RIP Lata Mangeshkar : ಗೌರಿ ಅಲ್ಲ...  ಶಾರುಖ್ ಜತೆ ವೈರಲ್ ಪೋಟೋದಲ್ಲಿ ಇರುವ ಲೇಡಿ ಯಾರು!

Published : Feb 07, 2022, 05:09 PM IST

ಮುಂಬೈ(ಫೆ. 07)  ಲತಾ ಮಂಗೇಶ್ಕರ್ (Lata Mangeshkar) ಪಂಚಭೂತಗಳಲ್ಲಿ ಲೀನವಾಗಿದ್ದು ಬಾಲಿವುಡ್ (Bollywood) ದಿಗ್ಗಜರು ಸೇರಿದಂತೆ ಇಡೀ ದೇಶ ಅಂತತಿಮ ನಮನ ಸಲ್ಲಿಸಿದೆ.  ಬಾಲಿವುಡ್ ನಾಯಕ ಶಾರುಖ್ ಖಾನ್ (Shah Rukh Khan) ಅಂತಿಮ ನಮನ ಸಲ್ಲಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತಿದೆ. ಶಾರುಖ್ ಜತೆ ಅವರ ಮ್ಯಾನೇಜರ್  ಪೂಜಾ ದದ್ಲಾನಿ ಅಂತಿಮ ನಮನ ಸಲ್ಲಿಸಿದ್ದಾರೆ.

PREV
19
RIP Lata Mangeshkar : ಗೌರಿ ಅಲ್ಲ...  ಶಾರುಖ್ ಜತೆ ವೈರಲ್ ಪೋಟೋದಲ್ಲಿ ಇರುವ ಲೇಡಿ ಯಾರು!

ಪುತ್ರ ಆರ್ಯನ್ ಖಾನ್ (Aryan Khan) ಡ್ರಗ್ಸ್ ಪ್ರಕರಣದ ನಂತರ ಶಾರುಖ್ ಖಾನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತುಂಬಾ  ವಿರಳವಾಗಿತ್ತು.  ಅಗಲಿದ ಸಂಗೀತ ಸ್ವರ ಸಾಧಕಿಗೆ ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದರು. 

We Miss You SRK Trends: ಮಗನ ಅರೆಸ್ಟ್‌ ನಂತರ ಅಂತರ ಕಾಯ್ದುಕೊಂಡ ಶಾರೂಖ್, ಫ್ಯಾನ್ಸ್ ಬೇಸರ

29

ಶಾರುಖ್ ಖಾನ್ ಪತ್ನಿ ಗೌರಿ ಖಾನ್ ರೊಂದಿಗೆ ಆಗಮಿಸಿದ್ದಾರೆ ಎಂದು ಬಹುತೇಕರು ಭಾವಿಸಿದ್ದರು. ಶಾರುಖ್ ಮ್ಯಾನೇಜರ್ ಪೂಜಾ ಮಾಸ್ಕ್ ಧರಿಸಿದ್ದರಿಂದ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದರು.

 

39

ಶಾರುಖ್ ಮುಸ್ಲಿಂ ಸಂಪ್ರದಾಯದಂತೆ ಪ್ರಾರ್ಥನೆ ಮಾಡಿದರೆ ಅವರ ಪಕ್ಕದಲ್ಲಿದ್ದ ಪೂಜಾ ಹಿಂದು ಸಂಪ್ರದಾಯದಂತೆ ಪ್ರಾರ್ಥಿಸಿದರು. ಈ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯಿತು .

49

ಶಾರುಖ್ ಮತ್ತು ಗೌರಿ ಲತಾ ಮಂಗೇಶ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು ಎಂದೇ ಭಾವಿಸಿದ ಅಭಿಮಾನಿಗಳು ಪೋಟೋ ಶೇರ್ ಮಾಡಿಕೊಂಡರು. ಆದರೆ  ಕೆಲವರು ತಪ್ಪನ್ನು ತಿದ್ದುಪಡಿ ಮಾಡಿ ಅದು ಗೌರಿ ಅಲ್ಲ ಪೂಜಾ ದದ್ಲಾನಿ ಎಂಬುದನ್ನು ತಿಳಿಸಿಕೊಟ್ಟರು.

59

ಶಾರುಖ್ ಖಾನ್ ಮ್ಯಾನೇಜರ್ ಆಗಿ ಪೂಜಾ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಶಾರುಖ್ ಕುಟುಂಬದ ಆಪ್ತೆಯಾಗಿ ಗುರುತಿಸಿಕೊಂಡಿದ್ದಾರೆ. 

69

ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಒಳಗಾಗಿದ್ದ ವೇಳೆ ಪೂಜಾ ಅವರೆ ಮುಂದೆ ನಿಂತು ಅನೇಕ ಕೆಲಸಗಳನ್ನು ನೋಡಿಕೊಂಡಿದ್ದರು. ಎನ್ ಸಿಬಿ ಅಧಿಕರಿಗೆ ಈ ಪೂಜಾ ಅವರೇ ಲಂಚದ ಆಮಿಷ ಒಡ್ಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. 

79

ಎನ್ ಸಿಬಿಯ ಸಾಕ್ಷಿ ಒಬ್ಬರಿಗೆ ಐವತ್ತು ಲಕ್ಷದ ಆಮಿಷ ಒಡ್ಡಿದ್ದರು ಎಂಬ ಆರೋಪ ಬಂದಿತ್ತು. ಅಲ್ಲದೇ ಅನಾರೋಗ್ಯದ ಕಾರಣ ನೀಡಿ ಎನ್‌ಸಿಬಿ ವಿಚಾರಣೆಯಿಂದಲೂ ಮೊದ ಮೊದಲು ವಿನಾಯಿತಿ ಪಡೆದುಕೊಂಡಿದ್ದರು.

89
Pooja Dadlani

ಪುತ್ರ ಆರ್ಯನ್ ಖಾನ್ ಪ್ರಕರಣದ ನಂತರ ಶಾರುಖ್ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತುಂಬಾ ಕಡಿಮೆ ಆಗಿದೆ. ಸೋಶಿಯಲ್ ಮೀಡಿಯಾದಿಂದಲೂ ಖಾನ್ ದೂರವೇ ಇದ್ದಾರೆ.  

99
Pooja Dadlani

ಶಾರುಖ್ ಖಾನ್ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಾಂ ಜತೆ ಪಠಾಣ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿರುತೆರೆ ನಿರೂಪಣೆಯಿಂದಲೂ ಶಾರುಖ್ ದೂರ ಉಳಿದಿದ್ದಾರೆ. 

Read more Photos on
click me!

Recommended Stories