ಮತ್ತೆ ಹಸೆಮಣೆ ಏರಿದ ಹೆಬ್ಬುಲಿ ನಟಿ: ಉದ್ಯಮಿ ಜಗತ್ ಜೊತೆ ಅಮಲಾ ಪೌಲ್ 2ನೇ ಮದ್ವೆ: ಸುಂದರ ಫೋಟೋಗಳು

Published : Nov 06, 2023, 11:49 AM ISTUpdated : Nov 06, 2023, 01:49 PM IST

ಮಲೆಯಾಳಂ ಹಾಗೂ ದಕ್ಷಿಣ ಭಾರತ ಸಿನಿಮಾದಲ್ಲಿ ಮಿಂಚ್ತಿರುವ ನಟಿ ಅಮಲಾ ಪೌಲ್ 2ನೇ ಬಾರಿ ಹಸೆಮಣೆ ಏರಿದ್ದು, ಉದ್ಯಮಿ ಜಗತ್ ದೇಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ವತಃ ಅಮಲಾ ಹಾಗೂ ಜಗತ್ ಇನ್ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ನವ ಜೋಡಿಯ ಸುಂದರ ಫೋಟೋಗಳು ಇಲ್ಲಿವೆ ನೋಡಿ.

PREV
111
ಮತ್ತೆ  ಹಸೆಮಣೆ ಏರಿದ ಹೆಬ್ಬುಲಿ ನಟಿ: ಉದ್ಯಮಿ ಜಗತ್ ಜೊತೆ ಅಮಲಾ ಪೌಲ್ 2ನೇ ಮದ್ವೆ: ಸುಂದರ ಫೋಟೋಗಳು
Actress Amala Paul wedding

ಮಲೆಯಾಳಂ ಹಾಗೂ ದಕ್ಷಿಣ ಭಾರತ ಸಿನಿಮಾದಲ್ಲಿ ಮಿಂಚ್ತಿರುವ ನಟಿ ಅಮಲಾ ಪೌಲ್ 2ನೇ ಬಾರಿ ಹಸೆಮಣೆ ಏರಿದ್ದು, ಉದ್ಯಮಿ ಜಗತ್ ದೇಸಾಯಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸ್ವತಃ ಅಮಲಾ ಹಾಗೂ ಜಗತ್ ಇನ್ಸ್ಟಾಗ್ರಾಮ್‌ನಲ್ಲಿ ಮದುವೆಯ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ. ನವ ಜೋಡಿಯ ಸುಂದರ ಫೋಟೋಗಳು ಇಲ್ಲಿವೆ ನೋಡಿ.

211
Actress Amala Paul wedding

ನಿನ್ನೆ ಕೇರಳದ ಕೊಚ್ಚಿಯ ಗ್ರ್ಯಾಂಡ್ ಹಯಾಥ್‌ ಹೊಟೇಲ್‌ನಲ್ಲಿ ನಟಿ ಅಮಲಾ ಪೌಲ್ ಅವರು ಜಗತ್ ದೇಸಾಯಿ ಕೈ ಹಿಡಿದಿದ್ದಾರೆ. ಮದುವೆಯ ನಂತರ ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮ್ಯಾಜಿಕಲ್ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

311
Actress Amala Paul wedding

ಫೋಟೋಗಳಲ್ಲಿ ಇಬ್ಬರೂ ಮ್ಯಾಚ್ ಆಗುವ ಲ್ಯಾವೆಂಡರ್ ಬಣ್ಣದ ಧಿರಿಸು ಧರಿಸಿದ್ದಾರೆ. ಅಮಲಾ ಲೆಹೆಂಗಾ ಧರಿಸಿದ್ದರೆ ಜಗತ್ ಶೇರ್ವಾನಿಯಲ್ಲಿ ಮಿಂಚಿದ್ದಾರೆ.

411
Actress Amala Paul wedding

ಎರಡು ಆತ್ಮಗಳು, ಒಂದೇ ಗುರಿ, ನನ್ನ ದೇವತಾ ಸ್ತೀ ಜೊತೆ  ಉಳಿದ ಜೀವನಪೂರ್ತಿ ಜೊತೆಯಾಗಿ ಸಾಗುವೆ ಎಂದು ಚಿತ್ರಗಳಿಗೆ ಜಗತ್ ಕ್ಯಾಪ್ಷನ್ ನೀಡಿದ್ದು, ಅಭಿಮಾನಿಗಳು ಶುಭಾಶಯಗಳ ಸುರಿಮಳೆಗೈದಿದ್ದಾರೆ. 

511
Actress Amala Paul wedding

ನಂತರ ಅಮಲಾ ಪೌಲ್ ಕೂಡ ಮದುವೆಯ ಮತ್ತೊಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದಾರೆ.  ನಮ್ಮಿಬ್ಬರನ್ನು ಒಟ್ಟಿಗೆ ತಂದ ಪ್ರೀತಿ ಹಾಗೂ ಅನುಗ್ರಹವನ್ನು ಆಚರಿಸುತ್ತಿದ್ದೇವೆ.

611
Actress Amala Paul wedding

ನನ್ನ ದೈವಿಕ ಪುರುಷನನ್ನು ಮದ್ವೆಯಾಗಿದ್ದೇನೆ. ನಿಮ್ಮ ಪ್ರೀತಿ ಆಶೀರ್ವಾದವನ್ನು ಬಯಸುತ್ತಿದ್ದೇನೆ ಎಂದು ಅಮಲಾ ಬರೆದುಕೊಂಡಿದ್ದಾರೆ. 

711
Actress Amala Paul wedding

ಕೆಲದಿನಗಳ ಹಿಂದಷ್ಟೇ ತಮ್ಮ 32ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಮಲಾ ಪೌಲ್ ಅವರಿಗೆ ಅದೇ ದಿನದಂದು ಜಗತ್ ಪ್ರೇಮ ನಿವೇದನೆ ಮಾಡಿದ್ದರು. 

811
Actress Amala Paul wedding

ಗೋವಾದ ರೆಸಾರ್ಟೊಂದರಲ್ಲಿ ನಡೆದ ಈ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಅಮಲಾ ಪೌಲ್‌ಗೆ ಮಂಡಿಯೂರಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು ಜಗತ್ ದೇಸಾಯಿ

911
Actress Amala Paul wedding

ಅಮಲಾ ಪತಿ ಜಗತ್ ದೇಸಾಯಿ ಉದ್ಯಮಿಯಾಗಿದ್ದು, ಗೋವಾದ ಲಕ್ಸುರಿ ವಿಲ್ಲಾದಲ್ಲಿ ಮ್ಯಾನೇಜರ್‌ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ತಮ್ಮ  ಕೆಲ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಸಂಬಂಧದ ಬಗ್ಗೆ ಅಭಿಮಾನಿಗಳಿಗೆ ತಿಳಿಸಿದ್ದರು.

1011
Actress Amala Paul wedding

ಇದಕ್ಕೂ ಮೊದಲು ಅಮಲಾ ಪೌಲ್, ನಿರ್ದೇಶಕ ಎ ಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. ಆದರೆ ಮೂರು ವರ್ಷಗಳ ದಾಂಪತ್ಯದ ನಂತರ ಅವರಿಬ್ಬರು ದೂರವಾಗಿದ್ದರು. 

1111
Actress Amala Paul wedding

ಅಮಲಾಪೌಲ್ ತಮಿಳು, ಮಲೆಯಾಳಂ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಕೊನೆಯದಾಗಿ ಭೊಲಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

Read more Photos on
click me!

Recommended Stories