IIFA Awards 2022 ಗ್ಲಾಮ್ ಲುಕ್‌ನಲ್ಲಿ ಕಂಗೊಳಿಸಿದ ಬಾಲಿವುಡ್ ಚೆಲುವೆಯರು!
First Published | Jun 4, 2022, 5:31 PM ISTಶುಕ್ರವಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ IIFA ಆವಾರ್ಡ್ಸ್ 2022 ರಲ್ಲಿ (IIFA Awards 2022) ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez), ಸಾರಾ ಅಲಿ ಖಾನ್ (Sara Ali Khan), ನೋರಾ ಫತೇಹಿ (Nora Fatehi), ಅನನ್ಯ ಪಾಂಡೆ (Ananya Panday) , ಲಾರಾ ದತ್ತಾ ಸೇರಿದಂತೆ ಹಲವು ತಾರೆಯರು ಹಸಿರು ಕಾರ್ಪೆಟ್ ಮೇಲೆ ತಮ್ಮ ಸೌಂದರ್ಯವನ್ನು ಮೆರೆದರು. ಸಲ್ಮಾನ್ ಖಾನ್, ನೇಹಾ ಕಕ್ಕರ್, ಫರ್ದೀನ್ ಖಾನ್, ರಾಹುಲ್ ದೇವ್, ರಿತೇಶ್ ದೇಶಮುಖ್ ಸೇರಿದಂತೆ ಅನೇಕ ನಟರು ಹಸಿರು ಕಾರ್ಪೆಟ್ ಮೇಲೆ ನಡೆದರು. IIFA ನ ವರ್ಣರಂಜಿತ ಸಂಜೆಯ ಫೋಟೋಗಳು ಇಲ್ಲಿವೆ.