ನಟಿ ನಿವೇತಾ ಪೆತುರಾಜ್ ಮತ್ತು ರಜಿತ್ ಮದುವೆ ನಿಂತುಹೋಗಿದೆ ಎಂದು ಹೇಳಲಾಗುತ್ತಿದೆ. ಇನ್‌ಸ್ಟಾಗ್ರಾಮ್ ಪೇಜ್‌ನಿಂದ ನಿಶ್ಚಿತಾರ್ಥದ ಫೋಟೋಗಳನ್ನು ಡಿಲೀಟ್ ಮಾಡಿರೋದ್ರಿಂದ ಮದುವೆ ಕ್ಯಾನ್ಸಲ್ ಆಗಿದೆ ಅಂತಾ ಹೇಳಲಾಗ್ತಿದೆ.
ನಟಿ ನಿವೇತಾ ಪೆತುರಾಜ್, ದುಬೈ ಮೂಲದ ಉದ್ಯಮಿ ರಜಿತ್ ಇಬ್ರಾನ್ ಜೊತೆಗಿನ ನಿಶ್ಚಿತಾರ್ಥವನ್ನು ಆಗಸ್ಟ್ 2025ರಲ್ಲಿ ಘೋಷಿಸಿದ್ದರು. ಅಕ್ಟೋಬರ್‌ನಲ್ಲಿ ಎಂಗೇಜ್‌ಮೆಂಟ್ ಆಗಿದ್ದು, ಜನವರಿ 2026ರಲ್ಲಿ ಮದುವೆಗೆ ಪ್ಲಾನ್ ಮಾಡಲಾಗಿತ್ತು. ಆದರೆ ಈಗ ಇನ್‌ಸ್ಟಾಗ್ರಾಂನಿಂದ ಫೋಟೋಗಳನ್ನು ಡಿಲೀಟ್ ಮಾಡಿರುವುದು ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದು ನಿಶ್ಚಿತಾರ್ಥ ಮುರಿದುಬಿದ್ದಿರಬಹುದು ಎಂಬ ವದಂತಿಗಳಿಗೆ ಕಾರಣವಾಗಿದೆ. ಆದರೆ, ಅಧಿಕೃತವಾಗಿ ಯಾರೂ ಖಚಿತಪಡಿಸಿಲ್ಲ.
25
ಮಧುರೈ ಹುಡುಗಿ ಎಂದೇ ಫೇಮಸ್
ನಿವೇತಾ ತಮಿಳು ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚುತ್ತಿದ್ದರು. ಇವರಿಗೂ ಮತ್ತು ಒಬ್ಬ ಪ್ರಮುಖ ವ್ಯಕ್ತಿಗೂ ಸಂಬಂಧವಿದೆ ಎಂಬ ವದಂತಿಗಳು ಆಗಾಗ ಹಬ್ಬುತ್ತಿದ್ದವು. ಮಧುರೈ ಹುಡುಗಿ ಎಂದೇ ಫೇಮಸ್ ಆಗಿದ್ದ ಇವರು ತಮಿಳು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನ ಗಳಿಸಿದ್ದರು. ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ. ಬಾಲಿವುಡ್, ಹಾಲಿವುಡ್ ಆಫರ್‌ಗಳು ಬಂದಿದ್ದವು ಎನ್ನಲಾಗಿತ್ತು.
35
ಯಾವುದೇ ಮಾಹಿತಿ ನೀಡಿಲ್ಲ
ಒಂಟಿತನದ ಬಗ್ಗೆ ಹಲವು ಸ್ಟೇಟಸ್‌ಗಳನ್ನು ಹಾಕುತ್ತಿದ್ದ ನಿವೇತಾ, ತನ್ನ ನಿಶ್ಚಿತಾರ್ಥದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಏನಾಗ್ತಿದೆ ಎಂದು ಯಾರಿಗೂ ಗೊತ್ತಿರಲಿಲ್ಲ. ಈಗ ಇನ್‌ಸ್ಟಾಗ್ರಾಂನಿಂದ ತನ್ನ ಪ್ರಿಯಕರನೊಂದಿಗಿನ ನಿಶ್ಚಿತಾರ್ಥದ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
ಈಗಿನ ಕಾಲದಲ್ಲಿ ಪ್ರೀತಿ ಅಂದ್ರೆ ಬ್ರೇಕಪ್ ಮಾಡಿಕೊಳ್ಳುವುದೇ ಜಾಸ್ತಿ. ಯಾರು ತಾನೇ ನಿಜವಾಗಿ ಪ್ರೀತಿಸುತ್ತಾರೆ? ಪ್ರೀತಿಸಿ ಮದುವೆಯಾದವರೇ ಡೈವೋರ್ಸ್ ಪಡೆಯುವ ಈ ಕಾಲದಲ್ಲಿ, ಸರಿಯಾದ ಜೀವನ ಸಂಗಾತಿಯನ್ನು ಹೇಗೆ ಆಯ್ಕೆ ಮಾಡುವುದು ಎಂಬುದು ದೊಡ್ಡ ಪ್ರಶ್ನೆ. ಈಗಿನ ಹೀರೋಯಿನ್‌ಗಳು ಮೊದಲ ಮದುವೆಯಾಗಿ ಡೈವೋರ್ಸ್ ಪಡೆದು ಎರಡನೇ ಮದುವೆಯಾಗುತ್ತಿದ್ದಾರೆ. ನಿಶ್ಚಿತಾರ್ಥ ಮುರಿದುಬಿದ್ದಿದ್ದು ಈಗಲೇ ಆಗಿದ್ದು ಒಳ್ಳೆಯದು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ.
55
ಅವರ ಜೀವನ ಅವರ ಕೈಯಲ್ಲೇ ಇದೆ
ಸಮಂತಾ ಮತ್ತು ಚೈತನ್ಯ ಇಬ್ಬರೂ ಸಿನಿಮಾಗಳ ಮೂಲಕ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ಡೈವೋರ್ಸ್ ಪಡೆದು ಇಬ್ಬರೂ ಬೇರೆ ಬೇರೆ ಮದುವೆಯಾಗಿದ್ದಾರೆ. ಈಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಅವರು ಸದ್ಯಕ್ಕೆ ನಿಶ್ಚಿತಾರ್ಥವನ್ನು ಮಾತ್ರ ಮುರಿದುಕೊಂಡಿದ್ದಾರೆ. ಹಾಗಾಗಿ ಅವರ ಜೀವನ ಅವರ ಕೈಯಲ್ಲೇ ಇದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದಕ್ಕೂ ಮುನ್ನ ಭಾರತೀಯ ಮಹಿಳಾ ಕ್ರಿಕೆಟರ್ ಸ್ಮೃತಿ ಮಂಧಾನ ಕೂಡ ತಮ್ಮ ಮದುವೆಯನ್ನು ನಿಲ್ಲಿಸಿದ್ದರು ಎಂಬುದು ಗಮನಾರ್ಹ.