ಬಾಲಿವುಡ್‌ನ ಈ ಸೂಪರ್‌ಸ್ಟಾರ್‌ ನಾಪತ್ತೆಯಾಗಿ 23 ವರ್ಷಾನೇ ಕಳೀತು, ಇನ್ನೂ ಪತ್ತೆಯಾಗಿಲ್ಲ!

Published : Nov 04, 2023, 10:45 AM ISTUpdated : Nov 04, 2023, 10:53 AM IST

ಯಶಸ್ಸು ಮರೆಯಾದ ನಂತರ ಅನೇಕ ನಟ-ನಟಿಯರು ತಮ್ಮ ನೇಮ್‌-ಫೇಮ್ ಉಳಿಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಹಾಗೆಯೇ ಸಕ್ಸಸ್‌ ಸಿನಿಮಾಗಳನ್ನು ನೀಡಿದ ನಂತರ ಇಲ್ಲೊಬ್ಬ ನಟ ನಾಪತ್ತೆಯಾಗಿದ್ದಾರೆ. ಇದುವರೆಗೂ ಅವರು ಎಲ್ಲಿಂದಾರೆಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಯಾರು ಆ ನಟ?

PREV
17
ಬಾಲಿವುಡ್‌ನ ಈ ಸೂಪರ್‌ಸ್ಟಾರ್‌ ನಾಪತ್ತೆಯಾಗಿ 23 ವರ್ಷಾನೇ ಕಳೀತು, ಇನ್ನೂ ಪತ್ತೆಯಾಗಿಲ್ಲ!

ಸಿನಿಮಾರಂಗವೆಂಬುದು ಬಣ್ಣದ ಲೋಕ ಅನ್ನೋದು ನೂರಕ್ಕೆ ನೂರು ನಿಜ. ಸಿನಿಮಾದಲ್ಲಿ ಅವಕಾಶ ಸಿಗುವ ವರೆಗೂ ಎಲ್ಲವೂ ಥಳುಕು ಬಳುಕಿನಿಂದ ಕೂಡಿರುತ್ತದೆ. ಅವಕಾಶ ಕಡಿಮೆಯಾಗುತ್ತಾ ಹೋದಂತೆ ಎಲ್ಲಾ ಬಣ್ಣವು ಕಳಚಿ ಬೀಳುತ್ತಾ ಹೋಗುತ್ತದೆ. ಬಾಲಿವುಡ್ ನಟರು ಯಶಸ್ಸನ್ನು ಕಂಡಾಗ ಆರಾಮದಾಯಕ ಜೀವನವನ್ನು ನಡೆಸುತ್ತಾರೆ. ಆದರೆ ಯಶಸ್ಸು ಮರೆಯಾದ ನಂತರ ಜೀವನ ನಡೆಸಲು ಕಷ್ಟಪಡುತ್ತಾರೆ. 

27

ನೇಮ್‌, ಫೇಮ್ ಕಡಿಮೆಯಾದ ನಂತರ ಸಣ್ಣ ಮನೆಯಲ್ಲಿ ಹೊತ್ತಿನ ಊಟಕ್ಕೂ ಪರದಾಡುತ್ತಾ ಜೀವನ ನಡೆಸಿದ ಅದೆಷ್ಟೋ ನಟ-ನಟಿಯರು ಇದ್ದಾರೆ. ಅಂಥಾ ಒಂದು ಹೆಸರು ರಾಜ್ ಕಿರಣ್. 80ರ ದಶಕದ ಬಾಲಿವುಡ್ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸಿದ ನಟ. ಆದರೆ ಈಗ ರಾಜ್‌ ಕಿರಣ್‌ ಬಗ್ಗೆಯಾಗಲೀ, ಅವರ ಕುಟುಂಬದ ಬಗ್ಗೆಯಾಗಲೀ ಹಲವರಿಗೆ ತಿಳಿದಿಲ್ಲ.

