OTT Release November 2025: ಕನ್ನಡ ರಾಜ್ಯೋತ್ಸವದ ಖುಷಿಯ ಜೊತೆಗೆ ವೀಕೆಂಡ್ ಸಮಯ. ಯಾವ ಸಿನಿಮಾ ನೋಡಬೇಕು? ಯಾವ ಸಿರೀಸ್ ನೋಡಬೇಕು ಎಂದು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಹಾಗಾದರೆ ಟಾಪ್ 7 ಸಿನಿಮಾಗಳು ಯಾವುವು? ಯಾವ ಸಿಇಮಾ ಎಲ್ಲಿ ಸ್ಟ್ರೀಮಿಂಗ್ ಆಗ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿರುವ ಕಾಂತಾರ ಚಾಪ್ಟರ್ 1 ಈಗಾಗಲೇ ಥಿಯೇಟರ್‌ನಲ್ಲಿ ರಿಲೀಸ್ ಆಗಿ, ದೊಡ್ಡ ಹಿಟ್ ಆಗಿದೆ. ನಟಿ ರುಕ್ಮಿಣಿ ವಸಂತ, ಗುಲ್ಷನ್ ದೇವಯ್ಯ, ಮಲಯಾಳಂ ನಟ ಜಯರಾಮ್ ಅಭಿನಯಿಸಿರುವ ಈ ಸಿನಿಮಾಕ್ಕೆ ಮೆಚ್ಚುಗೆ ಸಿಕ್ಕಿದೆ. ಅಕ್ಟೋಬರ್ 31ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಸಿನಿಮಾ ಲಭ್ಯವಿದೆ.
26
ಬಾಘಿ 4
ಟೈಗರ್ ಶ್ರಾಫ್ ನಟನೆಯ ಬಾಘಿ 4, ಥಿಯೇಟರ್‌ನಲ್ಲಿ ಸೋತಿತ್ತು. ಬಾಘಿ ಫ್ರಾನ್‌ಚೈಸ್‌ನ ನಾಲ್ಕನೇ ಚಾಪ್ಟರ್ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಟೈಗರ್ ಶ್ರಾಫ್, ಸಂಜಯ್ ದತ್, ಹರ್ನಾಜ್ ಸಂಧು, ಶ್ರೇಯಸ್ ತಲ್ಪಾಡೆ, ಉಪೇಂದ್ರ ಲಿಮಯೆ, ಸೌರಭ್ ಸಚದೇವ, ಸೋನಮ್ ಬಜ್ವಾ ಅವರು ನಟಿಸಿದ್ದಾರೆ.
36
ಲೋಕಃ ಚಾಪ್ಟರ್ 1 ಚಂದ್ರಾ
ನಟಿ ಕಲ್ಯಾಣಿ ಪ್ರಿಯದರ್ಶನ್ ಅವರುನಟಿಸಿರುವ ಮಲಯಾಳಂ ಸೂಪರ್‌ಹೀರೋ ಸಿನಿಮಾವು ಈಗ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಜಿಯೋಹಾಟ್‌ಸ್ಟಾರ್‌ನಲ್ಲಿ ಅಕ್ಟೋಬರ್ 31ರಂದು ಈ ಸಿಇಮಾ ಬಿಡುಗಡೆಯಾಗಿದೆ. ಆಗಸ್ಟ್ 28ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ, ಮಲಯಾಳಂನಲ್ಲಿ ದೊಡ್ಡ ಹಿಟ್ ನೀಡಿತು. ನಟ ದುಲ್ಕರ್ ಸಲ್ಮಾನ್ ಅವರು ವೇಫೇರರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ಹಣ ಹೂಡಿದ್ದರು.
ಟೆಸ್ಸಾ ಥಾಂಪ್ಸನ್, ನೀನಾ ಹಾಸ್, ಇಮೋಜೆನ್ ಪೂಟ್ಸ್, ನಿಕೋಲಸ್ ಪಿನ್ನಾಕ್, ಟಾಮ್ ಬೇಟ್‌ಮನ್ ನಟನೆಯ ಹೆಡ್ಡಾ ಸಿನಿಮಾವು ಅಕ್ಟೋಬರ್ 29ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್ ಆಗಿದೆ. ಹೆನ್ರಿಕ್ ಇಬ್ಸೆನ್ ಅವರ ಕಾಲಾತೀತ ನಾಟಕ ಹೆಡ್ಡಾ ಗ್ಯಾಬ್ಲರ್‌ನಿಂದ ಈ ಸಿನಿಮಾ ಮಾಡಲಾಗಿದೆ. ಈ ಸೈಕೋ ಡ್ರಾಮಾದಲ್ಲಿ ಟೆಸ್ಸಾ ಥಾಂಪ್ಸನ್ ಪ್ರೀತಿಯೇ ಇಲ್ಲದ ಮದುವೆಯಲ್ಲಿ ಸಿಕ್ಕಿಹಾಕಿಕೊಂಡ ಮಹಿಳೆಯಾಗಿ ಕಾಣಿಸಿಕೊಂಡಿದ್ದು, ಜನರ ಬ್ರೇನ್ ವಾಶ್ ಮಾಡಲು ರೆಡಿಯಾಗುತ್ತಾಳೆ. ಇದರಿಂದ ಅನೇಕ ವಿನಾಶಗಳು ಆಗುತ್ತವೆ.
56
ಇಡ್ಲಿ ಕಡೈ
ತಮಿಳು ನಟ ಧನುಷ್ ನಿರ್ದೇಶನದ ಇಡ್ಲಿ ಕಡೈ ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾಕ್ಕೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಧನುಷ್, ನಿತ್ಯಾ ಮೆನನ್, ಅರುಣ್ ವಿಜಯ್, ಶಾಲಿನಿ ಪಾಂಡೆ ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಂದೆಯ ಇಡ್ಲಿ ಅಂಗಡಿಯನ್ನು ಮಗ ನಡೆಸುವುದರ ಕುರಿತು ಈ ಸಿನಿಮಾವಿದೆ.
66
ಮಾರಿಗಲ್ಲು
ದೇವರಾಜ್ ಪೂಜಾರಿ ನಿರ್ದೇಶನದ, ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಿಸಿದ ಕನ್ನಡ ವೆಬ್ ಸೀರೀಸ್ ಮಾರಿಗಲ್ಲು. ಪುನೀತ್ ರಾಜ್‌ಕುಮಾರ್ ಅವರು ರಾಜ ಮಯೂರವರ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 31ರಿಂದ ಜೀ5ನಲ್ಲಿ ಈ ಸಿರೀಸ್ ಲಭ್ಯವಿದೆ. ಕರ್ನಾಟಕದ ಕದಂಬ ರಾಜವಂಶದ ಕಳೆದುಹೋದ ಖಜಾನೆಯ ಅಥವಾ ಭಂಡಾರದ 1990ರ ದಶಕದ ಕಥೆಯಿಂದ ಪ್ರೇರಿತವಾಗಿದೆ.