ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಈ ಬಾಲಿವುಡ್ ತಾರೆಯರ ಜೊತೆಗಿತ್ತು ಅಫೇರ್

Published : May 06, 2025, 06:03 PM ISTUpdated : May 06, 2025, 07:07 PM IST

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಬಾಲಿವುಡ್ ನ ಹಲವು ನಟಿಯರ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಯಾರ ಜೊತೆ ಇಮ್ರಾನ್ ಖಾನ್ ಹೆಸರು ಕೇಳಿ ಬಂದಿತ್ತು ನೋಡೋಣ.   

PREV
18
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಈ ಬಾಲಿವುಡ್ ತಾರೆಯರ ಜೊತೆಗಿತ್ತು ಅಫೇರ್

ಇಮ್ರಾನ್ ಖಾನ್
ಇಮ್ರಾನ್ ಖಾನ್ (Imran Khan) ಅವರನ್ನು ತಮ್ಮ ಅವಧಿ ಮುಗಿಯುವ ಮೊದಲೇ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಅವರು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಜನಪ್ರಿಯ ಅಥವಾ ಸೆಕ್ಸಿಯೆಸ್ಟ್ ಕ್ರೀಡಾಪಟುವಾಗಿದ್ದರು ಇವರು. ಜೊತೆಗೆ ಹಲವಾರು ನಟಿಯರ ಜೊತೆ ಅಫೇರ್ ಕೂಡ ಇಟ್ಟುಕೊಂಡಿದ್ದರು. 
 

28

ಇಮ್ರಾನ್ ಮತ್ತು ಲವ್ ಅಫೇರ್ಸ್
ಕ್ರಿಕೆಟ್ ಹೊರತುಪಡಿಸಿ ಇಮ್ರಾನ್ ಖಾನ್ ಇನ್ನೊಂದು ವಿಷಯದಲ್ಲೂ ಜನಪ್ರಿಯತೆ ಪಡೆದಿದ್ದರು.  ಒಬ್ಬ ಪರ್ಫೆಕ್ಟ್ ಪ್ಲೇಬಾಯ್ ಮತ್ತು ಹಾರ್ಟ್ ಥ್ರೋಬ್ ಆಗಿದ್ದರು. ಆ ಸಮಯದಲ್ಲಿ ಅವರು ಬಾಲಿವುಡ್ ಮತ್ತು ಬಂಗಾಳಿ ಚಿತ್ರರಂಗದ ಹಲವಾರು ಸುಂದರ ನಟಿಯರೊಂದಿಗೆ ಸಂಬಂಧ (love affairs) ಹೊಂದಿದ್ದರು.

38

ಇಮ್ರಾನ್ ಮತ್ತು ರೇಖಾ (Rekha)
ವರದಿಗಳ ಪ್ರಕಾರ, ಇಮ್ರಾನ್ ಮಾಜಿ ಬಾಲಿವುಡ್ ತಾರೆ (Bollywood Actress) ರೇಖಾ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಇತ್ತು. ತನ್ನ ಮಗಳ ಜೀವನದಲ್ಲಿನ ಬದಲಾವಣೆಗಳಿಂದ ರೇಖಾಳ ತಾಯಿ ತುಂಬಾ ಸಂತೋಷಗೊಂಡಿದ್ದರು.  ಅಷ್ಟೇ ಅಲ್ಲ, ಇಮ್ರಾನ್ ಮುಂಬೈನಲ್ಲಿ ನಟಿಯೊಂದಿಗೆ ಒಂದು ತಿಂಗಳು ಕಳೆದಿದ್ದರು, ಅಲ್ಲದೇ, ಇಬ್ಬರೂ ಬೀಚ್ ನಲ್ಲಿ ಜೊತೆಯಾಗಿ ಕೂಡ ಹಲವಾರು ಬಾರಿ ಕಾಣಿಸಿಕೊಂಡಿದ್ದರು.

48

ಇಮ್ರಾನ್ ಖಾನ್ ಮತ್ತು ಮುನ್ಮುನ್ ಸೇನ್ (Moon Moon Sen)
ಇಮ್ರಾನ್ ಖಾನ್ ಮತ್ತು ಮುನ್ಮುನ್ ಸೇನ್ ನಡುವಿನ ಸ್ನೇಹದ ಬಗ್ಗೆ ಹಲವು ವದಂತಿಗಳು ಹಬ್ಬಿದ್ದವು. ಬಂಗಾಳಿ ನಟಿ ಮುನ್ಮುನ್ ಸೇನ್ ಜೊತೆ ಇಮ್ರಾನ್ ಖಾನ್ ಅವರ ಸ್ನೇಹ ಸಾಕಷ್ಟು ಸುದ್ದಿ ಮಾಡಿತು.   

