ಕರೀನಾ ಕಪೂರ್ ಅಲ್ಲ, ಸೀತಾ ಪಾತ್ರದಲ್ಲಿ ಕಂಗನಾ ರಣಾವತ್!

Suvarna News   | Asianet News
Published : Sep 15, 2021, 05:22 PM IST

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಮಹಾಕಾವ್ಯ ಆಧಾರಿತ  The Incarnation–SITA ದಲ್ಲಿ ಸೀತಾ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ನಿರ್ದೇಶಕ ಅಲೌಕಿಕ್ ದೇಸಾಯಿ ಮತ್ತು ನಿರ್ಮಾಪಕ ಸಲೋನಿ ಶರ್ಮಾ ಹೇಳಿದ್ದಾರೆ. ಈ ಮೊದಲು ಈ ಪಾತ್ರಕ್ಕೆ ಕರೀನಾ ಕಪೂರ್‌ ಹೆಸರು ಕೇಳಿ ಬಂದಿತ್ತು. ಆದರೆ ನಟಿ ಹೆಚ್ಚು ಸಂಭಾವನೆ ಡಿಮ್ಯಾಂಡ್‌ ಮಾಡಿದ ಕಾರಣ ಅವರನ್ನು ಕೈ ಬಿಡಲಾಯಿತು ಎಂದು ವರದಿಗಳು ಹೇಳಿವೆ.

PREV
17
ಕರೀನಾ ಕಪೂರ್ ಅಲ್ಲ, ಸೀತಾ ಪಾತ್ರದಲ್ಲಿ ಕಂಗನಾ ರಣಾವತ್!

ಭಾರತೀಯ ಪುರಾಣಗಳಲ್ಲಿ  ರಾಮಾಯಣವು ಅತ್ಯಂತ  ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಇದನ್ನು ಆಧಾರಿಸಿದ  
ದೊಡ್ಡ ಮತ್ತು ಸಣ್ಣ ಪರದೆಯ ಮೇಲೆ ಅನೇಕ ಬಾರಿ ರಿಕ್ರೀಯೇಟ್‌ ಮಾಡುವ ಪ್ರಯತ್ನಗಳು ನೆಡೆದಿದೆ.

27
कंगना रनौत

ಈಗ, ರಾಮಾಯಣವನ್ನು ಮತ್ತೆ ದೊಡ್ಡ ಪರದೆಗೆ ಅಳವಡಿಸಲಾಗುವುದು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ
ರಣಾವತ್ ಸೀತೆಯ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ದೃಢಪಟ್ಟಿದೆ. ಅಲೌಕಿಕ್ ದೇಸಾಯಿ ನಿರ್ದೇಶನದ ಮುಂಬರುವ ಎಪಿಕ್‌ ಪಿರಿಯಡ್‌ ಡ್ರಾಮಾ The Incarnation–SITA ಕುರಿತು ತಯಾರಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ. 

37
कंगना रनौत

'ಒಬ್ಬ ಮಹಿಳೆಯಾಗಿ, ಕಂಗನಾ ರಣಾವತ್‌ ಅವರನ್ನು ನಮ್ಮ ವಿಎಫ್‌ಎಕ್ಸ್ ಮ್ಯಾಗ್ನಮ್ ಓಪಸ್ 'ದಿ ಅವತಾರ ಸೀತಾ'ದಲ್ಲಿ ಸ್ವಾಗತಿಸಲು ನನಗೆ ಸಂತೋಷವಾಗುತ್ತಿದೆ. ಕಂಗನಾ ಭಾರತೀಯ ಮಹಿಳೆಯ ಚೈತನ್ಯ ಮತ್ತು ಸಾರ - ಭಯವಿಲ್ಲದ, ಬೆದರಿಸುವ ಮತ್ತು ಧೈರ್ಯಶಾಲಿಯನ್ನು ಸಂಕೇತಿಸುತ್ತಾರೆ. ಎಲ್ಲ ರೀತಿಯಲ್ಲೂ ಸಮಾನತೆಯನ್ನು ಆಚರಿಸುವ ಸಮಯವಾಗಿದೆ,' ಎಂದು ಎಸ್ ಎಸ್ ಸ್ಟುಡಿಯೊದ ನಿರ್ಮಾಪಕ ಸಲೋನಿ ಶರ್ಮಾ ಹೇಳಿದ್ದಾರೆ.

