ರಕ್ಷಿತ್ ಶೆಟ್ಟಿ ಜೊತೆ ಹೊಸ ಹುಡುಗಿ, ಫೋಟೋಸ್ ವೈರಲ್‌; ಯಾರು ಈ ಶರಣ್ಯ ಶೆಟ್ಟಿ?

First Published | Sep 20, 2023, 11:31 AM IST

ಸ್ಯಾಂಡಲ್‌ವುಡ್ ನಟ ರಕ್ಷಿತ್‌ ಶೆಟ್ಟಿ ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಖುಷಿಯಲ್ಲಿದ್ದಾರೆ. ಹೀಗಿರುವಾಗ ರಕ್ಷಿತ್‌ ಶೆಟ್ಟಿ ಹೊಸ ಹುಡುಗಿಯೊಬ್ಬಳ ಜೊತೆ ಕ್ಯಾಮರಾಗೆ ಫೋಸ್ ನೀಡಿರೋ ಫೋಟೋಸ್ ವೈರಲ್‌ ಆಗ್ತಿದೆ. ರಕ್ಷಿತ್ ಶೆಟ್ಟಿ ಜೊತೆ ಈಕೆಯ ಮದ್ವೆ ಫಿಕ್ಸಾಗಿದೆ ಅನ್ನೋ ಮಾತು ಕೇಳಿ ಬರ್ತಿದೆ. ಇಷ್ಟಕ್ಕೂ ಯಾರಾಕೆ?

ಸ್ಯಾಂಡಲ್‌ವುಡ್ ನಟ ರಕ್ಷಿತ್‌ ಶೆಟ್ಟಿ ಸದ್ಯ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾದ ಖುಷಿಯಲ್ಲಿದ್ದಾರೆ. ಹಲವು ಇಂಟರ್‌ವ್ಯೂಗಳಲ್ಲಿ ಭಾಗವಹಿಸಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಲವ್‌ ಲೈಫ್‌ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಹೀಗಿರುವಾಗ ರಕ್ಷಿತ್‌ ಶೆಟ್ಟಿ ಹುಡುಗಿಯೊಬ್ಬಳ ಜೊತೆ ಕ್ಯಾಮರಾಗೆ ಫೋಸ್ ನೀಡಿರೋ ಫೋಟೋಸ್ ವೈರಲ್‌ ಆಗ್ತಿದೆ.
 

ದುಬೈನಲ್ಲಿ ಸೈಮಾ2023 ಅವಾರ್ಡ್ ಫಂಕ್ಷನ್ ನಡೆದಿದ್ದು, ಇದರಲ್ಲಿ ಚಾರ್ಲಿ ಚಿತ್ರಕ್ಕಾಗಿ ಅವಾರ್ಡ್ ಪಡೆದಿರುವ ನಟ ಕ್ಯೂಟ್ ಗರ್ಲ್ ಜೊತೆ ಪೋಟೋಗೆ ಫೋಸ್ ನೀಡಿದ್ದಾರೆ.

Latest Videos


ರಕ್ಷಿತ್ ಶೆಟ್ಟಿ ಹಾಗೂ ಹುಡುಗಿ ಜೊತೆಯಾಗಿ ಪೋಸ್ ಕೊಟ್ಟಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈಕೆಯೇ ರಕ್ಷಿತ್ ಶೆಟ್ಟಿ ನ್ಯೂ ಗರ್ಲ್‌ಫ್ರೆಂಡ್‌, ಸದ್ಯದಲ್ಲೇ ಇಬ್ಬರೂ ಮದ್ವೆನೂ ಆಗ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.

