2021ರಲ್ಲಿ ಸೂಪರ್‌ಹಿಟ್ ಆಗಿ, ಅತಿ ಹೆಚ್ಚು ಗಳಿಕೆ ಮಾಡಿ, ಸದ್ದು ಮಾಡಿದ ಸಿನಿಮಾಗಳಲ್ಲಿ ಒಂದು 'ಪುಷ್ಪಾ ದಿ ರೈಸ್'. ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರ ಕೇವಲ ದೇಶಾದ್ಯಂತ ಮಾತ್ರವಲ್ಲ ವಿಶ್ವಾದ್ಯಂತ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿದೆ. ಪುಷ್ಪಾ ತಗ್ಗದೆಲೆ ಅನ್ನೋ ಡೈಲಾಗ್, ಹೀರೋ ಪುಷ್ಪರಾಜ್ ನಡೆಯೋ ಸ್ಟೈಲ್ ಸಹ ವೈರಲ್ ಆಗಿದೆ.
ಪುಷ್ಪಾ-ದಿ ರೈಸ್ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರದ ಮೂಲಕ ಈ ವರ್ಷ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಗೆದ್ದ ಮೊದಲ ತೆಲುಗು ನಟ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಈ ಚಿತ್ರದಲ್ಲಿ ಪುಷ್ಪರಾಜ್ ಪಾತ್ರಕ್ಕಾಗಿ ಅಲ್ಲು ಅರ್ಜುನ್ ಮೊದಲ ಆಯ್ಕೆ ಆಗಿರಲ್ಲಿಲ್ಲ ಅನ್ನೋದು ನಿಮ್ಗೆ ಗೊತ್ತಿದ್ಯಾ? ಮತ್ತೆ ಮೊದಲ ಆಯ್ಕೆ ಯಾರು?
ಅಲ್ಲು ಅರ್ಜುನ್‌ಗಿಂತ ಮೊದಲು, 'ಪುಷ್ಪಾ ದಿ ರೈಸ್' ನಿರ್ದೇಶಕ ಸುಕುಮಾರ್ ಈ ಸೂಪರ್‌ಹಿಟ್ ಚಲನಚಿತ್ರ 'ಪುಷ್ಪ ದಿ ರೈಸ್' ಸಿನಿಮಾವನ್ನು ಇನ್ನೊಬ್ಬ ಸೌತ್ ಸೂಪರ್‌ಸ್ಟಾರ್‌ಗೆ ಆಫರ್ ಮಾಡಿದ್ದರು. ಆದರೆ ಆ ನಟ ಕೆಲವು ಕಾರಣಗಳಿಂದ ಈ ಆಫರ್‌ನ್ನು ತಿರಸ್ಕರಿಸಿದರು. ಈ ಚಿತ್ರಕ್ಕೆ ಆಫರ್ ಬಂದಿದ್ದು ಬೇರೆ ಯಾರಿಗೂ ಅಲ್ಲ ಖ್ಯಾತ ತೆಲುಗು ನಟ ಮಹೇಶ್ ಬಾಬು ಅವರಿಗೆ.
ಸುಕುಮಾರ್ ಮತ್ತು ಮಹೇಶ್ ಬಾಬು ಈ ಹಿಂದೆ 2014ರಲ್ಲಿ 'ನೆನೊಕ್ಕಡಿನ್' ಚಿತ್ರದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು. 'ಪುಷ್ಪಾ ದಿ ರೈಸ್' ಸಿನಿಮಾವನ್ನು ತಿರಸ್ಕರಿಸಲು ಕಾರಣವನ್ನು ಬಹಿರಂಗಪಡಿಸಿದ ಮಹೇಶ್ ಬಾಬು ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದರು.
ಸೃಜನಾತ್ಮಕ ಭಿನ್ನಾಭಿಪ್ರಾಯಗಳಿಂದಾಗಿ, ಸುಕುಮಾರ್ ಅವರೊಂದಿಗೆ ನಾನು ಸಿನಿಮಾ ಮಾಡುತ್ತಿಲ್ಲ. ಅವರ ಹೊಸ ಪ್ರಾಜೆಕ್ಟ್ ಘೋಷಣೆಗೆ ನಾನು ಶುಭ ಹಾರೈಸುತ್ತೇನೆ. ಫಿಲ್ಮ್ ಮೇಕರ್ ಫಾರ್ ಎಕ್ಸಲೆನ್ಸ್. 'ನೆನೊಕ್ಕಡಿನ್' ಕ್ಲಾಸಿಕ್ ಸಿನಿಮಾಗಿ ಉಳಿಯುತ್ತದೆ. ಆ ಚಿತ್ರದಲ್ಲಿ ಕೆಲಸ ಮಾಡಿದ ಪ್ರತಿ ಕ್ಷಣವನ್ನು ಆನಂದಿಸಿದೆ' ಎಂದು ಬರೆದುಕೊಂಡಿದ್ದರು.
