ರಣವೀರ್ ಸಿಂಗ್‌ನಂತೆ ನಗ್ನ ಫೋಸ್ ನೀಡಿದ ಪಾಕ್ ಮಾಡೆಲ್‌: ಸುಮ್ಮನೆ ಬಿಡ್ತಾರಾ ಅಲ್ಲಿ ಮಂದಿ?

Published : Dec 15, 2022, 04:49 PM IST

ಕೆಲ ಸಮಯದ ಹಿಂದೆ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಬಟ್ಟೆ ಇಲ್ಲದೆ ನ್ಯೂಡ್‌ ಫೋಟೋಶೂಟ್ ಮಾಡಿ ಸಾಕಷ್ಟು ಟ್ರೋಲ್ ಆಗಿದ್ದರು. ಈಗ ಮತ್ತೊಮ್ಮೆ ಇನ್ನೊಬ್ಬರು ಅದೇ ಧೈರ್ಯ ಮಾಡಿದ್ದಾರೆ. ಈ ಬಾರಿ ಪಾಕಿಸ್ತಾನಿ ಮಾಡೆಲ್ ಒಬ್ಬರು ನ್ಯೂಡ್ ಫೋಟೋಶೂಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೀವ್ರವಾಗಿ ಟೀಕಿಸಲಾಗುತ್ತಿದೆ.

PREV
15
 ರಣವೀರ್ ಸಿಂಗ್‌ನಂತೆ ನಗ್ನ ಫೋಸ್ ನೀಡಿದ ಪಾಕ್ ಮಾಡೆಲ್‌: ಸುಮ್ಮನೆ ಬಿಡ್ತಾರಾ ಅಲ್ಲಿ ಮಂದಿ?

ಪಾಕಿಸ್ತಾನಿ ಮಾಡೆಲ್ ಹೆಸರು ಅಜ್ಮಲ್ ಖಾನ್. ರಣವೀರ್ ಸಿಂಗ್ ಅವರಂತೆ ಬಟ್ಟೆ ಇಲ್ಲದೆ ಫೋಟೋಶೂಟ್ ಮಾಡಿ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಪಾಕಿಸ್ತಾನಿ ಮಾಡೆಲ್ ಅಜ್ಮಲ್ ಖಾನ್ ಅವರ ಈ ಬೋಲ್ಡ್‌ ಫೋಟೋಗಳನ್ನು ಲಕ್ಸ್ ಸ್ಟೈಲ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆಶ್ನಾ ಖಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. 

25

ಫೋಟೋಗಳಲ್ಲಿ, ಅಜ್ಮಲ್ ಖಾನ್ ಅವರು ಕುರ್ಚಿ ಮೇಲೆ ಕುಳಿತಿದ್ದಾರೆ ಮತ್ತು ಅವರ ದೇಹದ ಮೇಲೆ ಯಾವುದೇ ಬಟ್ಟೆಯಿಲ್ಲದೆ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ. ವಿವಿಧ ಕೋನಗಳಿಂದ ಅವರ ಕಪ್ಪು ಮತ್ತು ಬಿಳಿ ಫೋಟೋಗಳನ್ನು ತೆಗೆದಿದ್ದಾರೆ.

35

ಪಾಕಿಸ್ತಾನಿ ಮಾಡೆಲ್‌ ಫೋಟೋಗಳಲ್ಲ್ಲಿ ರಣವೀರ್ ಸಿಂಗ್‌ಗಿಂತ ಕಡಿಮೆ ಕಾಣುತ್ತಿಲ್ಲ. ಡ್ಯಾಶಿಂಗ್ ಲುಕ್ ಹೊಂದಿರುವ ಮಾಡೆಲ್ ಫೋಟೋವನ್ನು ನೋಡಿದ ಮತಾಂಧರು ಕೋಪಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಜನರು ಫೋಟೋಗಳನ್ನು ಆಕ್ಷೇಪಾರ್ಹ ಎಂದು ಕರೆದಿದ್ದಾರೆ.

45

'ಇದು ಇನ್ನೊಬ್ಬ ರಣವೀರ್ ಸಿಂಗ್. ಇದು ಯಾವ ಅಹಂಕಾರ? ಅಕ್ಕಪಕ್ಕದವರನ್ನು ನಕಲು ಮಾಡದೇ ನಾವು ಬದುಕಲು ಸಾಧ್ಯವಿಲ್ಲವೇ?' ಎಂದು ಒಬ್ಬರು ಕಿಡಿಕಾರಿದ್ದಾರೆ  ಅದೇ ಹೊತ್ತಿಗೆ ‘ಏನು ಮಾಡೆಲಿಂಗ್ ಮಾಡುತ್ತಿದ್ದಾನೆ, ಮೈಮೇಲೆ ಬಟ್ಟೆ ಇಲ್ಲ’ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ ', ಜನರ  ಬಟ್ಟೆಗಳು  ಖಾಲಿಯಾಗವಷ್ಟು ದೇಶವು ಇನ್ನೂ ದುಬಾರಿಯಾಗಿಲ್ಲ ಎಂದು ಮತ್ತೊಂದು ಕಾಮೆಂಟ್‌ನಲ್ಲಿ ಬರೆಯಲಾಗಿದೆ. ಅದೇ ಹೊತ್ತಿಗೆ ಮತ್ತೊಬ್ಬರು ‘ಪಾಕಿಸ್ತಾನ ತೀರಾ ಬಡವಾಯ್ತು’ ಎಂದು ಬರೆದರೆ. ‘ನಾಚಿಕೆನ ಮಾರಾಟವಾಗಿದೆ’ ಎಂದು ಮಗದೊಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾನೆ.

55

ಬಾಲಿವುಡ್‌ ನಟ ರಣವೀರ್‌ಸಿಂಗ್ ಕೂಡ ಇಂಥದ್ದೊಂದು ಫೋಟೋಶೂಟ್ ಮಾಡಿದ್ದರು ಮತ್ತು ಬಳಿಕ ಅವರ ವಿರುದ್ಧ ಕೆಲ ಪ್ರಕರಣಗಳು ದಾಖಲಾಗಿದ್ದವು. , ಕೋಲ್ಕತ್ತಾ ಹೈಕೋರ್ಟ್‌ನಲ್ಲಿ ರಣವೀರ್ ವಿರುದ್ಧ ದೂರು ದಾಖಲಾಗಿತ್ತು. ಅಷ್ಟೇ ಅಲ್ಲ ಅವರ ವಿರುದ್ಧ ಸಾಕಷ್ಟು ಮೀಮ್ಸ್ ಕೂಡ ಮಾಡಲಾಗಿತ್ತು.  ರಣವೀರ್ ಸಿಂಗ್ ಮ್ಯಾಗಜೀನ್‌ವೊಂದಕ್ಕೆ ಬಟ್ಟೆ ಇಲ್ಲದೆ ಬೋಲ್ಡ್ ಫೋಟೋಶೂಟ್ ಮಾಡಿದ್ದರು..

Read more Photos on
click me!

Recommended Stories