ಬಿಟೌನ್ ನಟಿಯರ ಜೊತೆ ಮತ್ತೆ ಮಿಂಚಿದ ಓರಿ: ಈತ ತೊಡೆ ಎದೆ ಮೇಲೆ ಕೈ ಇಟ್ರೂ ಇವರು ತಣ್ಣಗಿರೋದೇಕೆ?

Published : Nov 06, 2023, 04:16 PM ISTUpdated : Nov 06, 2023, 04:21 PM IST

ಮೊನ್ನೆಯಷ್ಟೇ ಬಾಲಿವುಡ್ ಬಾದ್‌ ಷಾ ಕಿಂಗ್‌ ಖಾನ್ ಬರ್ತಡೇ ಬಹಳ ಅದ್ದೂರಿಯಾಗಿ ನಡೆಯಿತು. ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿದ ಕಿಂಗ್ ಖಾನ್ ನಂತರ ಬಾಲಿವುಡ್ ಮಂದಿಗೆ ಹಾಗೂ ಗಣ್ಯರಿಗೆ ಸ್ಪೆಷಲ್ ಬರ್ತ್‌ಡೇ ಪಾರ್ಟಿ ಕೊಟ್ಟಿದ್ದರು. ಆದರೆ ಈ ಪಾರ್ಟಿಯಲ್ಲಿ ಮಿಂಚಿದ್ದು ಮಾತ್ರ ಶಾರೂಕ್ ಅಲ್ಲ ಮತ್ಯಾರಿರಬಹುದು ಇಲ್ಲಿದೆ ನೋಡಿ ಡಿಟೇಲ್ಸ್..  

PREV
118
ಬಿಟೌನ್ ನಟಿಯರ ಜೊತೆ ಮತ್ತೆ ಮಿಂಚಿದ ಓರಿ: ಈತ ತೊಡೆ ಎದೆ ಮೇಲೆ ಕೈ ಇಟ್ರೂ ಇವರು ತಣ್ಣಗಿರೋದೇಕೆ?
Orry with B town celebrities

ಈ ಬರ್ತ್‌ಡೇ ಪಾರ್ಟಿಯಲ್ಲಿ  ಬಾಲಿವುಡ್‌ ಹೆಂಗೆಳೆಯರ ಜೊತೆ ಮಿಂಚಿದ್ದ ಓರಿಯ ಬಗ್ಗೆ ಜನ  ಆತ ಯಾರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದು, ಆತನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದಾರೆ. 

218
ಶಾರೂಕ್ ಪುತ್ರಿ ಜೊತೆ ಓರಿ

ಯಾರಿಗೂ ಅಷ್ಟು ಸುಲಭವಾಗಿ ಸಿಗದ ಬಾಲಿವುಡ್‌ ನಟಿಯರನ್ನು ಬಿಗಿಯಾಗಿ ತಬ್ಬಿಕೊಂಡು ಪೋಸ್ ಕೊಡುವ ಈ ಓರಿ ಬಗ್ಗೆ ಜನ ಕುತೂಹಲದಿಂದ ಆತ ಯಾರು ಎಂದು ಮತ್ತೆ ಪ್ರಶ್ನೆ ಮಾಡಲು ಶುರು ಮಾಡಿದ್ದಾರೆ. 

318
ದೀಪಿಕಾ ಜೊತೆ ಓರಿ

ಈ ಓರಿ ಬಾಲಿವುಡ್ ತಾರೆಯರ ಎದೆಯ ಮೇಲೆ ತೊಡೆಯ ಮೇಲೆಲ್ಲಾ ಕೈಯಿಟ್ಟು ತೆಗೆಸಿಕೊಂಡ ಪೋಟೋಗಳನ್ನು ನೋಡಿ ಜನ ಕೆಂಡಮಂಡಲವಾಗಿದ್ದು, ಹೂ ಇಸ್ ದಿಸ್ ಹೆಲ್ ಎಂದು ಕಾಮೆಂಟ್ ಮಾಡ್ತಿದ್ದಾರೆ.

418
ಆಲಿಯಾ ಜೊತೆ ಓರಿ

ಮತ್ತೆ ಕೆಲವರು ನಟಿಯರೇ ಆತ ಹೀಗೆ ಕೈ ಇಟ್ಟರೂ ಸುಮ್ಮನಿರುವಾಗ ನಿಮಗೇನು ಸಮಸ್ಯೆ ಎಂದು ಕಾಮೆಂಟ್ ಮಾಡಿದವರನ್ನೇ ಮರು ಪ್ರಶ್ನಿಸಿದ್ದಾರೆ. 

