ಕಿವಿಗಳಲ್ಲಿ ರಕ್ತ ಸುರಿಯುತ್ತಿದ್ದರೂ ಡ್ಯಾನ್ಸ್‌ ನಿಲ್ಲಿಸದ ಐಶ್ವರ್ಯಾ ರೈ!

Suvarna News   | Asianet News
Published : Aug 19, 2020, 04:41 PM IST

ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ಮಾಧುರಿ ದೀಕ್ಷಿತ್‌, ಐಶ್ವರ್ಯಾ ರೈ ಹಾಗೂ ಶಾರುಖ್‌ ಖಾನ್‌ ಮುಖ್ಯ ಪಾತ್ರದಲ್ಲಿರುವ ಚಿತ್ರ ದೇವದಾಸ್. ಈ ಸಿನಿಮಾ ಬಾಲಿವುಡ್‌ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಒಂದು. ಹಲವು ದಾಖಲೆಗಳ ಜೊತೆಗೆ ಆವಾರ್ಡ್‌ಗಳನ್ನು ಪಡೆದುಕೊಂಡಿದೆ. ಈ ಸಿನಿಮಾದ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ, ಅದು ನಿಮ್ಮನ್ನು ಮತ್ತೆ ಆ ಚಿತ್ರ ನೋಡುವಂತೆ ಮಾಡುವುದು ಗ್ಯಾರಂಟಿ.

PREV
18
ಕಿವಿಗಳಲ್ಲಿ ರಕ್ತ ಸುರಿಯುತ್ತಿದ್ದರೂ ಡ್ಯಾನ್ಸ್‌ ನಿಲ್ಲಿಸದ  ಐಶ್ವರ್ಯಾ ರೈ!

ಬಾಲಿವುಡ್‌ನ ಅತ್ಯುತ್ತಮ ಚಲನಚಿತ್ರಗಳಲ್ಲಿ ದೇವದಾಸ್ ಕೂಡ ಒಂದು. ಈ ಚಿತ್ರವು ಐದು ರಾಷ್ಟ್ರೀಯ ಪ್ರಶಸ್ತಿಗಳನ್ನು ಮತ್ತು 11 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು, ಈ ಹಿಂದೆ ದಿಲ್ವಾಲೆ ದುಲ್ಹಾನಿಯಾ ಲೆ ಜಯೆಂಗೆ ಚಿತ್ರ ಹಲವು ದಾಖಲೆಗಳನ್ನು ಮುರಿಯುವಲ್ಲಿ ಈ ಚಿತ್ರ ಯಶಸ್ವಿಯಾಗಿತ್ತು.

28

ಅಷ್ಟೇ ಅಲ್ಲ, 2010 ರಲ್ಲಿ ಎಂಪೈರ್ ಮ್ಯಾಗ್‌ಜೀನ್‌ನ  'ದಿ 100 ಬೆಸ್ಟ್‌ ಫಿಲ್ಮಂಸ್‌ ಅಫ್‌ ವರ್ಲ್ಟ್'ನಲ್ಲಿ  ದೇವದಾಸ್ 74ನೇ ಸ್ಥಾನದಲ್ಲಿತ್ತು ಮತ್ತು ಟೈಮ್ ಮ್ಯಾಗ್‌ಜೀನ್‌ ಆ ವರ್ಷ ವಿಶ್ವದಾದ್ಯಂತ ಬಿಡುಗಡೆಯಾದ ಎಲ್ಲಾ ಚಲನಚಿತ್ರಗಳಲ್ಲಿ ಈ ಸಿನಿಮಾವನ್ನು 2002ರ ಅತ್ಯುತ್ತಮ ಚಲನಚಿತ್ರವೆಂದು ಪರಿಗಣಿಸಲಾಗಿದೆ.

38

ಸಂಜಯ್ ಲೀಲಾ ಭನ್ಸಾಲಿಯ ಈ ಸಿನಿಮಾದಲ್ಲಿ ಶಾರುಖ್ ಖಾನ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ಮತ್ತು ಜಾಕಿ ಶ್ರಾಫ್ ಮುಂತಾದ ನಟರು ನಟಿಸಿದ್ದಾರೆ. ಮನಸ್ಸಿಗೆ ಮುದ ನೀಡುವ ಪ್ರದರ್ಶನಗಳಿಂದ ಹಿಡಿದು ನೃತ್ಯ ಸಂಯೋಜನೆ,  ಅಸಾಧಾರಣ ವೇಷಭೂಷಣ, ದೊಡ್ಡ ಸೆಟ್‌ ಈ ಚಿತ್ರದ ಆಕರ್ಷಣೆ. 

