Golden Dressನಲ್ಲಿ ಮಿಂಚಿದ Rashmika Mandanna: ಕಿರಿಕ್ ಬೆಡಗಿ ಪೋಸ್ ನೋಡಿ ಡವ್ ರಾಣಿ ಎಂದ ಫ್ಯಾನ್ಸ್‌!

Published : Nov 04, 2023, 08:43 AM IST

ಕಿರಿಕ್‌ ಬೆಡಗಿ ರಶ್ಮಿಕಾ ಸದ್ಯ ಪ್ಯಾನ್ ಇಂಡಿಯಾ ಚಿತ್ರ ಅನಿಮಲ್ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸಿನಿಮಾ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದೆಲ್ಲದರ ನಡುವೆ ರಶ್ಮಿಕಾ ಮಂದಣ್ಣ ಅವರ ಇತ್ತೀಚಿನ ಫೋಟೋಶೂಟ್ ನೆಟ್ಟಿಗರ ಮನಸೆಳೆದಿದೆ.  

PREV
17
Golden Dressನಲ್ಲಿ ಮಿಂಚಿದ Rashmika Mandanna: ಕಿರಿಕ್ ಬೆಡಗಿ ಪೋಸ್ ನೋಡಿ ಡವ್ ರಾಣಿ ಎಂದ ಫ್ಯಾನ್ಸ್‌!

ಕನ್ನಡ ಚಿತ್ರರಂಗದಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷಾ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ನ್ಯಾಶನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ಸೋಷಿಯಲ್​ ಮೀಡಿಯಾದಲ್ಲಿ ಆಗಾಗ್ಗೆ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

27

ಮಿರ ಮಿರ ಮಿಂಚುವ ಡ್ರೆಸ್​​ ತೊಟ್ಟ ನಟಿ ರಶ್ಮಿಕಾ ಮಂದಣ್ಣ ಗ್ಲಾಮರಸ್​ ಫೋಟೋಶೂಟ್​ ಮೂಲಕ ಮಿಂಚುತ್ತಿದ್ದಾರೆ. ಗೋಲ್ಡನ್‌​ ಡ್ರೆಸ್​ ಧರಿಸಿ ಶ್ರೀವಲ್ಲಿ ಫೋಟೋಗೆ ಭರ್ಜರಿ ಪೋಸ್ ಕೊಟ್ಟಿದ್ದಾರೆ.

37

ಸಾಮಾಜಿಕ ಜಾಲತಾಣದಲ್ಲಿ ನಟಿ ರಶ್ಮಿಕಾ ಮಂದಣ್ಣ ಹಂಚಿಕೊಂಡಿರುವ ಪೋಟೋಗಳಿಗೆ ನೆಟ್ಟಿಗರು, ಗೋಲ್ಡನ್‌ ಚಿಟ್ಟೆ, ಬಾರ್ಬಿ ಗರ್ಲ್‌, ಸೋ ಹಾಟ್, ವಾವ್, ಡವ್ ರಾಣಿ ಅಂತೆಲ್ಲಾ ಕಾಮೆಂಟ್ ಮಾಡಿದ್ದಾರೆ,

47

ಅನಿಮಲ್ ಸಿನಿಮಾ ಹಾಡಿನಲ್ಲಿ ರಣಬೀರ್ ಕಪೂರ್​ ಜೊತೆ ಲಿಪ್ ಲಾಕ್ ಮಾಡಿದ ರಶ್ಮಿಕಾ ವಿಡಿಯೋ ವೈರಲ್​ ಆಗ್ತಿದ್ದಂತೆ, ಬೋಲ್ಡ್​ ಫೋಟೋ ಹಂಚಿಕೊಂಡ ರಶ್ಮಿಕಾ ಇದೀಗ ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ.

57

ಸ್ಟಾರ್ ಹೀರೋಗಳ ಜೊತೆ ನಟಿಸಿ ಸೈ ಎನಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​ಗಳಲ್ಲಿ ರಶ್ಮಿಕಾಗೆ ಸಖತ್​ ಡಿಮ್ಯಾಂಡ್​ ಕ್ರಿಯೇಟ್ ಆಗಿದೆ.

67

ಜನಪ್ರಿಯ ಸಾಮಾಜಿಕ ಜಾಲತಾಣ ವೇದಿಕೆ ಇನ್​ಸ್ಟಾಗ್ರಾಮ್​ ಒಂದರಲ್ಲೇ ರಶ್ಮಿಕಾ 39.3 ಮಿಲಿಯನ್​ ಫಾಲೋವರ್ಸ್ ಸಂಪಾದಿಸಿದ್ದು, ಈವರೆಗೆ 626 ಪೋಸ್ಟ್​​ಗಳನ್ನು ಶೇರ್ ಮಾಡಿದ್ದಾರೆ. ಅಪರೂಪಕ್ಕೆ ಹೊಸ ಫೋಟೋಗಳನ್ನು ಹಂಚಿಕೊಂಡರೂ, ಇವರ ಫೋಟೋಗಳಿಗಾಗಿ ಅಭಿಮಾನಿಗಳು ಕಾದು ಕುಳಿತಿರುತ್ತಾರೆ.

77

ಸದ್ಯಕ್ಕೆ ರಶ್ಮಿಕಾ ಮಂದಣ್ಣ ಬಹುನಿರೀಕ್ಷಿತ ಸಿನಿಮಾ ಪುಷ್ಪ 2 ಸಿನಿಮಾಗಾಗಿ ಅಭಿಮಾನಿಗಳು ಕಾಯ್ತಿದ್ದಾರೆ. ಪುಷ್ಪ ಸಿನಿಮಾ ಜೊತೆ ಈ ವರ್ಷ ರಶ್ಮಿಕಾ ಅಭಿನಯದ 4 ಸಿನಿಮಾಗಳು ತೆರೆಗೆ ಬರಲಿದ್ದು, ನ್ಯಾಷನಲ್ ಕ್ರಶ್ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

Read more Photos on
click me!

Recommended Stories