518
ಸುಸಾನೆ ಖಾನ್ ಜೊತೆ ಓರಿ

ಮತ್ತೆ ಕೆಲವರು ಈ ನಟಿಯರೆಲ್ಲಾ ಆತ ಎಲ್ಲಿ ಕೈ ಇಟ್ಟರೂ ಸುಮ್ಮನಿರುವುದೇಕೆ ಇದು ಓರಿಯ ಸಮಸ್ಯೆ ಅಲ್ಲ ಇದು ಆತನನ್ನು ತಮ್ಮ ದೇಹದ ಮೇಲೆಲ್ಲಾ ಕೈ ಇಡಲು ಬಿಡುವ ಇವರದ್ದೇ ಸಮಸ್ಯೆ ಎಂದು ಕಾಮೆಂಟ್ ಮಾಡಿದ್ದಾರೆ. 

618
Orry with B town celebrities

ನಿಜವಾಗಿಯೂ ಶಾರೂಕ್ ಬರ್ತಡೇಯಲ್ಲಿ ಶಾರೂಕ್ ಜೊತೆ  ಬಾಲಿವುಡ್‌ ನಟಿಯರ ಫೋಟೋ ಇರಬೇಕಿತ್ತು. ಆದರೆ ಅವರಿಗಿಂತ ಹೆಚ್ಚು ಬಾಲಿವುಡ್ ನಟಿಯರ ಜೊತೆ ಈತನೇ ಮಿಂಚುತ್ತಿದ್ದಾನೆ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ.

718
Orry with B town celebrities

ಓರಿ ಅನೇಕ ಬಾಲಿವುಡ್ ನಟಿಯರ ಜೊತೆ ಫೋಸ್‌ ಕೊಟ್ಟಿದ್ದು, ಪಪರಾಜಿಗಳಾದ ವೈರಲ್ ಭಯಾನಿ ಈತನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. 

818
ಕರೀನಾ ಜೊತೆ ಓರಿ

ಅಂದಹಾಗೆ ಈ ಓರಿ ಸಾಮಾನ್ಯನೇನು ಅಲ್ಲ, ಈತನಿಗೆ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಜೊತೆಗೂ ಉತ್ತಮ ಬಾಂಧವ್ಯವಿದೆ. ಅನ್ನಾ ಹಾತವೇ, ಕಿಮ್ ಕರ್ದಾಶಿಯನ್ ಕುಟುಂಬ ಮುಂತಾದವರ ಜೊತೆ ಈತನಿಗೆ ಒಳ್ಳೆಯ ಒಡನಾಟವಿದೆ. 

918
Orry with B town celebrities

ಇಂತಹ ಓರಿಗೆ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಈತ ಬರೀ ಫ್ಯಾಷನ್ ಇನ್‌ಫ್ಲುಯೆನ್ಸರ್ ಮಾತ್ರವಲ್ಲದೇ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ವಿಶೇಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಾನೆ. 

1018
ವರುಣ್ ಧವನ್ ಜೊತೆ ಓರಿ

ಜಾನ್ವಿ ಕಪೂರ್‌ನಿಂದ ಹಿಡಿದು ಕರೀನಾ, ದೀಪಿಕಾ ಪಡುಕೋಣೆವರೆಗೆ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳ ಜೊತೆ ಈ ಓರಿ ಅಲಿಯಾಸ್ ಒರ್ಹನ್ ಅವತ್ರಮಣಿ ಪೋಸ್‌ ನೀಡ್ತಾನೆ.

1118
Orry with B town celebrities

ಬಾಲಿವುಡ್‌ ಮಂದಿಯ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಈ ಓರಿ ಇದ್ದೇ ಇರ್ತಾರೆ. ಬಾಲಿವುಡ್‌ನ ಬಹುತೇಕ ವಿಶೇಷವಾಗಿ ಹೆಣ್ಣು ಮಕ್ಕಳ ಜೊತೆ ಸದಾ ಫೋಟೋಗೆ ಫೋಸ್ ಕೊಡುವ ಓರಿ ಬಗ್ಗೆ ಬಾಲಿವುಡ್‌ನ ಹೆಂಗೆಳೆಯರಿಗೂ ಅಷ್ಟೇ ಪ್ರೀತಿ ಇದೆ. 

