ಸುಳ್ಳು ವದಂತಿ ಹುಟ್ಟುಹಾಕಿದ ಈ ನಟನಿಗೆ ಕಪಾಳಮೋಕ್ಷ ಮಾಡಿದ್ದರು Nutan

First Published | Jun 4, 2022, 5:33 PM IST

ಸೌಂದರ್ಯಕ್ಕೆ ಮಾತ್ರವಲ್ಲ ಅಭಿನಯಕ್ಕೂ ಫೆಮಸ್‌ ಆಗಿದ್ದ ನೂತನ್ (Nutan)ಬಾಲಿವುಡ್‌ ಕಂಡ ಅದ್ಭುತ ನಟಿಯರಲ್ಲಿ ಒಬ್ಬರು. ನಟಿ ತಮ್ಮ ವೃತ್ತಿ ಜೀವನದಲ್ಲಿ ಒಂದಕ್ಕಿಂತ ಹೆಚ್ಚು ಹಿಟ್‌ ಚಿತ್ರಗಳನ್ನು ನೀಡಿರುವ ನೂತನ್ ಅವರಿಗೆ
ಇಂದು 86ನೇ ಜನ್ಮದಿನ. ಮುಂಬೈನಲ್ಲಿ 4 ಜೂನ್ 1936 ರಂದು ಜನಿಸಿದ ನಟಿ ಕ್ಯಾನ್ಸರ್‌ನಿಂದ ನಿಧನರಾದರು. 54 ನೇ ವಯಸ್ಸಿನಲ್ಲಿ ಅವರು ಇಹಲೋಕಕ್ಕೆ ವಿದಾಯ ಹೇಳಿದ್ದರು. ಇವರ ಜೀವನದ ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ನೂತನ್ 1950 ರ ಅವರ  ತಾಯಿಯ ಸಿನಿಮಾ  ಬೇಟಿ ಸೆ ಕಿ ಜೋ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು 1955 ರ ಸೀಮಾ ಚಲನಚಿತ್ರದೊಂದಿಗೆ ಪ್ರಸಿದ್ಧರಾದರು. ಆ ನಂತರ ಒಂದಕ್ಕಿಂತ ಹೆಚ್ಚು ಸಿನಿಮಾ ಮಾಡಿದ್ದರು.

ದೇವಾನಂದ್, ಸುನೀಲ್ ದತ್, ರಾಜ್‌ಕುಮಾರ್ ಜೊತೆಗಿನ ಅವರ ಜೋಡಿ ಎಲ್ಲರಿಗೂ ಇಷ್ಟವಾಯಿತು. ನಟನೆ ನೂತನ್ ರಕ್ತದಲ್ಲಿಯೇ ಬಂದಿತ್ತು. ಚಲನಚಿತ್ರ ನಿರ್ದೇಶಕ ಕುಮಾರ್ಸೇನ್ ಸಮರ್ಥ್ ಮತ್ತು ನಟಿ ಶೋಭನಾ ಸಮರ್ಥ್ ಅವರು ನೂತನ್ ಅವರ ಪೋಷಕರು.

Tap to resize

 ತನುಜಾ ನೂತನ್‌ ಅವರ  ಸಹೋದರಿ. ನೂತನ್ ಮತ್ತು ತನುಜಾ ತಮ್ಮ ತಾಯಿಯಂತೆ ನಟನೆಯನ್ನು ವೃತ್ತಿಯಾಗಿ ಮಾಡಿಕೊಂಡರು ಮತ್ತು ಇಬ್ಬರೂ ಯಶಸ್ಸಿನ ಮೆಟ್ಟಿಲು ಏರಿದರು.

ನೂತನ್ ತನ್ನ ಅತ್ಯುತ್ತಮ ಅಭಿನಯಕ್ಕಾಗಿ ಐದು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದರು. ಅವರ ನಿಧನದ ನಂತರ, ಫೋರ್ಬ್ಸ್ 2013 ರಲ್ಲಿ ಭಾರತೀಯ ಚಿತ್ರರಂಗದ 25 ಯಶಸ್ವಿ ನಟನಾ ಪ್ರದರ್ಶನಗಳ ಪಟ್ಟಿಯಲ್ಲಿ ನೂತನ್ ಹೆಸರೂ ಸೇರಿತ್ತು. ಮತ್ತೊಂದೆಡೆ, Rediff.com ಶ್ರೇಷ್ಠ ನಟಿಯರ ಪಟ್ಟಿಯಲ್ಲಿ ನೂತನ್ ಅವರನ್ನು ಮೂರನೇ ಸ್ಥಾನದಲ್ಲಿ ಇರಿಸಿದೆ.
 