ಸುಕುಮಾರ್ ನಿರ್ದೇಶನದ, 'ಪುಷ್ಪಾ ದಿ ರೈಸ್ ಚಿತ್ರದಲ್ಲಿ ಅಲ್ಲು ಅರ್ಜುನ್ ನಟನಾಗಿ, ರಶ್ಮಿಕಾ ಮಂದಣ್ಣ ನಾಯಕಿ ನಟಿ, ಫಹಾದ್ ಫಾಸಿಲ್ ವಿಲನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಅಲ್ಲು ಅರ್ಜುನ್ ಅವರ ಗೆಲುವಿನ ಹೊರತಾಗಿ, ದೇವಿ ಶ್ರೀ ಪ್ರಸಾದ್ ಅವರು 'ಪುಷ್ಪ, ದಿ ರೈಸ್'ಗಾಗಿ ಅತ್ಯುತ್ತಮ ಸಂಗೀತ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಶ್ರೀವಲ್ಲಿ, ಊ ಅಂಟಾವ, ಮತ್ತು ಸಾಮಿ ಸಾಮಿ ಮುಂತಾದ ಹಾಡುಗಳನ್ನು ಸೂಪರ್ ಹಿಟ್ ಆಗಿದೆ. ಸಮಂತಾ ರುತ್ ಪ್ರಭು ಡ್ಯಾನ್ಸ್ 'ಊ ಅಂಟಾವ' ಪ್ರೇಕ್ಷಕರಿಂದ ಹೆಚ್ಚು ಪ್ರಶಂಸೆಯನ್ನು ಗಳಿಸಿತು.
ಈಗ, ಚಿತ್ರ ನಿರ್ಮಾಪಕರು ಮತ್ತು ಚಿತ್ರತಂಡವು ಪುಷ್ಪಾ ದಿ ರೂಲ್ ಎಂಬ ಶೀರ್ಷಿಕೆಯ ಚಿತ್ರದ ಮುಂದುವರಿದ ಭಾಗದೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧವಾಗಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಅವರು ತಮ್ಮ ಪಾತ್ರವನ್ನು ಪುನರಾವರ್ತಿಸುತ್ತಾರೆ, ಇದು ಆಗಸ್ಟ್ 15, 2024ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
ಇವೆಲ್ಲದರ ಮಧ್ಯೆ ಮಹೇಶ್ ಬಾಬು, ತಮ್ಮ ಮುಂಬರುವ ಚಿತ್ರ 'ಗುಂಟೂರು ಕಾರಂ' ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲು ಸಿದ್ಧರಾಗಿದ್ದಾರೆ. ತೆಲುಗು ಭಾಷೆಯ ಆಕ್ಷನ್ ಮಸಾಲಾ ಚಲನಚಿತ್ರವನ್ನು ತ್ರಿವಿಕ್ರಮ್ ಶ್ರೀನಿವಾಸ್ ಬರೆದು ನಿರ್ದೇಶಿಸಿದ್ದಾರೆ. ಹರಿಕಾ & ಹಾಸನ್ ಕ್ರಿಯೇಷನ್ಸ್ ಮೂಲಕ ಎಸ್.ರಾಧಾ ಕೃಷ್ಣ ನಿರ್ಮಿಸಿದ್ದಾರೆ. ಇದರಲ್ಲಿ ಶ್ರೀಲೀಲಾ, ಮೀನಾಕ್ಷಿ ಚೌಧರಿ, ಜಗಪತಿ ಬಾಬು, ರಮ್ಯಾ ಕೃಷ್ಣ, ಜಯರಾಮ್ ಮತ್ತು ಪ್ರಕಾಶ್ ರಾಜ್ ಕೂಡ ನಟಿಸಿದ್ದಾರೆ.