ಇಬ್ಬರಲ್ಲಿ ಯಾರು ಕ್ಯೂಟ್?; ಹೊಸ ಪಪ್ಪಿ ಖರೀದಿಸಿದ ನಟಿ ಸಾಯಿ ಪಲ್ಲವಿ

First Published Jan 10, 2023, 10:00 AM IST

ನಟಿ ಸಾಯಿ ಪಲ್ಲವಿ ಕುಟುಂಬಕ್ಕೆ ಹೊಸ ಅತಿಥಿ ಎಂಟ್ರಿ. ಕ್ಯೂಟಿ ಫೋಟೋ ಅಪ್ಲೋಡ್ ಮಾಡಿದ ಪಲ್ಲವಿಗೆ ನೆಟ್ಟಿಗರ ಮೆಚ್ಚುಗೆ... 
 

Sai Pallavi

ಬಹುಭಾಷಾ ನಟಿ ಸಾಯಿ ಪಲ್ಲವಿ ಸಿನಿಮಾ ಕೆಲಸಗಳಲ್ಲಿ ಎಷ್ಟು ಆಕ್ಟಿವ್ ಆಗಿದ್ದಾರೆ, ಸೋಷಿಯಲ್ ಮೀಡಿಯಾದಿಲ್ಲಿ ಅಷ್ಟೇ ಇನ್‌ಆಕ್ಟಿವ್ ಆಗಿದ್ದಾರೆ. ಈ ವಿಚಾರದಲ್ಲಿ ಅಭಿಮಾನಿಗಳಿಗೆ ಕೊಂಚ ಬೇಸರವಿದೆ. 

 ಇಂದು ಬೆಳ್ಳಂಬೆಳಗ್ಗೆ ಸಾಯಿ ಪಲ್ಲವಿ ತಮ್ಮ ಪ್ರೀತಿಯ ಶ್ವಾನ ಜೊತೆ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. 'ಹಲ್ಲೋ ಸನ್‌ಶೈನ್‌' ಎಂದು ಬರೆದುಕೊಂಡಿದ್ದಾರೆ. 

ಸೂರ್ಯನಿಂಗೆ ಬೆನ್ನು ತೋರಿಸಿಕೊಂಡು ನಿಂತಿರುವ ಪಲ್ಲವಿ ಕೈಯಲ್ಲಿ ಹೊಸ ಪಪ್ಪಿಯನ್ನು ಹಿಡಿದುಕೊಂಡು ಸೆಲ್ಫಿ ಕ್ಲಿಕ್ ಮಾಡಿಕೊಂಡಿದ್ದಾರೆ. ಇಬ್ಬರಲ್ಲಿ ಯಾರು ಕ್ಯೂಟ್ ಹೇಳಿ ಎನ್ನುತ್ತಾರೆ ನೆಟ್ಟಿಗರು. 

ಪಲ್ಲವಿ ಸಿಂಪಲ್ ಗುಣ ಮತ್ತು ಸಿಂಪಲ್ ಸ್ಟೈಲ್‌ ಜನರಿಗೆ ತುಂಬಾ ಇಷ್ಟವಾಗಿದೆ. ಯಾವಾಗ ನೋಡಿದ್ದರೂ ಕೈಯಲ್ಲೊಂದು ರುದ್ರಾಕ್ಷಿ, ಲೂಸ್ ಹೇರ್, ಮೇಕಪ್ ಇರಲ್ಲ..ಪಕ್ಕಾ ಮನೆ ಹುಡುಗಿ ಲುಕ್‌ನಲ್ಲಿರುತ್ತಾರೆ. 

ಮೆಡಿಲ್ ವಿದ್ಯಾಭ್ಯಾಸ ಮಾಡುತ್ತಿರುವ ಸಾಯಿ ಪಲ್ಲವಿ ತಮ್ಮ ಊರಿನಲ್ಲಿ ಆಸ್ಪತ್ರೆ ಕಟ್ಟಿದಬೇಕು ಅಲ್ಲಿನ ಜನರಿಗೆ ಸೇವೆ ಮಾಡಬೇಕು ಎಂದು ನಿರ್ಧಾರ ಮಾಡಿರುವ ವಿಚಾರ ಸುದ್ದಿಯಾಗಿತ್ತು.
 

 ಇನ್ನು ಕೆಲಸಕ್ಕೆ ಬಂದ್ರೆ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಪುಷ್ಪ 2: ದಿ ರೈಸ್ ಸಿನಿಮಾದಲ್ಲಿ ಅರ್ಜುನ್ ಸಹೋದರಿ ಪಾತ್ರಕ್ಕೆ ಪಲ್ಲವಿ ಸಂಪರ್ಕ ಮಾಡಲಾಗಿದೆ. ಪಲ್ಲವಿ ಇನ್ನೂ ಒಪ್ಪಿಗೆ ಕೊಟ್ಟಿಲ್ಲ. 

click me!