Ramayana Film: ಯಶ್ ರಾವಣನಾಗಿ ಅಬ್ಬರಿಸಲಿರುವ ರಾಮಾಯಣ ಸಿನಿಮಾ ಕುರಿತು ನಿಮಗೆ ತಿಳಿಯದೇ ಇರುವ ಸತ್ಯಗಳು

Published : Jul 09, 2025, 03:43 PM ISTUpdated : Jul 09, 2025, 05:08 PM IST

ನಿತೇಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದ ಕುರಿತು ನಿಮಗೂ ತಿಳಿಯದೇ ಇರುವ ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

PREV
19

ಯಶ್ ರಾವಣನಾಗಿ ಅಬ್ಬರಿಸಲಿರುವ ಭಾರಿ ಕುತೂಹಲ ಮೂಡಿಸಿದ ಬಿಗ್ ಬಜೆಟ್ ಸಿನಿಮಾ ರಾಮಾಯಣ (Ramayana) ತನ್ನ ಮೊದಲ ಟೀಸರ್ ಮೂಲಕ ಭಾರಿ ಸದ್ದು ಮಾಡಿತ್ತು. ಇದೀಗ ಸಿನಿಮಾ ಕುರಿತು ಒಂದಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

29

ದ್ವಿಪಾತ್ರದಲ್ಲಿ ರಣಬೀರ್ ಕಪೂರ್

ರಾಮಾಯಣದಲ್ಲಿ ರಣಬೀರ್ ಕಪೂರ್ (Ranbir Kapoor) ಕೇವಲ ಶ್ರೀರಾಮನಾಗಿ ಮಾತ್ರ ನಟಿಸುತ್ತಿಲ್ಲ. ಇದರ ಜೊತೆಗೆ ಪರಶುರಾಮನಾಗಿ ಸಹ ಅಭಿನಯಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

39

ಒಪ್ಪಿಗೆ ನೀಡದ ಜೈದೀಪ್

ರಾವಣನ ಸಹೋದರ ವಿಭೀಷನದ ಪಾತ್ರಕ್ಕೆ ಮೊದಲ ಆಯ್ಕೆಯಾಗಿದ್ದಿದು ಜೈದೀಪ್ ಅಹ್ಲಾವತ್. ಆದರೆ ಅವರಿಗೆ ಡೇಟ್ ಸಮಸ್ಯೆಯಿಂದಾಗಿ ಆ ಪಾತ್ರವನ್ನು ಕೈ ಬಿಟ್ಟಿದ್ದರು.

49

ಫೋನ್ ಸಂಪೂರ್ಣವಾಗಿ ಬ್ಯಾನ್

ಅರುಣ್ ಗೋವಿಲ್ ರಾಜ ದಶರಥನಾಗಿ ಹಾಗೂ ಲಾರಾ ದತ್ತ  (Lara Datta) ಕೈಕೇಕಿಯಾಗಿ ಅಭಿನಯಿಸುತ್ತಿರುವ ಫೋಟೊ ಚಿತ್ರೀಕರಣ ಸೆಟ್ ನಿಂದ ಲೀಕ್ ಆಗಿತ್ತು. ಹಾಗಾಗಿ ನಿದೇಶಕ ನಿತೇಶ್ ತಿವಾರಿ ಚಿತ್ರೀಕರಣದ ಸಮಯದಲ್ಲಿ ಮೊಬೈಲ್ ಫೋನ್ ಅನ್ನು ಸಂಪೂರ್ಣವಾಗಿ ಬ್ಯಾನ್ ಮಾಡಿದ್ದರು.

59

ಶ್ರೀರಾಮನ ಪಾತ್ರಕ್ಕೆ ಮೊದಲ ಆಯ್ಕೆ ಹೃತಿಕ್

ವರದಿಗಳ ಪ್ರಕಾರ ಶ್ರೀರಾಮನ ಪಾತ್ರಕ್ಕೆ ಮೊದಲ ಆಯ್ಕೆ ಹೃತಿಕ್ ರೋಶನ್ (Hrithik Roshan), ಮಹೇಶ್ ಬಾಬು ಆಗಿದ್ದರು. ಆದರೆ ಅವರು ಆ ಪಾತ್ರವನ್ನು ಒಪ್ಪದೇ ಇದ್ದ ಕಾರಣ ರಣಬೀರ್ ಕಪೂರ್ ಆ ಪಾತ್ರಕ್ಕೆ ಆಯ್ಕೆಯಾದರು.

69

ಯಶ್ ನಿರ್ಮಾಪಕ ಕೂಡ ಹೌದು

ಯಶ್ (Rocking Star Yash) ರಾಮಾಯಣ ಸಿನಿಮಾದಲ್ಲಿ ಕೇವಲ ಲಂಕಾಧಿಪತಿ ರಾವಣನಾಗಿ ಮಾತ್ರ ಅಭಿನಯಿಸುತ್ತಿಲ್ಲ. ಇದರ ಜೊತೆ ಜೊತೆಗೆ ಯಶ್ ಈ ಬಿಗ್ ಬಜೆಟ್ ಸಿನಿಮಾ ರಾಮಾಯಣದ ನಿರ್ಮಾಪಕರೂ ಕೂಡ ಹೌದು.

79

ಗ್ರ್ಯಾಂಡ್ ಸೆಟ್

ರಾಮಾಯಣ ಸಿನಿಮಾಕ್ಕಾಗಿ ಮುಂಬೈ ಫಿಲಂ ಸಿಟಿಯೊಳಗೆ 12 ಗ್ರ್ಯಾಂಡ್ ಸೆಟ್ ನಿರ್ಮಾಣ ಮಾಡಲಾಯಿತು. ಇದರಲ್ಲಿಯೇ ಅಯೋಧ್ಯೆ ಮತ್ತು ಮಿಥಿಲೆಯ ನಿರ್ಮಾಣವನ್ನೂ ಸಹ ಮಾಡಲಾಗಿದೆ.

89

ಹಾಲಿವುಡ್ ಆಕ್ಷನ್ ಎಕ್ಸ್ ಪರ್ಟ್

ರಾಮಾಯಣ ಸಿನಿಮಾದ ಆಕ್ಷನ್ ಸಿರೀಸ್ ಗಾಗಿ ಹಾಲಿವುಡ್ ಸ್ಟಂಟ್ ಎಕ್ಸ್ ಪರ್ಟ್ (Hollywood Stunt Expert) ನಾರೀಸ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇವರು ಮಾರ್ಕ್ಸ್, ಫಾಸ್ಟ್ ಆಂಡ್ ಫ್ಯೂರಿಯಸ್ ಸಿನಿಮಾಗಳಿಗೂ ಕೆಲಸ ಮಾಡಿದ್ದರು.

99

ಬಿಗ್ ಬಜೆಟ್ ಸಿನಿಮಾ

ರಾಮಾಯಣ ಬಿಗ್ ಬಜೆಟ್ ಸಿನಿಮಾವಾಗಿದ್ದು, ಸಿನಿಮಾದಲ್ಲಿ ಅಂತಾರಾಷ್ಟ್ರೀಯ ಸ್ಟಂಟ್ ಎಕ್ಸ್ ಪರ್ಟ್ ಗಳು, ದೊಡ್ಡ ನಟ ನಟರ ಲಿಸ್ಟೇ ಇದೆ. ಜೊತೆಗೆ ಬೇರೆ ಭಾಷೆಗಳ ಹೆಸರಾಂತ ನಟರು ಕೂಡ ನಟಿಸಿದ್ದಾರೆ.

Read more Photos on
click me!

Recommended Stories