ನಟ ಅಜಿತ್ ಕುಮಾರ್ ಅವರ ಇತ್ತೀಚಿನ ಕ್ಲಾಸಿಕ್ ಲುಕ್ ಫೋಟೋಗಳು: ತಲಾ ಅಜಿತ್ ವೈಟ್ ಸೂಟ್‌ನಲ್ಲಿ, ಸಖತ್ ಸ್ಟೈಲಿಶ್ ಆಗಿ ತೆಗೆಸಿಕೊಂಡ ಫೋಟೋಶೂಟ್ ಚಿತ್ರಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ತಮಿಳು ಚಿತ್ರರಂಗದ ಸ್ಟಾರ್ ನಟ ಅಜಿತ್, ನಟನೆ ಹೊರತುಪಡಿಸಿ ಬೇರೆ ವಿಷಯಗಳಲ್ಲೂ ಗಮನಹರಿಸಿ ಅಭಿಮಾನಿಗಳನ್ನು ಅಚ್ಚರಿಗೊಳಿಸುತ್ತಾರೆ. ಕೆಲವರು ನಟನೆಯನ್ನು ಉತ್ತಮಪಡಿಸಿಕೊಳ್ಳಲು ತರಬೇತಿ ಪಡೆದರೆ, ಅಜಿತ್ ಅವರಿಗಿಂತ ಭಿನ್ನ.
27
ರಾಜ್ಯಮಟ್ಟದಲ್ಲಿ ಪದಕ
ಉದಾಹರಣೆಗೆ, ಆ್ಯಕ್ಷನ್ ಚಿತ್ರಗಳಿಗಾಗಿ ಕೆಲ ನಟರು ಫೈಟಿಂಗ್, ಶೂಟಿಂಗ್ ತರಬೇತಿ ಪಡೆಯುತ್ತಾರೆ. ಆದರೆ ರಾಜ್ಯ ಅಥವಾ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದಿಲ್ಲ. ಅಜಿತ್ ಶೂಟಿಂಗ್ ತರಬೇತಿ ಪಡೆದು ರಾಜ್ಯಮಟ್ಟದಲ್ಲಿ ಪದಕ ಗೆದ್ದಿದ್ದಾರೆ.
37
ನಟನೆಗೆ ಮರಳಿದ ಅಜಿತ್
ಕಳೆದ 6 ತಿಂಗಳಿಂದ ಕಾರ್ ರೇಸಿಂಗ್‌ನಲ್ಲಿ ತೊಡಗಿದ್ದ ಅಜಿತ್, ಸಣ್ಣ ವಿರಾಮದ ನಂತರ ಮತ್ತೆ ನಟನೆಗೆ ಮರಳಿದ್ದಾರೆ. 'ಗುಡ್ ಬ್ಯಾಡ್ ಅಗ್ಲಿ' ನಂತರದ ಚಿತ್ರವನ್ನೂ ನಿರ್ದೇಶಕ ಆದಿಕ್ ರವಿಚಂದ್ರನ್ ನಿರ್ದೇಶಿಸಲಿದ್ದಾರೆ.
ಈ ಚಿತ್ರದ ಕಥೆಗೆ ಅಜಿತ್ ಒಪ್ಪಿಗೆ ನೀಡಿದ್ದು, ಆದಿಕ್ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. ಶೀಘ್ರದಲ್ಲೇ ಶೂಟಿಂಗ್ ಶುರುವಾಗಲಿದೆ. ನಾಯಕಿಗಾಗಿ ಬಾಲಿವುಡ್ ನಟಿಯರೊಂದಿಗೆ ಮಾತುಕತೆ ನಡೆಯುತ್ತಿದೆ.
57
ಸಖತ್ ವೈರಲ್
ಈ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಕಾಯುತ್ತಿರುವಾಗಲೇ, ಅಜಿತ್ ಅವರ ಇತ್ತೀಚಿನ ಫೋಟೋಶೂಟ್ ಚಿತ್ರಗಳು ಸ್ವೀಟ್ ಸರ್ಪ್ರೈಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
67
ಕ್ಯಾಮೆರಾಗೆ ಪೋಸ್
ಇದರಲ್ಲಿ ಅಜಿತ್, 'ಬಿಲ್ಲಾ' ಚಿತ್ರದ ಪಾತ್ರವನ್ನು ನೆನಪಿಸುವಂತೆ ವೈಟ್ ಸೂಟ್, ಸಾಲ್ಟ್ ಆ್ಯಂಡ್ ಪೆಪ್ಪರ್ ಹೇರ್‌ಸ್ಟೈಲ್‌ನಲ್ಲಿ ಸಖತ್ ಮಾಸ್ ಆಗಿ ವಿಭಿನ್ನವಾಗಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
77
ಸೋಷಿಯಲ್ ಮೀಡಿಯಾದಲ್ಲಿ ಹವಾ
ಅಜಿತ್ ಅವರ ಕ್ಯಾಶುಯಲ್ ಫೋಟೋಗಳನ್ನೇ ವೈರಲ್ ಮಾಡುವ ಅಭಿಮಾನಿಗಳಿಗೆ, ಈ ಫೋಟೋಶೂಟ್ ಚಿತ್ರಗಳು ಸಿಕ್ಕರೆ ಸುಮ್ಮನಿರುತ್ತಾರೆಯೇ? ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿದ್ದಾರೆ.