Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

Published : Dec 14, 2023, 05:41 PM IST

ಬಾಲಿವುಡ್ ಅಂದಮೇಲೆ ಅಲ್ಲಿ ಸುದ್ದಿಗಳಿಗೆನು ಕಮ್ಮಿ ಇರೋದೆ ಇಲ್ಲ. ಅದು ಲವ್ ಅಫೇರ್ ಆಗಿರಬಹುದು, ಸಿನಿಮಾ ಆಗಿರಬಹುದು, ಡೇಟಿಂಗ್ ಆಗಿರಬಹುದು. ಒಂದಲ್ಲ ಒಂದು ಕಾರಣದಿಂದ ಬಾಲಿವುಡ್ ಮಂದಿ ಸುದ್ದಿಯಲ್ಲಿರುತ್ತಾರೆ. ಈ ವರ್ಷ ಹೆಚ್ಚು ಸುದ್ದಿಯಲ್ಲಿದ್ದ ಜೋಡಿಗಳು ಯಾರೆಲ್ಲಾ ನೋಡೋಣ.   

PREV
17
Throwback 2023: ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಜೋಡಿಗಳಿವು!

ಅನನ್ಯಾ ಪಾಂಡೆ - ಆದಿತ್ಯ ರಾಯ್ ಕಪೂರ್ 
ಬಾಲಿವುಡ್ ನಟರಾದ ಅನನ್ಯಾ ಪಾಂಡೆ (Ananya Pandey)- ಆದಿತ್ಯ ರಾಯ್ ಕಪೂರ್ ಲವ್ ಸ್ಟೋರಿ ಸಹ ಈ ವರ್ಷ ಬಾರಿ ಸುದ್ದಿಯಲ್ಲಿತ್ತು. ಇತ್ತೀಚೆಗೆ ಕಾಫಿ ವಿತ್ ಕರಣ್ (Coffee with Karan) ಶೋದಲ್ಲಿ ಅನನ್ಯಾ ಪಾಂಡೆ ತಮ್ಮ ರಿಲೇಶನ್ ಶಿಪ್ ಬಗ್ಗೆ ಹಿಂಟ್ ಕೂಡ ನೀಡಿದ್ದರು. 

27

ಮಲೈಕಾ ಅರೋರ - ಅರ್ಜುನ್ ಕಪೂರ್ 
ಬಿ ಟೌನ್ ನ ಜನಪ್ರಿಯ ಜೋಡಿಗಳು ಎಂದರೆ ಮಲೈಕಾ ಅರೋರ - ಅರ್ಜುನ್ ಕಪೂರ್ (Arjun Kapoor). ಇವರಿಬ್ಬರ ಲವ್ ಸ್ಟೋರಿ ಈ ಬಾರಿ ಹೆಚ್ಚಾಗಿ ಸುದ್ದಿಯಲ್ಲಿತ್ತು . ಇಬ್ಬರು ಓಪನ್ ಆಗಿಯೇ ಒಬ್ಬರ ಮೇಲಿನ ಇನ್ನೊಬ್ಬರ ಪ್ರೀತಿಯನ್ನು ಸೋಶಿಯಲ್ ಮೀಡಿಯಾದಲ್ಲಿ ತೋರಿಸಿದ್ದರು. 

37

ಸಾರಾ ತೆಂಡೂಲ್ಕರ್ - ಶುಬ್’ಮನ್ ಗಿಲ್ (Shubman Gill-Sara Tendulkar)
ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಮತ್ತು ಭಾರತೀಯ ಕ್ರೀಕೆಟ್ ತಂಡದ ಆಟಗಾರ ಶುಭ್ಮನ್ ಗಿಲ್ ಲವ್ ಅಫೇರ್ ಬಗ್ಗೆ ಈ ವರ್ಷ ಪೂರ್ತಿ ಚರ್ಚೆಯಾಗುತ್ತಿತ್ತು. ಸಾರಾ ಹಲವಾರು ಬಾರಿ ಶುಭ್ಮನ್ ಗಿಲ್ ಗೆ ಬೆಂಬಲ ನೀಡಲು ಮೈದಾನಕ್ಕೂ ಬಂದಿದ್ದರು. 

