
Sonakshi Sinha Divorce News: ಸಿನಿಮಾ ಸೆಲೆಬ್ರಿಟಿಗಳು ಪ್ರಸ್ತುತ ವಿಚ್ಚೇದನದ ಸುದ್ದಿಗಳಿಂದ ಭಾರೀ ಸಂಚಲನ ಸೃಷ್ಟಿಸುತ್ತಿದ್ದಾರೆ. ಯಾವಾಗ ಯಾರು ಯಾಕೆ ವಿಚ್ಛೇದನ ನೀಡುತ್ತಾರೆ ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ ಎಂಬಂತಾಗಿದೆ.
ಹಳೆಯ ಸಂಗತಿ ಹೋಗಲಿ, ಈ ವರ್ಷವೇ ಸಾಕಷ್ಟು ಬಾಲಿವುಡ್ ಜೋಡಿಗಳು ಈ ವರ್ಷ, ಟಾಲಿವುಡ್‌ನಿಂದ ಬಾಲಿವುಡ್‌ವರೆಗೆ ಅನೇಕ ಸ್ಟಾರ್ ಜೋಡಿಗಳು ವಿಚ್ಚೇದನ ಪಡೆದಿದ್ದಾರೆ. ಹಾಗಿದ್ದರೆ ಅವರೆಲ್ಲಾ ಯಾರು?
ಡಿವೋರ್ಸ ಆಗಿದ್ದು ಆಯ್ತು.. ಆದರೆ, ಸದ್ಯದಲ್ಲೇ ಡಿವೋರ್ಸ್ ನೀಡಲಿದ್ದಾರೆ ಎಂಬ ಗಾಸಿಪ್ ಹಬ್ಬಿಸಲಾಗುತ್ತಿದೆ. ಅವರಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ಬಾಲಿವುಡ್ ಸ್ಟಾರ್ ನಾಯಕಿ ನಟಿ ಸೋನಾಕ್ಷಿ ಸಿನ್ಹಾ-ಜಹೀರ್ ಇಟ್ಬಾಲ್ ದಂಪತಿ ಮ್ಯಾಟರ್. ನಟಿ ಸೋಹಾ ಅಲಿ ಖಾನ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ, ಸೋನಾಕ್ಷಿ ಸಿನ್ಹಾ ತಮ್ಮ ವೈವಾಹಿಕ ಜೀವನದ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ಅದೇನು ನೋಡಿ..
ಬಹುತೇಕರಿಗೆ ಗೊತ್ತಿರುವಂತೆ, ನಟಿ ಸೋನಾಕ್ಷಿ ಸಿನ್ಹಾ ಬಾಲಿವುಡ್‌ನ ರೆಬೆಲ್ ಸ್ಟಾರ್ ಶತ್ರುಘ್ನ ಸಿನ್ಹಾ ಮಗಳು. ಶುರುವಿನಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ಈ ಸುಂದರ ಹುಡುಗಿ ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ ಚಿತ್ರರಂಗಕ್ಕೆ ಪ್ರವೇಶಿಸಿದಳು. 2010 ರಲ್ಲಿ ಸಲ್ಮಾನ್ ಖಾನ್ ನಟಿಸಿದ ದಬಾಂಗ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಆ ಚಿತ್ರ ಬ್ಲಾಕ್ಟಸ್ಟರ್ ಆಗಿದ್ದರಿಂದ, ಸೋನಾಕ್ಷಿ ರಾತ್ರೋರಾತ್ರಿ ಸ್ಟಾರ್ ನಾಯಕಿಯಾದರು.
ಮುಂದೆ ಸೋನಾಕ್ಷಿ ಸಿನ್ಹಾ ಅವರಿಗೆ ನಿರ್ದೇಶಕರು ಮತ್ತು ನಿರ್ಮಾಪಕರು ಕಾದು ಅವಕಾಶ ನೀಡಿದರು. ದಬಾಂಗ್ ಬಳಿಕ ಸೋನಾಕ್ಷಿ ಸಿನ್ಹಾ ಅವರು ದಬಾಂಗ್ 2, ರೌಡಿ ರಾಥೋಡ್, ಜೋಕರ್, ಸನ್ ಆಫ್ ಸರ್ದಾರ್, ಲೂಟೇರಾ, ಬಾಸ್, ಬುಲೆಟ್ ರಾಜಾ, ಆರ್ ರಾಜ್‌ಕುಮಾರ್, ಆಕ್ಷನ್ ಜಾಕ್ಸನ್ ಮತ್ತು ಇತರ ಚಿತ್ರಗಳಲ್ಲಿ ನಟಿಸಿದರು. ಕೆಲವು ಹಿಟ್ ಆದರೆ ಕೆಲವು ಫ್ಲಾಪ್ ಎನಿಸಿತು.