48

ಪಾರೂ (ದೇವದಾಸ್ ಅವರ ಬಾಲ್ಯ ಪ್ರೇಮಿ) ಪಾತ್ರದಲ್ಲಿ ನಟಿಸಿದ ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ಜೊತೆಗೆ 'ಡೋಲಾ ರೆ ದೋಲಾ' ಹಾಡಿಗೆ ಡ್ಯಾನ್ಸ್ ಮಾಡುವಾಗ, ಆಕೆ ಧರಿಸಿದ್ದ ಭಾರವಾದ ಕಿವಿಯೋಲೆಗಳಿಂದಾಗಿ ಕಿವಿಯಿಂದ ರಕ್ತ ಬರುತ್ತಿತ್ತು. ಆದರೂ, ಡ್ಯಾನ್ಸ್ ನಿಲ್ಲಿಸರಿಲ್ಲಿ ಐಶ್ವರ್ಯಾ.

58

ಐಶ್ವರ್ಯಾ ಡ್ಯಾನ್ಸ್ ನಿಲ್ಲಿಸಿದ ಮೇಲೆಯೇ ಚಿತ್ರ ತಂಡಕ್ಕೆ ಅವರ ಕಿವಿಯಲ್ಲಿ ರಕ್ತ ಸುರಿಯುತ್ತಿದ್ದು ಗಮನಕ್ಕೆ ಬಂದಿದ್ದು. ಮತ್ತೊಂದೆಡೆ, ಹಾಡಿನ ಶೂಟಿಂಗ್ ಸಮಯದಲ್ಲಿ ಮಾಧುರಿ ಗರ್ಭಿಣಿಯಾಗಿದ್ದಳು.

68

ಪಂಡಿತ್ ಬಿರ್ಜು ಮಹಾರಾಜ್ ಬರೆದಿರುವ ಮಾಧುರಿಯ (ಚಂದ್ರಮುಖಿ) ಇಂಟ್ರಡಕ್ಷನ್‌ ಸಾಂಗ್‌  'ಕಾಹೆ ಚೇಡ್ ಮೋಹೆ' ಚಲನಚಿತ್ರದ ಅತ್ಯುತ್ತಮ ನೃತ್ಯ ಸಂಯೋಜನೆಯ ಹಾಡುಗಳಲ್ಲೊಂದು. ನಟಿ ಧರಿಸಿದ್ದ ಸುಮಾರು 15 ಲಕ್ಷ ಬೆಲೆಯ 30ಕೆಜಿ ತೂಕದ ಗಾಗ್ರಾವನ್ನು ಡಿಸೈನರ್ ಜೋಡಿ ಅಬು ಜಾನಿ ಮತ್ತು ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ್ದರು.

78

2002ರಲ್ಲಿ ಆರು ಸೆಟ್‌ಗಳಿಗೆ 20 ಕೋಟಿಗಳಂತೆ 50 ಕೋಟಿ ರೂ.ಗಳ ಬಜೆಟ್‌ನಲ್ಲಿ ದೇವದಾಸ್ ನಿರ್ಮಿಸಲಾಯಿತು. 42 ಜನರೇಟರ್‌ಗರ್ಗಳ ಸಹಾಯದಿಂದ 30 ಲಕ್ಷ ವ್ಯಾಟ್ ವಿದ್ಯುತ್ ಪೂರೈಸಲು 700 ಲೈಟ್‌ಮೆನ್‌  ಕೆಲಸ ಮಾಡಿದ್ದರು.

88

 'ಹವೇಲಿಯಲ್ಲಿ ಪಾರೂವಿನ ರೂಮ್‌ಗಾಗಿ 3 ಕೋಟಿ ರೂ. ವೆಚ್ಚದ 1.22 ಲಕ್ಷ ಗಾಜಿನ ತುಂಡುಗಳನ್ನು ಬಳಸಲಾಗಿದೆ. ಕೇವಲ ಚಂದ್ರಮುಖಿಯ ಕೋಟಾ ಒಂದಕ್ಕೆ 12 ಕೋಟಿ ರೂ. ವೆಚ್ಚವಾಗಿತ್ತು' ಎಂದು  ಇಂಡಿಯಾ ಟುಡೇ ವರದಿ ಮಾಡಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories