ರಣಬೀರ್ ಕಪೂರ್ ಲವ್‌ಲೈಫ್ ಸಖತ್ ಇಂಟರೆಸ್ಟಿಂಗ್. ಇವರ ಹೆಸರು ಹಲವು ನಟಿಯರೊಂದಿಗೆ ಥಳಕು ಹಾಕಿ ಕೊಂಡಿದೆ.
ಒಮ್ಮೆ ಆಲಿಯಾ ಅವರ ತಂದೆ ಮಹೇಶ್ ಭಟ್ ರಣಬೀರ್ ಅವರನ್ನು ಟಿವಿ ಶೋನಲ್ಲಿ ಲೇಡಿಸ್ ಮ್ಯಾನ್ ಎಂದೇ ಕರೆದಿದ್ದರು.
ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ರಿಲೆಷನ್‌ಶಿಪ್ ಮುರಿಯುಲು ದೊಡ್ಡ ಕಾರಣವೆಂದರೆ ರಣಬೀರ್ ಅವರ ಫ್ಲರ್ಟಿಂಗ್ ಸ್ವಭಾವ ಮತ್ತು ಕಮಿಟ್ಮೆಂಟ್ ಭಯ ಎಂದು ವರದಿಗಳು ಹೇಳುತ್ತವೆ.
ತನ್ನ ಮಗ ರಣಬೀರ್ ಕಪೂರ್‌ನ ಸಾಫ್ಟ್ ಸ್ವಭಾವ ಮತ್ತು ಅವನು ಹುಡುಗಿಯರಿಗೆ ನೋ ಎಂದು ಹೇಳಲು ಅಸಮರ್ಥನಾಗಿರುವುದರಿಂದ ರಾಂಗ್ ರಿಲೆಷನ್‌ಶಿಪ್‌ನಲ್ಲಿ ಸಿಲುಕಿಕೊಳ್ಳುತ್ತಾನೆ ಎಂದು ನೀತು ಸಿಂಗ್ ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ದೀಪಿಕಾ, ಕತ್ರೀನಾ ಮಂತಾದವರ ಜೊತೆ ರಣಬೀರ್ ಬ್ರೇಕಪ್‌ಗೆ ಹುಡುಗಿಯರೇ ಕಾರಣ ಎಂದು ಪರೋಕ್ಷವಾಗಿ ಬ್ಲೇಮ್ ಮಾಡಿದ್ದಾರೆ ನಟನ ತಾಯಿ ನೀತು ಸಿಂಗ್.
ಅವನು ಡೇಟಿಂಗ್ ಮಾಡುತ್ತಿದ್ದ ಆ ಹುಡುಗಿಯರು ಅವನಿಗೆ ಸರಿಹೊಂದುತ್ತಿರಲಿಲ್ಲ ಎಂದು ನೀತು ಹೇಳಿದರು.
'ಅವನು ತುಂಬಾ ಮೃದು. ಅವನು ಯಾರನ್ನೂ ನೋಯಿಸುವುದಿಲ್ಲ. ಸಂಬಂಧಗಳಲ್ಲೂ ಅಷ್ಟೇ. ಅವನಿಗೆ ಹೇಗೆ ಇಲ್ಲ ಎಂದು ಹೇಳಬೇಕೆಂದು ತಿಳಿದಿಲ್ಲ. ಅದು ನಡೆಯುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಮತ್ತು ಅದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ' ಎಂದು ಫಸ್ಟ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ ನಟನ ತಾಯಿ.
'ಮೊದಲ ಬಾರಿಗೆ ಅವನು ರಿಲೆಷನ್‌ಶಿಪ್‌ನಲ್ಲಿದ್ದಾಗ ಆ ಹುಡುಗಿ ಅವನಿಗೆ ಸರಿಯಲ್ಲ ಎಂದು ನನಗೆ ತಿಳಿಯಿತು. ಆದರೆ ನಾನು ಅವನಿಗೆ ಹೇಳಿದಾಗ, ಅವನು ವಿರೋಧಿಸಿದ. ಹಾಗಾಗಿ ಅದನ್ನು ಇನ್ನೊಂದು ರೀತಿಯಲ್ಲಿ ನಿಭಾಯಿಸಲು ಕಲಿತಿದ್ದೇನೆ,' ಎಂದು ಹೇಳಿದ್ದರು ನೀತು ಸಿಂಗ್.
ರಣಬೀರ್ ಡೇಟಿಂಗ್ ಮಾಡುತ್ತಿರುವ ಹುಡುಗಿಯರ ಬಗ್ಗೆ ಗಂಭೀರವಾಗಿ ಯೋಚಿಸಬೇಡ ಎಂದು ನೀತು ಸಲಹೆ ನೀಡಿದ್ದಾರಂತೆ.
ಇಷ್ಟು ಬೇಗ ಸೀರಿಯಸ್ ಆಗಬೇಡ. ಪರಸ್ಪರ ಹೆಚ್ಚು ಮೀಟ್ ಮಾಡುವುದರಿಂದ ಅವರ ಬಗ್ಗೆ ತಿಳಿಯುತ್ತದೆ. ಆದ್ದರಿಂದ ಅನೇಕ ಹುಡುಗಿಯರನ್ನು ಭೇಟಿ ಮಾಡು ಮತ್ತು ಅವರೊಂದಿಗೆ ಹೊರಗೆ ಹೋಗು.ಆದರೆ ಕಮಿಟ್ ಆಗಬೇಡ ಎಂದು ನಾನು ಅವನಿಗೆ ಹೇಳಿದ್ದೇನೆ.ನಾನು ಅವನಿಗೆ ರೇಗಿಸದೇ ಇರುವುದನ್ನು ಕಲಿತಿದ್ದೇನೆ. ಒಮ್ಮೆ ಹೇಳಿ ಸುಮ್ಮನಾಗುತ್ತೇನೆ. ಇದು ವರ್ಕ್ ಆಗುತ್ತದೆ,' ಎಂದು ನೀತು ಹೇಳಿದ್ದಾರೆ.