47

ಸೋನಾಕ್ಷಿ ಸಿನ್ಹಾ - ಜಹೀರ್ ಇಕ್ಬಾಲ್ 
ದಬಂಗ್ ನಟಿ ಸೋನಾಕ್ಷಿ ಸಿನ್ಹಾ, ತಮ್ಮ ರೂಮರ್ಡ್ ಬಾಯ್ ಫ್ರೆಂಡ್ ಜಹೀರ್ ಇಕ್ಬಾಲ್ (Zaheer Iqbal) ಜೊತೆಗಿನ ಸಂಬಂಧ ಬಗ್ಗೆ ಭಾರಿ ಚರ್ಚೆ ನಡೆದಿತ್ತು. ಇಬ್ಬರು ಅದೆಷ್ಟೋ ಬಾರಿ ಜೊತೆಯಾಗಿ ಕಾಣಿಸಿಕೊಂಡದ್ದೂ ಇದೆ. 

57

ನವ್ಯಾ ನವೇಲಿ ನಂದ - ಸಿದ್ಧಾಂತ್ ಚಥುರ್ವೇದಿ
ಬಾಲಿವುಡ್ ಮಹಾ ನಾಯಕ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳಾದ ನವ್ಯಾ ನವೇಲಿ ನಂದ, ಗಹರಿಯಾ ಸಿನಿಮಾ ನಾಯಕ ಸಿದ್ಧಾಂತ್ ಚಥುರ್ವೇದಿ ಜೊತೆ ಡೇಟಿಂಗ್ ಮಾಡುತ್ತಿರುವ ಸುದ್ದಿ ಹರಡಿತ್ತು. ಇಬ್ಬರು ಜೊತೆಯಾಗಿ ಗೋವಾದಲ್ಲಿ ಕಾಣಿಸಿಕೊಂಡಿದ್ದರು. 

67

ತಮನ್ನಾ ಭಾಟಿಯ - ವಿಜಯ್ ವರ್ಮಾ (Tamannaah bhatia and vijay varma)
ಲಸ್ಟ್ ಸ್ಟೋರಿ 2 ನಲ್ಲಿ ಜೊತೆಯಾಗಿ ಕಾಣಿಸಿಕೊಂಡ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಲವ್ ಸ್ಟೋರಿ ಸಹ ಭಾರಿ ಚರ್ಚೆಯಲ್ಲಿತ್ತು. ಇಬ್ಬರೂ ತಮ್ಮ ರಿಲೇಶನ್ ಶಿಪ್ ನ್ನು ಸಾರ್ವಜನಿಕವಾಗಿ ಹೇಳಿಕೊಂಡಿದ್ದರು ಸಹ. 

77

ಇಬ್ರಾಹಿಂ ಆಲಿ ಖಾನ್ - ಪಾಲಕ್ ತಿವಾರಿ
ಬಾಲಿವುಡ್ ನಟ ಸೈಫ್ ಆಲಿ ಖಾನ್ ಮಗ ಇಬ್ರಾಹಿಂ ಆಲಿ ಖಾನ್ (Ibrahim Ali Khan) ಅವರು ನಟಿ ಶ್ವೇತಾ ತಿವಾರಿ ಮಗಳು ಪಾಲಕ್ ತಿವಾರಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಷಯ ಭಾರಿ ಚರ್ಚೆಯಲ್ಲಿತ್ತು. ಇಬ್ಬರೂ ಹಲವಾರು ಬಾರಿ ಜೊತೆಯಾಗಿ ಪಾರ್ಟಿ ಕೂಡ ಮಾಡಿದ್ದರು. 

Read more Photos on
click me!

Recommended Stories