47
kangana ranaut sita

ಕಂಗನಾ ಸಿನಿಮಾದ ಟೀಸರ್ ಪೋಸ್ಟರ್ ಅನ್ನು ಕೂಡ ಬಿಡುಗಡೆ ಮಾಡಿದರು. 'ಈ ಅಪಾರ ಪ್ರತಿಭಾನ್ವಿತ ಕಲಾವಿದರ ತಂಡದೊಂದಿಗೆ ಶೀರ್ಷಿಕೆ ಪಾತ್ರದಲ್ಲಿ ಭಾಗವಹಿಸಲು ಸಂತೋಷವಾಗಿದೆ. ಸೀತಾ ರಾಮನ ಆಶೀರ್ವಾದದೊಂದಿಗೆ. ಜೈ ಸಿಯಾರಾಮ್ ' ಎಂದಿದ್ದಾರೆ.

57

ಮತ್ತೊಂದೆಡೆ, ಚಲನಚಿತ್ರ ನಿರ್ಮಾಪಕ ಓಂ ರಾವುತ್ ಈಗಾಗಲೇ ರಾಮಾಯಣದ ವಿ‍ನ್‌ ಅನ್ನು ಆದಿಪುರುಷ  ಸಿನಿಮಾದ ಮೂಲಕ ದೊಡ್ಡ ಪರದೆಯ ಮೇಲೆ ತರುತ್ತಿದ್ದಾರೆ. ಇದರಲ್ಲಿ ಪ್ರಭಾಸ್, ಕೃತಿ ಸನೋನ್, ಸೈಫ್ ಅಲಿ ಖಾನ್ ಮತ್ತು ಸನ್ನಿ ಸಿಂಗ್ ನಟಿಸಿದ್ದಾರೆ.

67

ಈಗ ರಾಮನ ಜೀವನದ ಇನ್ನೊಂದು ಚಿತ್ರ,The Incarnation–SITA ದಲ್ಲಿ ತೋರಿಸಲಾಗುವುದು. ವರದಿಗಳ ಪ್ರಕಾರ, ಚಿತ್ರದ ಬರಹಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಮತ್ತು ಸೀತೆಯ ಪಾತ್ರದಲ್ಲಿ  ಕಂಗನಾ ರಣಾವತ್ ಕಾಣಿಸಿಕೊಳ್ಳುತ್ತಿದ್ದಾರೆ.

77

ಪ್ರಸ್ತುತ, ಕಂಗನಾ ತನ್ನ ಇತ್ತೀಚಿನ ಪ್ಯಾನ್-ಇಂಡಿಯನ್ ಬಿಡುಗಡೆಯಾದ ಜೆ.ಜಯಲಲಿತಾ ಜೀವನಚರಿತ್ರೆ ತಲೈವಿ ಸಿನಿಮಾದ ಖುಷಿಯಲ್ಲಿದ್ದಾರೆ. ಇದಲ್ಲದೆ ಅವರ ಆಕೌಂಟ್‌ನಲ್ಲಿ ಧಾಕಡ್‌, ತೇಜಸ್ ಸಿನಿಮಾ ಇದೆ. ಅದೇ ಸಮಯದಲ್ಲಿ ಕಂಗನಾ ಅಯೋಧ್ಯೆ ತೀರ್ಪಿನ ಮೇಲಿನ ಸಿನಿಮಾ ಅಪರಾಜಿತ ಅಯೋಧ್ಯವನ್ನು ನಿರ್ದೇಶಿಸುತ್ತಿದ್ದಾರೆ.

click me!

Recommended Stories