ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಬಾಲಿವುಡ್‌ನ ಫೇಮಸ್ ಎಕ್ಸ್ ಕಪಲ್‌ಗಳಲ್ಲಿ ಒಬ್ಬರು. ಸ್ಟೂಡೆಂಟ್ ಅಫ್ ದಿ ಇಯರ್ ಸಿನಿಮಾ ಮೂಲಕ ಇಬ್ಬರೂ ಒಟ್ಟಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಇವರ ನಡುವೆ ಪ್ರೀತಿಯಾಗಿತ್ತು.
ಇವರಿಬ್ಬರು ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. ಆದರೆ ನಂತರ ಈ ಜೋಡಿ ಬೇರ್ಪಟ್ಟು ಅವರ ಅಭಿಮಾನಿಗಳ ಹೃದಯವನ್ನು ಮುರಿದರು. ಸ್ಟೂಡೆಂಟ್ ಆಫ್ ದಿ ಇಯರ್ ನಂತರ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಆಲಿಯಾ ಭಟ್ ಕಪೂರ್ ಅಂಡ್ ಸನ್ಸ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಇವರು ಯಾವಾಗಲೂ ತಮ್ಮ ನಡುವಿನ ಕೆಮಿಸ್ಟ್ರಿ ಮೂಲಕ ಎಲ್ಲರ
ಗಮನ ಸೆಳೆಯುತ್ತಿದ್ದರು
ಒಮ್ಮೆ ಥ್ರೋಬ್ಯಾಕ್ ಸಂದರ್ಶನದಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಆಲಿಯಾ ಭಟ್ ಗೆ ಕಿಸ್ ಮಾಡುವುದು ಬೋರಿಂಗ್ ಆಗಿತ್ತು ಎಂದು ಬಹಿರಂಗಪಡಿಸಿದರು. ನಟ ತನ್ನ ಎಕ್ಸ್ ಗರ್ಲ್ ಫ್ರೆಂಡ್ ಬಗ್ಗೆ ಹೀಗೆ ಹೇಳಲು ಕಾರಣವೇನು? ಇಲ್ಲಿದೆ ವಿವರ.
ಒಮ್ಮೆ ಸಂದರ್ಶನವೊಂದರಲ್ಲಿ, 'ಸ್ಟೂಡೆಂಟ್ ಅಫ್ ದಿ ಇಯರ್ ನಲ್ಲಿ ಆಲಿಯಾ ಭಟ್ ಜೊತೆ ಚುಂಬಿಸುವ ದೃಶ್ಯವನ್ನು ಚಿತ್ರೀಕರಿಸುವಾಗ, ಅವರು ಅನೇಕ ರಿಟೇಕ್‌ಗಳನ್ನು ತೆಗೆದುಕೊಂಡರು, ಬೆಸ್ಟ್ ಆಂಗ್ಯಲ್ ಕಂಡು ಹಿಡಿಯಲು ಪ್ರಯತ್ನಿಸಿದರು. ಇದು ತುಂಬಾ ಟೆಕ್ನಿಕಲ್ ಆಗಿತ್ತು. ಸ್ವಲ್ಪ ಸಮಯದ ನಂತರ ಅದು ಬೇಸರವಾಯಿತು ಎಂದು ಸಿದ್ಧಾರ್ಥ್ ಹೇಳಿದ್ದರು.
ಸಿದ್ದಾರ್ಥ್‌ಅವರ ಇತ್ತೀಚೆಗೆ ಬಿಡುಗಡೆಯಾದ ಶೇರ್‌ಶಾ ಸಿನಿಮಾ ಭಾರಿ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಸ್ತುತ ನಟ ಕಿಯಾರಾ ಅಡ್ವಾಣಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ಆಲಿಯಾ ಭಟ್ ರಣಬೀರ್
ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಇವರಿಬ್ಬರು ಬ್ರಹ್ಮಾಸ್ತ್ರದಲ್ಲಿ ಜೊತೆಯಾಗಿ ನಟಿಸಲಿದ್ದಾರೆ.