ಮಗುವಿಗೆ ಜನ್ಮ ನೀಡಿ 2 ತಿಂಗಳಲ್ಲೇ ಸಿಕ್ಕಾಪಟ್ಟೆ ತೆಳ್ಳಗಾದ ಅಲಿಯಾ ಭಟ್ ನೋಡಿ ಫ್ಯಾನ್ಸ್ ಅಚ್ಚರಿ

Published : Dec 31, 2022, 12:04 PM IST

ಅಲಿಯಾ ಭಟ್ ಶೇರ್ ಮಾಡಿರುವ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

PREV
17
ಮಗುವಿಗೆ ಜನ್ಮ ನೀಡಿ 2 ತಿಂಗಳಲ್ಲೇ ಸಿಕ್ಕಾಪಟ್ಟೆ ತೆಳ್ಳಗಾದ ಅಲಿಯಾ ಭಟ್ ನೋಡಿ ಫ್ಯಾನ್ಸ್ ಅಚ್ಚರಿ

ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ಮತ್ತೆ ಸಿನಿಮಾಗೆ ವಾಪಾಸ್ ಆಗಲು ಭರ್ಜರಿ ತಯಾರಿ ನಡೆಯುತ್ತಿದ್ದಾರೆ. ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಅಲಿಯಾ ಭಟ್ ಆಗಲೇ ಜಿಮ್‌, ಯೋಗ ಪ್ರಾರಂಭಿಸಿದ್ದಾರೆ. ಅಲಿಯಾ ಭಟ್ ವರ್ಕೌಟ್ ಮತ್ತು ಯೋಗ ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. 

27

ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಅಲಿಯಾ ಇತ್ತೀಚಿಗಷ್ಟೆ ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಣಬೀರ್ ಜೊತೆ ಮದುವೆ ಸಂಭ್ರಮದಲ್ಲಿ ಕಾಣಿಸಿಕೊಂಡಿದ್ದ ಅಲಿಯಾ ಫೋಟೋಗಳು ವೈರಲ್ ಆಗಿವೆ. 

37

ಅಲಿಯಾ ಸದ್ಯ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಿಕ್ಕಾಪಟ್ಟೆ ತೆಳ್ಳಗಾಗಿರುವ ಅಲಿಯಾ ನೋಡಿ  ಫ್ಯಾನ್ಸ್ ಅಚ್ಚರಿ ಪಡುತ್ತಿದ್ದಾರೆ. ಮಗುವಿನ ಜನ್ಮ ನೀಡಿ ಎರಡು ತಿಂಗಳಲ್ಲೇ ಈ ಪರಿ ಸಣ್ಣಗಾಗಿರುವ ಅಲಿಯಾಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬರುತ್ತಿದೆ. ಮೊದಲಿನ ಹಾಗೆ ಆಗಿರುವ ಅಲಿಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

47

ಅಂದಹಾಗೆ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ನವೆಂಬರ್ 6 ರಂದು ಹೆಣ್ಣು ಮಗುವನ್ನು ಸ್ವಾಗತಿಸಿದರು. ಮಗು ಜನಿಸಿ ಎರಡು ತಿಂಗಳಾಗುತ್ತಾ ಬಂತು ಆದರೆ ಇನ್ನೂ ಮಗುವಿನ ಫೋಟೋವನ್ನು ರಿವೀಲ್ ಮಾಡಿಲ್ಲ. ಆದರೆ ಇತ್ತೀಚಿಗಷ್ಟೆ ಅಲಿಯಾ ದಂಪತಿ ಮಗಳ ಹೆಸರನ್ನು ಬಹಿರಂಗ ಪಡಿಸಿದರು. ಮುದ್ದಾದ ಮಗಳಿಗೆ ಅಲಿಯಾ ದಂಪತಿ ರಾಹಾ ಎಂದು ಹೆಸರಿಟ್ಟಿದ್ದಾರೆ. 

57

ಅಲಿಯಾ ಇತ್ತೀಚಿಗಷ್ಟೆ ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ತಲೆಕೆಳಗಾಗಿ ನೇತಾಡುತ್ತಿರುವ ಫೋಟೋ  ನೋಡಿ ಎಲ್ಲರೂ ಶಾಕ್ ಆಗಿದ್ದರು. ಮಗುವಿಗೆ ಜನ್ಮ ನೀಡಿ ಕೆಲವೇ ದಿನಗಳಲ್ಲಿ ಈ ರೀತಿಯ ಸಾಹಸ ಮಾಡಿ ಅಚ್ಚರಿ ಮೂಡಿಸಿದ್ದರು ಅಲಿಯಾ ಭಟ್.  ಯೋಗದ ಫೋಟೋಗಳು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

67

ಅಂದಹಾಗೆ ಅಲಿಯಾ ಭಟ್ ಈ ವರ್ಷ ಏಪ್ರಿಲ್ ನಲ್ಲಿ ಹಸೆಮಣೆ ಏರಿದರು. ಏಪ್ರಿಲ್ 14ರಂದು ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್ ಜೊತೆ  ಅಲಿಯಾ ದಾಂಪತ್ಯಕ್ಕೆ ಕಾಲಿಟ್ಟರು. ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಅಲಿಯಾ ಮತ್ತು ರಣಬೀರ್ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

77

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲಿಯಾ ಮತ್ತು ರಣಬೀರ್ ಕಪೂರ್ ಇಬ್ಬರೂ ಕೊನೆಯದಾಗಿ ಬ್ರಹ್ಮಾಸ್ತ್ರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಸದ್ಯ ಅಲಿಯಾ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಇನ್ನು ಹಾಲಿವುಡ್ ಸಿನಿಮಾದ ಚಿತ್ರೀಕರಣ ಕೂಡ ಮುಗಿಸಿದ್ದಾರೆ. ಸದ್ಯ ಮತ್ತೆ ವರ್ಕೌಟ್ ಪ್ರಾರಂಭ ಮಾಡಿರುವ ಅಲಿಯಾ ಸದ್ಯದಲ್ಲೇ ಸಿನಿಮಾಗೆ ಮರಳಲಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories