ಪ್ರಿಯಾಂಕಾ ಚೋಪ್ರಾಗೆ ಭಯಾನಕ ನಟಿ, ಕಪ್ಪು ಉಪ್ಪು ಎಂದು ಪಾಕ್‌ ನಟ ಟೀಕೆ: ಪಾಕ್‌ ಹಾಸ್ಯ ನಟನಿಗೆ ಭಾರತೀಯ ಪೌರತ್ವ ಆಫರ್?

Published : Oct 03, 2023, 01:19 PM ISTUpdated : Oct 03, 2023, 01:25 PM IST

ಯೂಟ್ಯೂಬರ್ ನಾದಿರ್ ಅಲಿ ಅವರೊಂದಿಗೆ ಮಾತನಾಡುವಾಗ ಪಾಕಿಸ್ತಾನಿ ನಟ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾಳನ್ನು ಟೀಕಿಸಿದ್ದಾರೆ. ಹಾಗೂ ಮನೋಜ್ ತಿವಾರಿ ನನಗೆ ಭಾರತೀಯ ಪೌರತ್ವ ಕೊಡಿಸೋದಾಗಿ ಹೇಳಿದ್ರು ಎಂದು ಪಾಕ್‌ ಹಾಸ್ಯನಟ ಹೇಳಿದ್ದಾರೆ. 

PREV
17
ಪ್ರಿಯಾಂಕಾ ಚೋಪ್ರಾಗೆ ಭಯಾನಕ ನಟಿ, ಕಪ್ಪು ಉಪ್ಪು ಎಂದು ಪಾಕ್‌ ನಟ ಟೀಕೆ: ಪಾಕ್‌ ಹಾಸ್ಯ ನಟನಿಗೆ ಭಾರತೀಯ ಪೌರತ್ವ ಆಫರ್?

ಕಾಮಿಡಿ ಸರ್ಕಸ್ ಸೀಸನ್ 3 ರಲ್ಲಿ ಕಾಣಿಸಿಕೊಂಡಿದ್ದ ಪಾಕಿಸ್ತಾನಿ ಹಾಸ್ಯನಟ ಶಕೀಲ್ ಸಿದ್ದಿಕಿ, ತನಗೆ ಭಾರತೀಯ ಪೌರತ್ವ ನೀಡುವ ಆಫರ್‌ ನೀಡಿದ್ದರು. ಆದರೆ, ನಾನು ಅದನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ. ಯೂಟ್ಯೂಬರ್ ನಾದಿರ್ ಅಲಿ ಅವರೊಂದಿಗೆ ಮಾತನಾಡುವಾಗ ಶಕೀಲ್ ಸಿದ್ದಿಕಿ ಈ ಹೇಳಿಕೆ ನೀಡಿದ್ದಾರೆ. 
 

27

ಬಿಜೆಪಿ ಸಂಸದ, ನಟ ಮನೋಜ್‌ ತಿವಾರಿ ಅವರು ಭಾರತದಲ್ಲಿ ನೆಲೆಸುವಂತೆ ಕೇಳಿಕೊಂಡರು ಎಂದು ಪಾಕಿಸ್ತಾನಿ ಹಾಸ್ಯನಟ ಶಕೀಲ್ ಸಿದ್ದಿಕಿ ಹೇಳಿದ್ದಾರೆ. ಮನೋಜ್ ತಿವಾರಿ ಅವರು ಭಾರತಕ್ಕೆ ಬರಲು ನನ್ನನ್ನು ಕೇಳಿದರು ಮತ್ತು ಅವರು ಎಲ್ಲವನ್ನೂ ವ್ಯವಸ್ಥೆಗೊಳಿಸುವುದಾಗಿ ಹೇಳಿದರು. ಆದರೆ ನಾನು ನನ್ನ ಸ್ವಂತ ತಾಯಿಗೆ ನಿಷ್ಠನಾಗಿರದಿದ್ದರೆ ನಾನು ನಿಮ್ಮ ತಾಯಿಗೆ ಹೇಗೆ ನಿಷ್ಠನಾಗಿರುತ್ತೇನೆ ಎಂದು ಹೇಳಿದೆ ಎಂದು ಹೇಳಿಕೊಂಡಿದ್ದಾರೆ.  “ಪರಸ್ಪರ ತಾಯಿಯನ್ನು ಗೌರವಿಸುವುದು ಮತ್ತು ವಂದಿಸುವುದು ಒಳ್ಳೆಯದು ಎಂದು ನಾನು ಹೇಳಿದೆ. ನಾವು ಪರಸ್ಪರರ ರಾಷ್ಟ್ರ ಮತ್ತು ಧರ್ಮವನ್ನು ಗೌರವಿಸಬೇಕು ಎಂದೂ ಅವರು ಹೇಳಿದ್ದಾರೆ.
 

37

ಇನ್ನೊಂದೆಡೆ, ಭಾರತ ಮತ್ತು ಪಾಕಿಸ್ತಾನದಲ್ಲಿ ನಟರು ಮತ್ತು ಹಾಸ್ಯನಟರಿಗೆ ನೀಡುವ ಹಣದ ಬಗ್ಗೆ ಹೋಲಿಸಿದಾಗ, "ಅದನ್ನು ಬಿಡಿ ಸಹೋದರ, ಬಹಳ ವ್ಯತ್ಯಾಸವಿದೆ" ಎಂದೂ  ಪಾಕಿಸ್ತಾನಿ ಹಾಸ್ಯನಟ ಶಕೀಲ್ ಸಿದ್ದಿಕಿ ಹೇಳಿದ್ದಾರೆ.  

47

ಪ್ರಿಯಾಂಕಾ ಚೋಪ್ರಾ ಕರಿ ಉಪ್ಪು: ಖ್ಯಾತ ನಟಿ ಮೇಲೆ ಜನಾಂಗೀಯ ನಿಂದನೆ
 
ಇನ್ನು, ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅಮೀಶಾ ಪಟೇಲ್ ಅವರನ್ನು ಗೇಲಿ ಮಾಡಿ ಪಾಕಿಸ್ತಾನಿ ನಟ ಮೊಅಮ್ಮರ್ ರಾಣಾ ಮತ್ತು ಯೂಟ್ಯೂಬರ್ ನಾದಿರ್ ಅಲಿ ವಿವಾದವನ್ನು ಹುಟ್ಟುಹಾಕಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ ಮೇಲೆ ಜನಾಂಗೀಯ ನಿಂದನೆ ಮಾಡಿದ್ದು, ನಟಿಯನ್ನು ಕಾಲಾ ನಮಕ್ ಅಂದರೆ ಕರಿ ಉಪ್ಪು ಎಂದು ಕರೆದಿದ್ದಾರೆ.' 

57

ಹಾಗೂ, ನಟಿಯೊಬ್ಬರಿಗೆ ‘ಭಯಾನಕ’ ಎಂದು ಹೆಸರಿಸುವಂತೆ ಯೂಟ್ಯೂಬರ್ ನಾದಿರ್ ಪಾಕ್‌ ನಟನನ್ನು ಕೇಳಿದಾಗ, ಅವರು ಪ್ರಿಯಾಂಕಾ ಚೋಪ್ರಾ ಎಂದಿದ್ದು,  ಅಮೀಶಾ ಪಟೇಲ್ ಅನ್ನು ಸುಂದರಿ ಎಂದೂ ಉಲ್ಲೇಖಿಸಿದ್ದಾರೆ. 

67

ಪ್ರಿಯಾಂಕಾ ಚೋಪ್ರಾ ಅವರನ್ನು ನೋಡಿದಾಗ ನನಗೆ ಹೀಗಾಯಿತು ಎಂದೂ ರಾಣಾ ಹೇಳಿದ್ದಾರೆ. ನನಗೆ ತಿಳಿದಿರಲಿಲ್ಲ, ನಾವು ಈವೆಂಟ್‌ವೊಂದರಲ್ಲಿ ಕುಳಿತಿದ್ದೆವು. ಒಬ್ಬ ಮಹಿಳೆ ಬಂದು ಪಕ್ಕದಲ್ಲಿ ಕುಳಿತಳು. ನಾವು ನಮ್ಮೊಳಗೆ ಮಾತನಾಡುತ್ತಿದ್ದೆವು. ನಾನು ಎಲ್ಲಿಗೆ ಹೋಗಬೇಕು ಎಂದು ಯೋಚಿಸುತ್ತಾ ಮುಂದೆ ಮತ್ತು ಹಿಂದಕ್ಕೆ ಚಲಿಸಿದೆ. ಸ್ವಲ್ಪ ಹೊತ್ತಿನ ನಂತರ ಆಕೆ ಎದ್ದು ಹೋದಳು. ಅವಳು ಯಾರೆಂದು ನಾನು ವಿಚಾರಿಸಿದೆ." ಆಗ, ನಾನು ಕೇಳಿದ ವ್ಯಕ್ತಿ, 'ನೀವು ಅವಳನ್ನು ಗುರುತಿಸಲಿಲ್ಲವೇ?' ಎಂದು ಕೇಳಿದರು. ನಾನು ಇಲ್ಲ ಎಂದು ಹೇಳಿದೆ. ಕೂತಿದ್ದವರು ಪ್ರಿಯಾಂಕಾ ಚೋಪ್ರಾ ಎಂದರು. ಆಕೆಯ ಮೇಲೆ ನನ್ನ ಸಂಪೂರ್ಣ ಮೋಹ ಹೋಯ್ತು’’ ಎಂದೂ ಪಾಕ್‌ ನಟ ಟೀಕೆ ಮಾಡಿದ್ದಾರೆ. 

77

ನಂತರ, ಅಮೀಶಾ ಪಟೇಲ್ ಅನ್ನು ನಿಜವಾದ ಸುಂದರಿ ಎಂದೂ ಪಾಕ್‌ ನಟ ಅಭಿನಂದಿಸಿದ್ದಾರೆ. ಇದನ್ನು ಕೇಳಿದ ನಿರೂಪಕ ಅಲಿ, ಅತಿಥಿಯನ್ನು ಕೀಟಲೆ ಮಾಡುವ ಮೂಲಕ ಮತ್ತು ಅವಳ ಸೌಂದರ್ಯದಲ್ಲಿ ಇನ್ನೇನಿದೆ ಎಂದು ಕೇಳುವ ಮೂಲಕ ಟೀಕೆ ಮಾಡಿದ್ದಾರೆ. ನಂತರ, ಪಾಕ್‌ ನಟ "ನಾನು ಎಲ್ಲವನ್ನೂ ಇಲ್ಲಿ ಹೇಳಬೇಕೇ?" ಎಂದು ಪ್ರಶ್ನೆ ಮಾಡಿದ್ದಾರೆ. 

Read more Photos on
click me!

Recommended Stories