ಕಹಿ ತೋ ಮಿಲೇಂಗೆ, ಕುಸುಮ್, ಏಕ್ ಲಡ್ಕಿ ಅಂಜಾನಿ, ವಿರಾಸತ್, ನಾಗಿನ್ 3 ಸೇರಿದಂತೆ ಅನೇಕ ಹಿಂದಿ ಚಿತ್ರಗಳು ಕನ್ನಡದ 'ಐ ಆಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ನಟಿಸಿರುವ ಕರೀಷ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕರೀಷ್ಮಾ ಮತ್ತು ವರುಣ್ ಕಾಮನ್ ಸ್ನೇಹಿತರ ಮೂಲಕ ಭೇಟಿ ಮಾಡಿದ್ದು, ಪರಿಚಯವಾಗಿ ಸ್ನೇಹಿತರಾಗಿ ಡೇಟಿಂಗ್ ಮಾಡಲು ಶುರು ಮಾಡಿದ್ದರು.
ಹಲವು ವರ್ಷಗಳ ಕಾಲ ಇಬ್ಬರೂ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾಗಿದ್ದಾರೆ. ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಕರೀಷ್ಮಾ ಹೇಳಿಕೊಂಡಿದ್ದಾರೆ.
ವರುಣ್ ಬಂಗೇರಾ ಅವರು ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ರಿಯಲ್ ಎಸ್ಟೇಟ್ ಕಂಪನಿಯೊಂದರಲ್ಲಿ ಡೈರೆಕ್ಟರ್ ಆಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇವರ ಮದುವೆ ಫೋಟೋ ಸಖತ್ ವೈರಲ್ ಆಗಿದೆ.
ಮೂರು ದಿನಗಳ ಕಾಲ ಈ ಮದುವೆ ನಡೆದಿದ್ದು, ಮೊದಲ ದಿನ ಅರಿಶಿಣ ಶಾಸ್ತ್ರ, ಎರಡನೇ ದಿನ ಮೆಹೆಂದಿ ಹಾಗೂ ಸಂಗೀತ ಸಮಾರಂಭ ನಡೆಯಿತು. ಮೂರನೇ ದಿನ ಸಾಂಪ್ರಾದಾಯಿಕವಾಗಿ ಮದುವೆಯಾಗಿದ್ದಾರೆ.
ಕರೀಷ್ಮಾ ತನ್ನಾ ಪಿಂಕ್ ಪೇಸ್ಟಲ್ ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ, ವರುಣ್ ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದಾರೆ. ಮತ್ತೊಂದು ಆಕರ್ಷಣೆ ಏನೆಂದರೆ ಇಬ್ಬದೂ ಸಮುದ್ರದ ಎದುರು ಮಂಟಪ ಸೆಟ್ ಹಾಕಿಸಿದ್ದಾರೆ.
ಕಳೆದ ವರ್ಷ ವರುಣ್ ಮತ್ತು ಕರೀಷ್ಮಾ ಸರಳವಾಗಿ ಉಂಗುರ ಬದಲಾಯಿಸಿಕೊಂಡಿದ್ದರು ಎನ್ನಲಾಗಿದೆ. ಪ್ರೀತಿ ವಿಚಾರವನ್ನು ಹಂಚಿಕೊಂಡ ಕರೀಷ್ಮಾ ಉಂಗುರದ ಫೋಟೋ ಎಲ್ಲಿಯೂ ಅಪ್ಲೋಡ್ ಮಾಡಿಲ್ಲ.