1218
ಓರಿ ಜೊತೆ ಓರಿಯಂತೆ ಪೋಸ್ ಕೊಟ್ಟ ರಣಬೀರ್

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಯಾವುದೇ ಮುಜುಗರವಿಲ್ಲದೇ ಈತನನ್ನು ಬಿಗಿದಪ್ಪಿಕೊಂಡು ಸಖತ್ ಆಗಿ ಪೋಸ್ ನೀಡ್ತಾರೆ. ಸೆಲೆಬ್ರಿಟಿಗಳ ಜೊತೆ ಈತ ಇರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

1318
ಬೋನಿ ಕಪೂರ್ ಜೊತೆ ಓರಿ

ಹೀಗಾಗಿ ಸಹಜವಾಗಿಯೇ ಸೆಲೆಬ್ರಿಟಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಈತ ಯಾರು ಯಾರು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈತನಿಗೆ ಹೇಗೆ ಸೆಲೆಬ್ರಿಟಿಗಳು ಅಷ್ಟು ಸುಲಭವಾಗಿ ಸಿಗುತ್ತಿದ್ದಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. 

1418
Orry with B town celebrities

ಆದರೆ ಓರಿ ಬಗ್ಗೆ ಇಂಟರ್‌ನೆಟ್‌ನಲ್ಲಿ ಹೆಚ್ಚೇನು ಇಲ್ಲ... ಹೀಗಾಗಿ ಕೆಲವೇ ಕೆಲವರಿಗೆ ಮಾತ್ರ ಈ ಓರಿ ಯಾರು ಎಂಬುದು ಗೊತ್ತಿದೆ. ಈತನೋರ್ವ ಸಾಮಾಜಿಕ ಹೋರಾಟಗಾರ ಹಾಗೂ ಶ್ರೀಮಂತ ಮನೆತನದ ಹಿನ್ನೆಲೆಯಿಂದ ಬಂದವ. 

1518
ಸುಹಾನಾ ಹಾಗೂ ಖುಷಿ ಜೊತೆ ಓರಿ

ಒರಿ ಅಲಿಯಾಸ್ ಒರ್ಹಾನ್ ಜನಿಸಿದ್ದು, 1992ರ ಆಗಸ್ಟ್ 2 ರಂದು, ಶ್ರೀಮಂತ ಮನೆತನದಿಂದ ಬಂದ ಈ ಹುಡುಗ ಕಲಿತಿದ್ದೆಲ್ಲಾ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ. ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಈತನ ಕ್ಲಾಸ್‌ಮೇಟ್. 

1618
ಜಾನ್ವಿ ಕಪೂರ್ ಜೊತೆ ಓರಿ

ಇನ್ನು ಈ ಓರಿಯ ಸಹೋದರ ಕೂಡ  ನ್ಯೂಯಾರ್ಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೊಲ್ಲೀಸ್‌ ಹೆಲ್ತ್‌ನಲ್ಲಿ ಸಾರ್ವಜನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 

1718
ಕರೀನಾ ಹಾಗೂ ದೀಪಿಕಾ ಜೊತೆ ಓರಿ

ಬಾಲಿವುಡ್‌ನ ಝೆಡ್‌ ಜನರೇಷನ್‌ ಹಾಗೂ ಸ್ಟಾರ್‌ ಕಿಡ್‌ಗಳಾಗಿರುವ ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಭೂಮಿ ಪಡ್ನೇಕರ್, ಇಬ್ರಾಹಿಂ ಖಾನ್‌ ಮುಂತಾದವರ ಜೊತೆ ಆಗಾಗ ಪಾರ್ಟಿಗಳಲ್ಲಿ ಭಾಗವಹಿಸುತ್ತಾ ಫೋಟೋಗಳಿಗೆ ಫೋಸ್‌ ನೀಡ್ತಿರುವ ಓರಿ ಇದೇ ಕಾರಣದಿಂದ ಜನಪ್ರಿಯತೆ ಗಳಿಸಿದ್ದಾರೆ. 

1818
ಕತ್ರೀನಾ ಜೊತೆ ಓರಿ

ಬಾಲಿವುಡ್‌ನಲ್ಲಿರುವ ನಾನು ಜೊತೆಗೆ ತಿರುಗಾಡುವ ಕೆಲವರು ನನ್ನ ಕ್ಲಾಸ್‌ಮೇಟ್‌ಗಳು ಎಂದು ಸಂದರ್ಶನವೊಂದರಲ್ಲಿ ಓರಿ ಹೇಳಿಕೊಂಡಿದ್ದರು

click me!

Recommended Stories