37

ರಾಜ್ ಕಿರಣ್ ಅವರ ಮಗಳು ರಿಷಿಕಾ ಮಹತಾನಿ ರಿಶ್‌ಫೈನ್ ಎಂಬ ಆಭರಣ ಬ್ರಾಂಡ್‌ನ ಸಣ್ಣ ಬಿಸಿನೆಸ್ ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ. ರಿಷಿಕಾ ಮಹತಾನಿ, ರವಿ ಶಾ ಅವರನ್ನು ಮದುವೆಯಾಗಿದ್ದಾರೆ. ಚಿಕಾಗೋದಲ್ಲಿ ವಾಸಿಸುತ್ತಿದ್ದಾರೆ.

47

ರಾಜ್ ಕಿರಣ್ ಅವರು ಕರ್ಜ್‌ ಸಿನಿಮಾದಲ್ಲಿ ಮಾಡಿದ ರವಿ ವರ್ಮಾ ಪಾತ್ರಕ್ಕಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ, ಇದು ಅವರಿಗೆ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು. ಕರ್ಜ್ ಸಿನಿಮಾದಲ್ಲಿ ರಿಷಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

57

ವೃತ್ತಿಜೀವನದ ನಂತರ, ರಾಜ್ ಕಿರಣ್ ಖಿನ್ನತೆಗೆ ಒಳಗಾದರು. ಹಲವು ಬಿಕ್ಕಟ್ಟುಗಳನ್ನು ಎದುರಿಸಿದರು. 2000 ರ ದಶಕದ ಆರಂಭದಲ್ಲಿ, ಅವರನ್ನು ಮುಂಬೈನ ಬೈಕುಲ್ಲಾ ಮಾನಸಿಕ ಆಶ್ರಯಕ್ಕೆ ಸೇರಿಸಲಾಯಿತು. ಅಂದಿನಿಂದ, ನಟ ಕಣ್ಮರೆಯಾಗಿದ್ದಾರೆ.

67

ವರ್ಷಗಳ ನಂತರ, ಅವರ ಮಾಜಿ ಸ್ನೇಹಿತೆ ದೀಪ್ತಿ ನೇವಲ್ ಅವರನ್ನು ಹುಡುಕಲು ಫೇಸ್‌ಬುಕ್‌ನಲ್ಲಿ ಜನರಿಗೆ ಮನವಿ ಮಾಡಿದರು. ರಾಜ್ ಕಿರಣ್‌ ನ್ಯೂಯಾರ್ಕ್‌ನಲ್ಲಿ ಕ್ಯಾಬ್ ಓಡಿಸುತ್ತಿದ್ದಾನೆ ಎಂಬ ಮಾಹಿತಿಯಿದೆ ಎಂದು ತಿಳಿಸಿದ್ದರು. 2011ರಲ್ಲಿ, ರಿಷಿ ಕಪೂರ್ ಅವರು ರಾಜ್ ಅವರ ಸಹೋದರನಿಂದ ಅವರು ಅಟ್ಲಾಂಟಾದಲ್ಲಿ ಮಾನಸಿಕ ಆಶ್ರಯದಲ್ಲಿದ್ದರು ಎಂದು ತಿಳಿಸಿದ್ದಾಗಿ ಹೇಳಿದರು.

77

ಆದರೆ, ರಾಜ್ ಕಿರಣ್ ಅವರ ಪುತ್ರಿ ಇದನ್ನು ಅಲ್ಲಗಳೆದಿದ್ದು, ಕುಟುಂಬದವರು ಇನ್ನೂ ಅವರನ್ನು ಹುಡುಕುತ್ತಿದ್ದಾರೆ ಎಂದು ಹೇಳಿದ್ದಾರೆ. ನಟ ಎಲ್ಲಿದ್ದಾರೆ ಎಂಬುದು ಇದುವರೆಗೂ ತಿಳಿದುಬಂದಿಲ್ಲ. ರಿಷಿಕಾ ಮಹತಾನಿ ಇನ್ನೂ ತನ್ನ ತಂದೆಯನ್ನು ಹುಡುಕುತ್ತಿದ್ದಾರೆ. ಯಶಸ್ವಿ ವ್ಯಾಪಾರವನ್ನು ಸಹ ಮುನ್ನಡೆಸುತ್ತಿದ್ದಾರೆ. ತಾವು ಇಷ್ಟಪಟ್ಟ ವ್ಯಕ್ತಿಯನ್ನು ಸಹ ಮದುವೆಯಾಗಿದ್ದಾರೆ. 

Read more Photos on
click me!

Recommended Stories