Link with Conman Sukesh: ಜಾಕ್ವೆಲಿನ್‌, ನೋರಾ ಫತೇಹಿಗೂ ಸುಖೇಶ್ ಚಂದ್ರಶೇಖರ್‌ಯಿಂದ ಗಿಫ್ಟ್

First Published | Dec 6, 2021, 8:00 PM IST

ಬಾಲಿವುಡ್‌ ನಟಿಯರಾದ ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಮತ್ತು ನೋರಾ  ಫತೇಹಿ ( NoraFatehi ) ಇಬ್ಬರೂ ಸುಖೇಶ್ ಚಂದ್ರಶೇಖರ್ (Sukesh Chandrashekhar) ಅವರಿಂದ ಬಿಎಂಡಬ್ಲ್ಯು, ಐಫೋನ್, ಸೂಪರ್ ಐಷಾರಾಮಿ ಬ್ಯಾಗ್‌ಗಳು ಇತ್ಯಾದಿ ಗಿಫ್ಟ್‌ ಪಡೆದಿದ್ದಾರೆ. ಜಾಕ್ವೆಲಿನ್‌ ಜೊತೆ ಈಗ ನೋರಾ ಸಹ ತೊಂದರೆಯಲ್ಲಿದ್ದಾರೆ. ಪೂರ್ತಿ ಮಾಹಿತಿಗಾಗಿ ಮುಂದೆ ಓದಿ.

ಕಳೆದ ಕೆಲವು ವಾರಗಳಿಂದ ಜಾಕ್ವೆಲಿನ್ ಫರ್ನಾಂಡೀಸ್ ಅವರು ವಂಚಕ ಸುಕೇಶ್ ಚಂದ್ರಶೇಖರ್ ಅವರನ್ನು ಚುಂಬಿಸುತ್ತಿರುವ ಸೆಲ್ಫೀ ಲೀಕ್‌ ಆದ ಕಾರಣದಿಂದ  ಸುದ್ದಿಯಲ್ಲಿದ್ದಾರೆ. ಕಳೆದ ತಿಂಗಳು, ಸುಕೇಶ್ ಚಂದ್ರಶೇಖರ್ ಮತ್ತು ಅವರ ಪತ್ನಿ, ನಟಿ ಲೀನಾ ಮರಿಯಾ ಪಾಲ್ ಅವರನ್ನು ಒಳಗೊಂಡ 200 ಕೋಟಿ ರೂಪಾಯಿ ಸುಲಿಗೆ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ (ಇಡಿ) ಹಲವು ಗಂಟೆಗಳ ಕಾಲ ಜಾಕ್ವೆಲಿನ್ ಅವರನ್ನು ಪ್ರಶ್ನಿಸಿತ್ತು. ಆದರೆ ನಟಿ ಸುಕೇಶ್ ಚಂದ್ರಶೇಖರ್ ಜೊತೆಗಿನ ಸಂಬಂಧವನ್ನು ನಿರಾಕರಿಸಿದರು.
 

ಜಾರಿ ನಿರ್ದೇಶನಾಲಯ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಸುಕೇಶ್ ಮತ್ತು ಅವರ ನಟ ಪತ್ನಿ ಲೀನಾ ಮರಿಯಾ ಪಾಲ್ ಮತ್ತು ಇತರ ಆರು ಜನರ ವಿರುದ್ಧ 7,000 ಪುಟಗಳ charge sheet ದಾಖಲಿಸಿದೆ. ಇಡಿ ಚಾರ್ಜ್‌ಶೀಟ್‌ನಲ್ಲಿ, ಜಾಕ್ವೆಲಿನ್ ಸುಕೇಶ್‌ನಿಂದ ಕೋಟಿಗಳ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ.

Tap to resize

ಜಾಕ್ವೆಲಿನ್ ಮಾತ್ರವಲ್ಲ, ನೋರಾ ಫತೇಹಿ ಕೂಡ ಜೈಲು ಪಾಲಾದ ಸುಖೇಶ್ ಚಂದ್ರಶೇಖರ್ ಅವರಿಂದ ಹಲವಾರು ಕೋಟಿ ಮೌಲ್ಯದ ಉಡುಗೊರೆಗಳನ್ನು ಪಡೆದಿದ್ದಾರಂತೆ. ಅವರು ನೋರಾಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.