ರಕ್ಷಿತ್ ಶೆಟ್ಟಿ ಜೊತೆ ಸ್ಟೈಲಾಗಿ, ಕ್ಯೂಟಾಗಿ ಫೋಟೋಗೆ ಫೋಸ್ ನೀಡಿರುವಾಕೆ ಮತ್ಯಾರು ಅಲ್ಲ. ಈಕೆ ಕನ್ನಡದ ಗಟ್ಟಿಮೇಳ ಧಾರಾವಾಹಿಯ ನಟಿ ಶರಣ್ಯ ಶೆಟ್ಟಿ. 
ಕೆಲವೊಂದು ಕನ್ನಡ ಸಿನಿಮಾಗಳಲ್ಲಿ ಸಹ ಅವರು ನಟಿಸಿದ್ದಾರೆ. ಶರಣ್ಯ ಶೆಟ್ಟಿ ಅವಾರ್ಡ್ ಫಂಕ್ಷನ್​ನಲ್ಲಿ ಸೆಲ್ಫಿ ಕೂಡಾ ತೆಗೆದುಕೊಂಡಿದ್ದಾರೆ. ಆದರೆ ಅವರು ರಕ್ಷಿತ್ ಶೆಟ್ಟಿ ಜೊತೆ ತೆಗೆಸಿಕೊಂಡ ಫೋಟೋ ವೈರಲ್ ಆಗಿದೆ.

ಪೀಚ್ ಕಲರ್ ಗೌನ್ ಧರಿಸಿದ್ದ ಶರಣ್ಯ ಶೆಟ್ಟಿ ನಟ ರಕ್ಷಿತ್ ಶೆಟ್ಟಿ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಶರಣ್ಯ ಫೋಟೋವನ್ನು ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅವರ ಫೋಟೋಸ್ ಫ್ಯಾನ್ಸ್​ಗೂ ಲೈಕ್ ಆಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ರಾಂಡಮ್ ಆಗಿ ವೈರಲ್ ಆಗಿದ್ದು ಇವರ ಫೊಟೋ ನೋಡಿದ ಫ್ಯಾನ್ಸ್ ಮದ್ವೆ ಯಾವಾಗ ಅಂತಿದ್ದಾರೆ.

ಗಟ್ಟಿಮೇಳ ಧಾರಾವಾಹಿಯಲ್ಲಿ ನಟಿಸುತ್ತಿರುವ ಶರಣ್ಯ ಶೆಟ್ಟಿ ಈ ಧಾರಾವಾಹಿ ಮೂಲಕವೇ ಫೇಮಸ್ ಆಗಿದ್ದಾರೆ. ಇದಕ್ಕಿಂತ ಮೊದಲು ಅವರು 1980 (2021) ಮತ್ತು ಹುಟ್ಟು ಹಬ್ಬದ ಶುಭಾಶಯಗಳು (2021),  ಸ್ಪೂಕಿ ಕಾಲೇಜ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಮಾತ್ರವಲ್ಲ ಮಿಸ್ ಸೌತ್ ಇಂಡಿಯಾ ಮತ್ತು ಮಿಸ್ ಬ್ಯೂಟಿಫುಲ್ ಸ್ಮೈಲ್ (2018) ಗೆದ್ದಿದ್ದಾರೆ. ಅವರು 1980ರ ಚಲನಚಿತ್ರಕ್ಕಾಗಿ 2022 ರ ಅತ್ಯುತ್ತಮ ಸೈಮಾ ಚೊಚ್ಚಲ ಪ್ರಶಸ್ತಿಯನ್ನು ಗೆದ್ದರು

ಶರಣ್ಯ ಶೆಟ್ಟಿ ಸದ್ಯ 107 ಸಾವಿರ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಟಿ ಇದುವರೆಗೆ 406 ಪೋಸ್ಟ್ ಶೇರ್ ಮಾಡಿದ್ದಾರೆ. ನಟಿ ಇನ್​ಸ್ಟಾಗ್ರಾಮ್​ನಲ್ಲಿ 99 ಜನರನ್ನು ಫಾಲೋ ಮಾಡುತ್ತಾರೆ.

ಅದೇನೆ ಇರ್ಲಿ, ರಶ್ಮಿಕಾ ಮಂದಣ್ಣ ಜೊತೆಗಿನ ಸಂಬಂಧ ಬ್ರೇಕಪ್ ಆದ ನಂತರ ರಕ್ಷಿತ್ ಶೆಟ್ಟಿ ಯಾವ ಹುಡುಗಿ ಜೊತೆ ಕಾಣಿಸಿಕೊಂಡರೂ ಸುದ್ದಿಯಾಗ್ತಿರೋದಂತೂ ನಿಜ. 

click me!