ಭಾರತದ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಎದುರು ನಾಯಕಿಯಾಗಿ ನಟಿಸಿದರು. ಗ್ಲಾಮರ್ ಶೋಗಳಿಂದ ದೂರವಾಗಿ ಕಥೆಯ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸೋನಾಕ್ಷಿ ಸಿನ್ಹಾ ನಟಿಯಾಗಿ ಕೂಡ ಸಾಕಷ್ಟು ಹೆಸರು ಗಳಿಸಿದರು. 'ಡಬಲ್ ಎಕ್ಸ್‌ಎಲ್' ಚಿತ್ರದ ಸಮಯದಲ್ಲಿ ನಟ ಜಹೀರ್ ಇನ್ಸಾಲ್ ಅವರ ಪ್ರೀತಿಯ ಬಲೆಯಲ್ಲಿ ಬಿದ್ದರು ಸೋನಾಕ್ಷಿ ಸಿನ್ಹಾ.
ಸುಮಾರು ಏಳು ವರ್ಷಗಳ ಕಾಲ ಜಹೀರ್ ಜೊತೆಗಿನ ಡೇಟಿಂಗ್ ಬಳಿಕ, ಹಿರಿಯರ ಒಪ್ಪಿಗೆಯೊಂದಿಗೆ 23 ಜೂನ್ 2024 ರಂದು ವಿವಾಹವಾದರು. ಭಿನ್ನ ಧರ್ಮಗಳ ವಿವಾಹ ಆದ್ದರಿಂದ ಸೋನಾಕ್ಷಿ ಸಾಕಷ್ಟು ಟೀಕೆಗಳನ್ನು ಎದುರಿಸಿದರು. ಆದರೆ, ಆ ವಿಷಯದಲ್ಲಿ ಅವರಿಗೆ ಪತಿ ಮತ್ತು ಅತ್ತೆ ಮಾವಂದಿರ ಬೆಂಬಲ ಸಿಕ್ಕಿತು.
ಸೋನಾಕ್ಷಿ ಸಿನ್ಹಾ ಮದುವೆಯಾದ ಕೆಲವೇ ದಿನಗಳಲ್ಲಿ 'ಗರ್ಭಿಣಿ' ಎಂಬ ಸುದ್ದಿ ಹೊರಬಿತ್ತು. ಸೋನಾಕ್ಷಿ-ಜಹೀರ್ ವೈವಾಹಿಕ ಜೀವನದ ಬಗ್ಗೆಯೂ ವಿವಿಧ ಊಹಾಪೋಹಗಳು ಹಬ್ಬಿದ್ದವು. ಮುಖ್ಯವಾಗಿ, ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ, ಸದ್ಯದಲ್ಲೇ ಡಿವೋರ್ಸ್ ಪಡೆಯಲಿದ್ದಾರೆ ಎಂಬ ಗಾಸಿಪ್ ಹುಟ್ಟಿತು. ಅದರೆ, ಇತ್ತೀಚೆಗೆ ಸೋಹಾ ಅಲಿ ಖಾನ್ ಅವರೊಂದಿಗಿನ ಸಂದರ್ಶನದಲ್ಲಿ, ಸೋನಾಕ್ಷಿ ಸಿನ್ಹಾ ವಿಚ್ಛೇದನ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.
'ಈ ಸುದ್ದಿ ಸತ್ಯಕ್ಕೆ ದೂರ ಹಾಗೂ ಅಸಂಬದ್ದ.. ಇಂತಹ ಸುದ್ದಿ ಎದುರಿಸಿದ ಮೊದಲ ವ್ಯಕ್ತಿ ನಾನಲ್ಲ, ಹಾಗೂ ಕೊನೆಯವಳೂ ಆಗಲ್ಲ. ಯಾವುದೇ ಬೆಳೆದ ಮಹಿಳೆ ತನ್ನ ಜೀವನವನ್ನು ತನಗೆ ಇಷ್ಟವಾದಂತೆ ಆರಿಸಿಕೊಳ್ಳುತ್ತಾಳೆ. ಯಾವುದೋ ಕಾರಣಕ್ಕಾಗಿ, ಎಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಾವು ಜೀವನವನ್ನು ನಡೆಸಲು ತುಂಬಾ ಸಂತೋಷಪಡುತ್ತೇವೆ, ಸಮಸ್ಯೆ ಏನೂ ಇಲ್ಲ" ಎಂದು ಸೋನಾಕ್ಷಿ ಹೇಳಿದ್ದಾರೆ.