ಜಾಕ್ವೆಲಿನ್ ಸುಕೇಶ್ ಅವರಿಂದ 52 ಲಕ್ಷ ರೂಪಾಯಿ ಮೌಲ್ಯದ ಕುದುರೆ, 9 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಪರ್ಷಿಯನ್ ಬೆಕ್ಕುಗಳು, ಡೈಮಂಡ್ ಆಭರಣ ಸೆಟ್, ಕ್ರೋಕರೀಸ್, ಬ್ಯಾಗ್‌ಗಳು, ಫೋನ್‌ಗಳು ಮುಂತಾದ ಉಡುಗೊರೆಗಳನ್ನು ಪಡೆದಿದ್ದಾರೆ ಎನ್ನಲಾಗಿದೆ.
 

ಆದಾಗ್ಯೂ, ಜಾಕ್ವೆಲಿನ್‌ ಫರ್ನಾಂಡೀಸ್ ನಂತೆ ನೋರಾ ಫತೇಹಿ ಕೂಡ ಈ ಹಿಂದೆ ಯಾವುದೇ ಮನಿ ಲಾಂಡರಿಂಗ್ (Money Laundering) ಚಟುವಟಿಕೆಯ ಭಾಗವಾಗಿಲ್ಲ ಎಂದಿದ್ದರು. ಆದರೆ ಈಗ ಅವರ ಹೆಸರು ಮತ್ತೆ ಈ ಪ್ರಕರಣದಲ್ಲಿ ಕೇಳಿ ಬರುತ್ತಿದೆ.

'ನೋರಾ ಫತೇಹಿ ಪ್ರಕರಣದ ಬಲಿಪಶುವಾಗಿದ್ದು, ಸಾಕ್ಷಿಯಾಗಿರುವ ಅವರು ತನಿಖೆಯಲ್ಲಿ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ ಮತ್ತು ಸಹಾಯ ಮಾಡುತ್ತಿದ್ದಾರೆ. ಆಕೆ ಯಾವುದೇ ಮನಿ ಲಾಂಡರಿಂಗ್ ಚಟುವಟಿಕೆಯ ಭಾಗವಾಗಿಲ್ಲ ಎಂದು ನಾವು ಸ್ಪಷ್ಟವಾಗಿ ಹೇಳಲು ಬಯಸುತ್ತೇವೆ,' ಎಂದು ತನಿಖಾ ಸಂಸ್ಥೆ ಹೇಳಿತ್ತು. 

ಜಾಕ್ವೆಲಿನ್ ಮತ್ತು ಸುಕೇಶ್ ಜನವರಿ 2021ರಲ್ಲಿ ಭೇಟಿಯಾದರು ಮತ್ತು ಸಂಬಂಧವನ್ನು ಹೊಂದಿದ್ದರು ಎಂದು ವರದಿಗಳು ಹೇಳುತ್ತವೆ. ಸುಕೇಶ್ ಬೆಂಗಳೂರು (Bengaluru) ಮೂಲದ ಉದ್ಯಮಿಯಾಗಿದ್ದು, ಇಬ್ಬರೂ ಮುಂಬೈನಲ್ಲಿ ಒಟ್ಟಿಗೆ ವಾಸಿಸಲು ಯೋಜಿಸಿದ್ದರು. ಆದ್ದರಿಂದ ನಟಿ ಜುಹು ಮತ್ತು ಬಾಂದ್ರಾ ನಡುವೆ ಮನೆ-ಹುಡುಕುತ್ತಿದ್ದರು.
 

ಜಾಕ್ವೆಲಿನ್ ಸುಕೇಶ್‌ ಚಂದ್ರಶೇಖರ್‌ ಪ್ರೀತಿಯಲ್ಲಿ  ಬಿದ್ದಿದ್ದರು. ಅವರ ವ್ಯವಹಾರದ ನಿಖರವಾದ ಸ್ವಭಾವದ ಬಗ್ಗೆ ತಿಳಿದಿರಲಿಲ್ಲ ಮತ್ತು ಅವನ ಗುರುತು ಮತ್ತು ಪಾಸ್ಟ್ ಬಗ್ಗೆ ಪರೀಕ್ಷಿಸಲು ಜಾಕ್ವೆಲಿನ್‌ ಎಂದಿಗೂ ಪ್ರಯತ್ನಿಸಲಿಲ್ಲ. ಜಾಕ್ವೆಲಿನ್ ಬಲೆಗೆ ಬಿದ್ದಂತೆ ಕಾಣುತ್ತಿದೆ ಮತ್ತು ಇದಕ್ಕೆ ಜಾಕ್ವೆಲಿನ್‌ಗೆ ಭಾರಿ ದುಬಾರಿ ಬೆಲೆ ತೆರಬೇಕಾಗಬಹುದು.

Latest Videos

click me!