ಕಾಂತಾರದಂತೆ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿರುವ ಕಡಿಮೆ ಬಜೆಟ್‌ ಸೌತ್‌ ಚಿತ್ರಗಳಿವು

First Published Dec 15, 2022, 3:10 PM IST

2022 ವರ್ಷ ಬಾಲಿವುಡ್‌ಗೆ ವಿಶೇಷವಲ್ಲ, ಆದರೆ ದಕ್ಷಿಣ ಚಲನಚಿತ್ರೋದ್ಯಮಕ್ಕೆ ವರ್ಷವು ತುಂಬಾ ಆದೃಷ್ಟಕರ  ಎಂದು ಸಾಬೀತಾಯಿತು. ಈ ವರ್ಷ ಸೌತ್‌ನ ಕಡಿಮೆ-ಬಜೆಟ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ದೊಡ್ಡ ಮೊತ್ತವನ್ನು ಗಳಿಸಿದವು. ಕನ್ನಡದ  ಚಿತ್ರ ಕಾಂತಾರ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತು. 15 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 397 ಕೋಟಿ ಬ್ಯುಸಿನೆಸ್ ಮಾಡಿದೆ. ಅಂದಹಾಗೆ, 20 ಕೋಟಿ ಬಜೆಟ್‌ನ ಸರ್ದಾರ್  104 ಕೋಟಿ ವ್ಯವಹಾರ ಮಾಡಿದೆ. ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಗಳಿಕೆ ಮಾಡಿದ ದಕ್ಷಿಣದ ಕಡಿಮೆ-ಬಜೆಟ್ ಚಿತ್ರಗಳ ವಿವರ ಇಲ್ಲಿದೆ.

ನಿಖಿಲ್ ಸಿದ್ಧಾರ್ಥ್ ಮತ್ತು ಅನುಪಮಾ ಪರಮೇಶ್ವರನ್ ಅಭಿನಯದ ಕಾರ್ತಿಕೇಯ 2, 16 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 120 ಕೋಟಿ ಬ್ಯುಸಿನೆಸ್ ಮಾಡಿದೆ. ಚಂದು ಮೊಂಡೇಟಿ ನಿರ್ದೇಶನದ ಈ ಚಿತ್ರದಲ್ಲಿ ಅನುಪಮ್ ಖೇರ್ ಕೂಡ ಪ್ರಮುಖ ಪಾತ್ರದಲ್ಲಿದ್ದರು.

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರ ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ತನ್ನ ಕೈಚಳಕ ತೋರಿಸಿದ್ದು ಎಲ್ಲರಿಗೂ ಗೊತ್ತೇ ಇದೆ. ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದಲ್ಲಿ ಕಿಶೋರ್, ಸಪ್ತಮಿ ಗೌಡ ಮತ್ತು ಪ್ರಮೋದ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. 15 ಕೋಟಿ ಬಜೆಟ್‌ನಲ್ಲಿ ತಯಾರಾದ ಚಿತ್ರ 397 ಕೋಟಿ ವ್ಯವಹಾರ ಮಾಡಿದೆ.

ನಿತ್ಯಾ ಮೆನನ್, ಧನುಷ್ ಮತ್ತು ಪ್ರಕಾಶ್ ರಾಜ್ ಅಭಿನಯದ ತಿರುಚಿತ್ತಂಬಲಂ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ನಿರ್ದೇಶಕ ಮಿತ್ರನ್ ಜವಾಹರ್ ಈ ಚಿತ್ರವನ್ನು 30 ಕೋಟಿ ಬಜೆಟ್‌ನಲ್ಲಿ ನಿರ್ಮಿಸಿದ್ದು, ಚಿತ್ರ 110 ಕೋಟಿ ವ್ಯವಹಾರ ಮಾಡಿದೆ.

ಪ್ರದೀಪ್ ರಂಗನಾಥನ್ ಮತ್ತು ಇವಾನಾ ಅಭಿನಯದ ಚಿತ್ರ ಲವ್ ಟುಡೇ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯಿತು. 5 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 70 ಕೋಟಿ ಗಳಿಸಿದೆ. ಚಿತ್ರವನ್ನು ಪ್ರದೀಪ್ ರಂಗನಾಥನ್ ನಿರ್ದೇಶಿಸಿದ್ದಾರೆ.

20 ಕೋಟಿ ಬಜೆಟ್‌ನಲ್ಲಿ ತಯಾರಾದ 777 ಚಾರ್ಲಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ವ್ಯಾಪಾರ ಮಾಡಿತು. ಕಿರಣರಾಜ್ ಕೆ ನಿರ್ಮಿಸಿದ ಈ ಚಿತ್ರ 150 ಕೋಟಿ ಗಳಿಸಿದೆ. ಸಂಗೀತಾ ಶೃಂಗೇರಿ, ರಾಜ್ ಬಿ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದರು.

ನಿರ್ದೇಶಕ ಪಿ.ಎಸ್.ಮಿತ್ರನ್ ಅವರ ಸರ್ದಾರ್ ಚಿತ್ರ ಕೂಡ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡಿತ್ತು. ರಾಶಿ ಖನ್ನಾ ಮತ್ತು ಕಾರ್ತಿ ಅಭಿನಯದ ಈ ಚಿತ್ರ 20 ಕೋಟಿ ಬಜೆಟ್‌ನಲ್ಲಿ ತಯಾರಾಗಿದ್ದು, ಚಿತ್ರ ಸುಮಾರು 104 ಕೋಟಿ ವ್ಯವಹಾರ ಮಾಡಿದೆ.

ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸೀತಾ ರಾಮನ್ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿತು. 30 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 91.4 ಕೋಟಿ ವ್ಯವಹಾರ ಮಾಡಿದೆ. ಈ ಚಿತ್ರವನ್ನು ಹನು ರಾಘವಪುಡಿ ನಿರ್ದೇಶಿಸಿದ್ದಾರೆ.

ನಿರ್ದೇಶಕ ಶಶಿ ಕಿರಣ್ ಟೀಕಾ ಅವರ ಮೇಜರ್ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಅಡಿವಿ ಶೇಶ್, ಸಾಯಿ ಮಂಜ್ರೇಕರ್, ಪ್ರಕಾಶ್ ರಾಜ್ ಅವರ ಚಿತ್ರ 32 ಕೋಟಿ ರೂ.ಗೆ ತಯಾರಾಗಿದ್ದು, ಸುಮಾರು 66 ಕೋಟಿ ವ್ಯವಹಾರ ಮಾಡಿದೆ.

click me!