ಜೊತೆಗೆ, "ಇಂದು ನಾವು ಸಾಮಾಜಿಕ ಮಾಧ್ಯಮಗಳ ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ನನ್ನ ಸಂಗಾತಿ ಹಾಗೂ ನನ್ನ ಫ್ಯಾಮಿಲಿ ಬಗ್ಗೆ ನಕಾರಾತ್ಮಕ ವಿಷಯಗಳನ್ನು ಓದಲು ನಾನು ಎಂದೂ ಬಯಸುವುದಿಲ್ಲ. ಎಲ್ಲಾ ಪ್ರೇಮಕಥೆಗಳಂತೆ, ಇಕ್ಷಾಲ್ ಮತ್ತು ನಾನು ಜಗಳವಾಡಿದ್ದೇವೆ, ಪ್ರೀತಿಸಿದ್ದೇವೆ.
ಮೂರು ವರ್ಷಗಳ ಕಾಲ ಪ್ರೀತಿಸಿದ ಬಳಿಕವಷ್ಟೇ ನಾವು ಪರಸ್ಪರ ಕೂದಲು ಎಳೆಯುವ ಹಂತಕ್ಕೆ ಜಗಳವನ್ನೂ ಆಡಿದ್ದೇವೆ.
ನಮಗೆ ಒಬ್ಬರ ಅಭಿಪ್ರಾಯಗಳು ಮತ್ತು ಆಲೋಚನೆಗಳನ್ನು ಮತ್ತೊಬ್ಬರು ಅರ್ಥಮಾಡಿಕೊಳ್ಳಲು ಆದರೂ ಸಾಧ್ಯವಾಗಲಿಲ್ಲ. ಆದರೆ, ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ. ಜಗಳವನ್ನೇ ದೂರಮಾಡಲು ಬಯಸಿ ಬದುಕಿದ್ದೇವೆ..' ಎಂದು ಸೋನಾಕ್ಷಿ ಹೇಳಿದ್ದಾರೆ.
'ದಂಪತಿಗಳ ಚಿಕಿತ್ಸೆ'ಯು ನಮಗೆ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಸಹಾಯ ಮಾಡಿತು. ನಾವು ಪರಸ್ಪರ ಅರ್ಥಮಾಡಿಕೊಳ್ಳುವಲ್ಲಿ ಅನೇಕ ವಿಷಯಗಳು ಪ್ರಮುಖ ಪಾತ್ರ ವಹಿಸಿವೆ. ಸಂಸಾರದಲ್ಲಿ ಗೌರವ ಬಹಳ ಮುಖ್ಯ. ನಾನು ನನ್ನ ಸಂಗಾತಿಯನ್ನು ಗೌರವಿಸಬೇಕು, ನನ್ನ ಸಂಗಾತಿ ನನ್ನನ್ನು ಗೌರವಿಸಬೇಕು. ಜಹೀರ್ ತನ್ನ ಸುತ್ತಲಿನ ಜನರನ್ನು ತುಂಬಾ ಗೌರವಿಸುತ್ತಾನೆ.
ನಾನು ಅವನ ಬಗ್ಗೆ ಗಮನಿಸಿದ ಮೊದಲ ವಿಷಯ ಅದು. ಅವನು ತನ್ನ ಭಾವನೆಗಳನ್ನು ನಿಯಂತ್ರಿಸುತ್ತಾನೆ. ಅವನು ನನ್ನ ಭಾವನೆಗಳನ್ನು ಮತ್ತು ಭಾವನೆಗಳನ್ನು ಸಹ ಅರ್ಥಮಾಡಿಕೊಳ್ಳುತ್ತಾನೆ. ಅಂತಹ ಜನರು ಸಿಗೋದು ಅಪರೂಪ' ಎಂದಿರುವ ಸೋನಾಕ್ಷಿ ಸಿನ್ಹಾ 'ಜಹೀರ್ ಜೊತೆಗಿನ ವಿಚ್ಚೇದನ'ದ ಸುದ್ದಿಯನ್ನು ನಿರಾಕರಿಸಿದ್ದಾರೆ.
ಪತಿ ಜಹೀರ್ ಇಕ್ಬಾಲ್ ಜೊತೆಗಿನ ಡಿವೋರ್ಸ್ ಸುದ್ದಿಯನ್ನು ತಳ್ಳಿಹಾಕಿರುವ ನಟಿ ಸೋನಾಕ್ಷಿ ಸಿನ್ಹಾ, ಸಾಮಾಜಿಕ ಜಾಲತಾಣದ ಇಂದಿನ ಯುಗದಲ್ಲಿ ಇವೆಲ್ಲಾ ಸಾಮಾನ್ಯ ಎಂದಿದ್ದಾರೆ.