್ಲಾನ್ ಮಾಡಿದೆ. ಐಪಿಲ್ ಫೈನಲ್‌ನಲ್ಲಿ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದೆ.

Tap to resize

ಅಂದಹಾಗೆ ಆಮೀರ್ ಖಾನ್ ಇತ್ತೀಚಿಗಷ್ಟೆ ಲಾಲ್ ಸಿಂಗ ಚಡ್ಡಾ ಸಿನಿಮಾದ ಟ್ರೈಲರ್ ಪೂರ್ವ ವೀಕ್ಷಣೆ ಈವೆಂಟ್ ಹಮ್ಮಿಕೊಂಡಿದ್ದರು. ಅಲ್ಲಿ ಆಮೀರ್ ಖಾನ್ ರಸ್ತೆ ಬದಿ ಮಾರುವ ಪಾನಿ ಪುರಿ ಸವಿದು ಗಮನ ಸೆಳೆದರು.

ಆಮೀರ್ ಖಾನ್ ಪಾನಿ ಪುರಿ ತಿನ್ನುತ್ತಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಆದರೆ ಆಮೀರ್ ಖಾನ್ ಮಾತ್ರ ಪಾನಿ ಪುರಿ ತಿನ್ನುವುದರಲ್ಲಿ ಮುಳುಗಿದ್ದರು.

ಐಪಿಎಲ್ ಫೈನಲ್ ಪಂದ್ಯದಲ್ಲಿ ಆಮೀರ್ ಖಾನ್ ತಮ್ಮ ಸಿನಿಮಾವನ್ನು ಪ್ರಚಾರ ಮಾಡುತ್ತಿದ್ದಾರೆ. ಬಿಡುಗಡೆಗೂ ಮೊದಲೂ ಆಮೀರ್ ಖಾನ್ ಇರ್ಫಾನ್ ಪಠಾಣ್ ಮತ್ತು ಹರ್ಭನ್ ಸಿಂಗ್ ಜೊತೆ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಅಂದಹಾಗೆ ಆಮೀರ್ ಖಾನ್ ನಟನೆಯ ಲಾಲ್ ಸಿಂಗ ಚಡ್ಡಾ ಸಿನಿಮಾದ ಟ್ರೈಲರ್ ಮೇ 29ರಂದು ರಿಲೀಸ್ ಆಗುತ್ತಿದೆ.

ಅಮೀರ್ ಖಾನ್ ಪ್ರೊಡಕ್ಷನ್ಸ್ ಮತ್ತು ಕಿರಣ್ ರಾವ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ನಿರ್ಮಿಸಿರುವ 'ಲಾಲ್ ಸಿಂಗ್ ಚಡ್ಡಾ' ಸಿನಿಮಾದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ಖಾನ್ ಮಿಂಚಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಮೋನಾ ಸಿಂಗ್ ಮತ್ತು ಚೈತನ್ಯ ಅಕ್ಕಿನೇನಿ ಕೂಡ ನಟಿಸಿದ್ದಾರೆ.

ಅಂದಹಾಗೆ ಲಾಲ್ ಸಿಂಗ್ ಚಡ್ಡಾ ಸಿನಿಮಾ ಹಾಲಿವುಡ್ ಸಿನಿಮಾದ ರಿಮೇಕ್ ಆಗಿದೆ. 1994ರಲ್ಲಿ ರಿಲೀಸ್ ಆಗಿದ್ದ ಟಾಮ್ ಹ್ಯಾಂಕ್ಸ್ ಕ್ಲಾಸಿಕ್ ಅವರ 'ಫಾರೆಸ್ಟ್ ಗಂಪ್' ಚಿತ್ರವನ್ನು ಹಿಂದೆಗೆ ತಂದಿದ್ದಾರೆ ಆಮೀರ್ ಖಾನ್. ಈ ಸಿನಿಮಾಗೆ ಆಮೀರ್ ಖಾನ್‌ಗೆ 'ಸೀಕ್ರೆಟ್ ಸೂಪರ್ ಸ್ಟಾರ್' ನಿರ್ದೇಶಿಸಿದ್ದ ಅದ್ವೈತ್ ಚಂದನ್ ಆಕ್ಷನ್ ಕಟ್ ಹೇಳಿದ್ದಾರೆ. ಬಹುನಿರೀಕ್ಷೆಯ ಚಿತ್ರವು ಆಗಸ್ಟ್ 11ರಂದು ಬಿಡುಗಡೆಯಾಗಲಿದೆ.

Latest Videos

click me!