58

ಜೀನತ್ ಮತ್ತು ಇಮ್ರಾನ್
ಖ್ಯಾತ ಬಾಲಿವುಡ್ ನಟಿ ಜೀನತ್ ಅಮನ್ (Zeenat Aman) ಕೂಡ ಇಮ್ರಾನ್ ಖಾನ್ ಅವರನ್ನು ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತದೆ.  ಇಮ್ರಾನ್ ತಮ್ಮ 27 ನೇ ಹುಟ್ಟುಹಬ್ಬವನ್ನು ಬೆಂಗಳೂರಿನ ಕ್ರಿಕೆಟ್ ಕ್ರೀಡಾಂಗಣದ ಡ್ರೆಸ್ಸಿಂಗ್ ಕೋಣೆಯಲ್ಲಿ ತಮ್ಮ ತಂಡದ ಸದಸ್ಯರೊಂದಿಗೆ ಆಚರಿಸಿಕೊಂಡರು, ಆದರೆ ಕೆಲವು ಭಾರತೀಯ ಪತ್ರಿಕೆಗಳು ಇಮ್ರಾನ್ ತಮ್ಮ ಹುಟ್ಟುಹಬ್ಬವನ್ನು ಬಾಲಿವುಡ್ ತಾರೆ ಜೀನತ್ ಅಮನ್ ಅವರೊಂದಿಗೆ ಆಚರಿಸಿಕೊಂಡಿದ್ದಾರೆ ಎಂದು ವರದಿ ಮಾಡಿತ್ತು.

68

ಲಂಡನ್ ನಲ್ಲೂ ಜೊತೆಯಾಗಿದ್ದರು ಈ ಜೋಡಿ
ಒಂದು ವರ್ಷ, ಪಾಕಿಸ್ತಾನ ಕ್ರಿಕೆಟ್ (Pakistan Cricket) ತಂಡ ಭಾರತಕ್ಕೆ ಪ್ರವಾಸಕ್ಕೆ ಬಂದಿತು. ಜೀನತ್ ಮತ್ತು ಇಮ್ರಾನ್ ಇಬ್ಬರೂ ಮೊದಲ ಬಾರಿಗೆ ಭೇಟಿಯಾದಾಗ, ಮೊದಲ ನೋಟದಲ್ಲೇ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದರು. ವರದಿಗಳ ಪ್ರಕಾರ, ಇಮ್ರಾನ್ ಮತ್ತು ಜೀನತ್ ಲಂಡನ್‌ನಲ್ಲಿಯೂ ಹಲವಾರು ಬಾರಿ ಭೇಟಿಯಾಗಿದ್ದರು. 

78

ಸಂಬಂಧ ಮುರಿದು ಬಿದ್ದಿದ್ದೇಕೆ? 
ಆ ಸಮಯದಲ್ಲಿ, ಭಾರತೀಯ ನಟಿಯೊಂದಿಗಿನ ಸಂಬಂಧದಿಂದಾಗಿ ಇಮ್ರಾನ್ ಕ್ರಿಕೆಟ್ ಕ್ಷೇತ್ರದಲ್ಲಿ ವಿಫಲರಾಗುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದವು. ಮಾಧ್ಯಮಗಳಲ್ಲಿ ಹರಡಿದ ಸುದ್ದಿಗಳಿಂದಾಗಿ, ಇಮ್ರಾನ್-ಜೀನತ್ ಪರಸ್ಪರ ದೂರವಾಗಲು ನಿರ್ಧರಿಸಿದರು, ಹೀಗೆ ಅವರ ಪ್ರೇಮ ಸಂಬಂಧ ಕೂಡ ದೂರವಾಯಿತು. 

88

ಇಮ್ರಾನ್ ಮತ್ತು ಶಬಾನಾ
ಇಮ್ರಾನ್ ಖಾನ್ ಅವರ ಹೆಸರು ಮತ್ತೊಬ್ಬ ಬಾಲಿವುಡ್ ನಟಿ ಶಬಾನಾ ಅಜ್ಮಿ (Shabhana Azmi)ಅವರೊಂದಿಗೆ ಸಹ ಸಂಬಂಧ ಹೊಂದಿತ್ತು, ಆದಾಗ್ಯೂ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಸಾರ್ವಜನಿಕವಾಗಿ ಮಾತನಾಡಲಿಲ್ಲ.

Read more Photos on
click me!

Recommended Stories