ಶಾರುಖ್‌ ಮಗಳು-ಬಿಗ್‌ಬಿ ಮೊಮ್ಮಗ ಡೇಟಿಂಗ್‌, ಮತ್ತಷ್ಟು ಸಾಕ್ಷಿಗೆ ಪ್ರಣಯ ಪಕ್ಷಿಗಳ ವಿಡಿಯೋ ವೈರಲ್

First Published | Nov 6, 2023, 2:41 PM IST

ಮನೀಷ್ ಮಲ್ಹೋತ್ರಾ ಇಟ್ಟುಕೊಂಡಿದ್ದ ದೀಪಾವಳಿ ಪಾರ್ಟಿಯಲ್ಲಿ ಇಡೀ  ಬಾಲಿವುಡ್‌ ತಾರಾಗಣ ಸೇರಿ, ಹಲವು ಗಣ್ಯ ವ್ಯಕ್ತಿಗಳು ಕಾಣಿಸಿಕೊಂಡಿದ್ದರು. ಇದರಲ್ಲಿ ಮುಖ್ಯವಾಗಿ ಗಮನ ಸೆಳೆದಿದ್ದು, ಬಾಲಿವುಡ್ ನಟ ಶಾರುಖ್ ಖಾನ್‌ ಪುತ್ರಿ ಮತ್ತು ಅಮಿತಾ ಬಚ್ಚನ್‌ ಮೊಮ್ಮಗ ಅಗಸ್ತ್ಯಾ ನಂದಾ. ಇಬ್ಬರು ಪ್ರಣಯ ಪಕ್ಷಿಗಳು ಎಂಬುದಕ್ಕೆ ಸಾಕ್ಷಿಯಾಗಿ ವಿಡಿಯೋ ವೈರಲ್. 

ಪ್ರಸಿದ್ಧ ಫ್ಯಾಷನ್‌ ಡಿಸೈನರ್‌ ಮನೀಷ್ ಮಲ್ಹೋತ್ರಾ ಭಾನುವಾರ ರಾತ್ರಿ ದೀಪಾವಳಿಗೆ ಮುಂಚಿತವಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಐಶ್ವರ್ಯ ರೈ, ಸಲ್ಮಾನ್ ಖಾನ್, ಜಾನ್ವಿ ಕಪೂರ್, ಸುಹಾನಾ ಖಾನ್ ಮತ್ತು ಅಗಸ್ತ್ಯ ನಂದಾ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಈ ಪಾರ್ಟಿಯಲ್ಲಿ ಕಾಣಿಸಿಕೊಂಡರು.

ಎಲ್ಲಾ ತಾರೆಯರು ನೆರೆದಿದ್ದ ಈ ಪಾರ್ಟಿಯಲ್ಲಿ  ಎಲ್ಲರ ಗಮನ ಸೆಳೆದದ್ದು ಸುಹಾನಾ ಖಾನ್‌ಗೆ ಅಗಸ್ತ್ಯ ನಂದಾ ನೀಡಿದ ಸಿಹಿ ಗೆಸ್ಚರ್, ಇದು  ಅವರ ಡೇಟಿಂಗ್ ವದಂತಿಗಳಿಗೆ ಮತ್ತಷ್ಟು ಪುಷ್ಟಿ ನೀಡಿತು.

Tap to resize

ಪಾರ್ಟಿ ಮುಗಿದ ನಂತರ, ಸುಹಾನಾ ಖಾನ್  ಮನೆಗೆ ತೆರಳುತ್ತಿದ್ದಾಗ ಆಕೆಯನ್ನು ಕಳುಹಿಸಿ ಕೊಡಲು ಸ್ವತಃ ಅಗಸ್ತ್ಯ ನಂದಾ ಬಂದು ಕಾರು ಹತ್ತಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.  

ಈ ವರ್ಷದ ಆರಂಭದಲ್ಲಿ ಅಗಸ್ತ್ಯ ಮತ್ತು ಸುಹಾನಾ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಅಗಸ್ತ್ಯ ಅವರ ತಾಯಿ ಶ್ವೇತಾ ಬಚ್ಚನ್ ಅವರ ಸಂಬಂಧಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ವರದಿಯಾಗಿದೆ.  ಆಗಸ್ಟ್ 2022 ರಲ್ಲಿ ಅವರ ಸಂಬಂಧದ ಬಗ್ಗೆ ಬೆಳಕಿಗೆ ಬಂದಿತ್ತು.

ವರ್ಷದ ಹಿಂದೆ ಕಪೂರ್ ಕುಟುಂಬದ ಕ್ರಿಸ್‌ಮಸ್ ಭೋಜನದ ಸಮಯದಲ್ಲಿ, ಅಗಸ್ತ್ಯ ಸುಹಾನಾ ಅವರನ್ನು ತಮ್ಮ ಕುಟುಂಬ ಸದಸ್ಯರಿಗೆ ತಮ್ಮ ಸಂಗಾತಿ ಎಂದು ಪರಿಚಯಿಸಿದ್ದರು. 
 

ಜೋಯಾ ಅಖ್ತರ್ ನಿರ್ದೇಶನದ ಮುಂಬರುವ ಚಿತ್ರ ದಿ ಆರ್ಚೀಸ್‌ನಲ್ಲಿ ಅವರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಲಕ್ ಬೈ ಚಾನ್ಸ್, ಜಿಂದಗಿ ನಾ ಮಿಲೇಗಿ ದೋಬಾರಾ, ದಿಲ್ ಧಡಕ್ನೆ ದೋ ಮತ್ತು ಗಲ್ಲಿ ಬಾಯ್ ಚಲನಚಿತ್ರಗಳನ್ನು ನೀಡಿದ ನಂತರ ಜೋಯಾ ಅಖ್ತರ್ ಅವರ ಐದನೇ ಚಿತ್ರ ದಿ ಆರ್ಚೀಸ್.   

ಜೋಯಾ ಅಖ್ತರ್ ದಿಬಾಕರ್ ಬ್ಯಾನರ್ಜಿ, ಕರಣ್ ಜೋಹರ್ ಮತ್ತು ಅನುರಾಗ್ ಕಶ್ಯಪ್ ಅವರೊಂದಿಗೆ ಬಾಂಬೆ ಟಾಕೀಸ್, ಲಸ್ಟ್ ಸ್ಟೋರೀಸ್ ಮತ್ತು ಘೋಸ್ಟ್ ಸ್ಟೋರೀಸ್‌ನಲ್ಲಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. 

ಸುಹಾನಾ ಮತ್ತು ಅಗಸ್ತ್ಯರ ಜೊತೆಗೆ, ದಿ ಆರ್ಚೀಸ್ ಚಿತ್ರದಲ್ಲಿ ಖುಷಿ ಕಪೂರ್, ಯುವರಾಜ್ ಮೆಂಡಾ, ವೇದಂಗ್ ರೈನಾ, ಮಿಹಿರ್ ಅಹುಜಾ ಮತ್ತು ಬೋನಿ ಕಪೂರ್ ಅವರ ಕಿರಿಯ ಮಗಳು ಖುಷಿ ಕಪೂರ್ ಕಾಣಿಸಿಕೊಂಡಿದ್ದಾರೆ.
 

Latest Videos

click me!