ದೇವ್ ಆನಂದ್ ಜೊತೆಗಿನ ನೂತನ್ ಜೋಡಿಯು ಭಾರೀ ಹಿಟ್ ಆಗಿತ್ತು. ಇವರಿಬ್ಬರೂ ಸೇರಿ 'ಪೇಯಿಂಗ್ ಗೆಸ್ಟ್', 'ಮಂಝಿಲ್' ಮತ್ತು 'ತೇರೆ ಘರ್ ಕೆ ಸಾಮ್ನೆ' ಮುಂತಾದ ಹಿಟ್‌ಗಳನ್ನು ನೀಡಿದರು. 

ನೂತನ್ 1959 ರಲ್ಲಿ ನೌಕಾಪಡೆಯ ಅಧಿಕಾರಿ ರಜನೀಶ್ ಬಹ್ಲ್ ಅವರನ್ನು ವಿವಾಹವಾದರು. ಅವರ ಮಗ ಮೊಹ್ನಿಶ್ ಬೆಹ್ಲ್ . ಆದರೆ, ಮದುವೆಯ ನಂತರ ನೂತನ್ ಸಿನಿಮಾ ಮಾಡಲು ನಿರಾಕರಿಸಿದರು. ಆದರೆ  ಹೆಚ್ಚು ಪಾತ್ರಗಳನ್ನು ಪಡೆಯುತ್ತಿದ್ದರು. ಆದ್ದರಿಂದ ಅವರು ಮತ್ತೆ ಪರದೆಯ ಮೇಲೆ ಕಾಣಿಸಿಕೊಂಡರು

ಸಂದರ್ಶನವೊಂದರಲ್ಲಿ ಸಂಜೀವ್ ಕುಮಾರ್ ಅವರಿಗೆ ಸಂಬಂಧಿಸಿದ ಘಟನೆಯೊಂದನ್ನು ನೂತನ್ ಪ್ರಸ್ತಾಪಿಸಿದ್ದರು.1969ರಲ್ಲಿ ನೂತನ್ ಸಂಜೀವ್ ಕುಮಾರ್ ಜೊತೆ ದೇವಿ ಸಿನಿಮಾ ಮಾಡುತ್ತಿದ್ದರು. ಈ ವೇಳೆ ಸೆಟ್ ತಲುಪಿದಾಗ ಆಕೆಯ ಕಣ್ಣುಗಳು ಪತ್ರಿಕೆಯ ಮೇಲೆ ಬಿದ್ದವು. ಅದರಲ್ಲಿ ಸಂಜೀವ್ ಕುಮಾರ್ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ಬರೆಯಲಾಗಿತ್ತು. ಇದನ್ನು ಕಂಡು ನೂತನ್ ಕೋಪಗೊಂಡರು. ಮಗುವಿನ ತಾಯಿ ಆಗಿದ್ದ ನಟಿ ಬಗ್ಗೆ  ಸಂಜೀವ್ ಕುಮಾರ್ ಅವರೇ ಈ ವದಂತಿ ಹಬ್ಬಿಸಿರುವುದು ಗೊತ್ತಾದಾಗ ಅವರ ಕೋಪ ಹೆಚ್ಚಾಯಿತು. ಸೆಟ್ ನಲ್ಲೇ ಸಂಜೀವ್ ಕುಮಾರ್ ಗೆ ಕಪಾಳಮೋಕ್ಷ ಮಾಡಿದರು.

ನೂತನ್ ಅವರಂತಹ ಅತ್ಯುತ್ತಮ ನಟಿಯನ್ನು ಕ್ಯಾನ್ಸರ್  ನಮ್ಮಿಂದ ದೂರ ಮಾಡಿತು. ಆದರೆ ಅವರ ಮಗ ಮೊಹ್ನಿಶ್ ಬೆಹ್ಲ್ ಅವರು ತಮ್ಮ ತಾಯಿ ಕ್ಯಾನ್ಸರ್‌ನಲ್ಲಿಯೂ ತುಂಬಾ ಸಕಾರಾತ್ಮಕವಾಗಿದ್ದರು. ಅನಾರೋಗ್ಯದ ಸಂದರ್ಭದಲ್ಲೂ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು ಎಂದು ಹೇಳಿದರು. ತಾಯಿಯ ನಿರ್ಗಮನದ ನಂತರ, ಮೊಹ್ನಿಶ್ ಅವರ ಚಲನಚಿತ್ರಗಳನ್ನು ನೋಡುವುದಿಲ್ಲ. ಸಿನಿಮಾ ನೋಡಿದ ಮೇಲೆ ಅವರನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದ ಅವರು  ಸಿನಿಮಾದಿಂದ ದೂರ ಉಳಿದಿದ್ದಾರೆ.

Latest Videos

click me!