Kareena ನೀಡಿದ ಟಾಸ್ಕ್‌ ಪೂರ್ಣಗೊಳಿಸಿದ Ranbir-Neetu Singh

First Published | May 1, 2022, 4:59 PM IST

ಆಮೀರ್ ಖಾನ್ (Aamir Khan)ಮತ್ತು ಕರೀನಾ ಕಪೂರ್ (Kareena Kapoor)ಅಭಿನಯದ ಬಹು ನಿರೀಕ್ಷಿತ ಚಿತ್ರ ಲಾಲ್ ಸಿಂಗ್ ಚಡ್ಡಾದ  (Laal Singh Chaddha) ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ವೇಳೆ ಕರೀನಾ-ಆಮೀರ್ ತಮ್ಮ ಸ್ನೇಹಿತರಿಗೆ ಫೆದರ್‌  ಚಾಲೆಂಜ್ ನೀಡಿದ್ದು, ಅದನ್ನು ತಾವೇ ಪೂರ್ಣಗೊಳಿಸಿದ್ದಾರೆ. ಆಕೆಯ ಸವಾಲನ್ನು ಕರೀನಾ ಅವರ ಚಿಕ್ಕಮ್ಮ ನೀತು ಸಿಂಗ್ (Neetu Singh)  ಅವರ ಮಗ ರಣಬೀರ್ ಕಪೂರ್ (Ranbir Kapoor)  ಜೊತೆಗೆ ಪೂರ್ಣಗೊಳಿಸಿದರು. ಚಾಲೆಂಜ್ ಅನ್ನು ಪೂರ್ಣಗೊಳಿಸಿದ ನೀತು ಸಿಂಗ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. 

ಆದರೆ, ಈ ಚಾಲೆಂಜ್ ನಲ್ಲಿ ನೀತು ತನ್ನ ಮಗ ರಣಬೀರ್ ಅನ್ನು ಹಿಂದಿಕ್ಕಿದ್ದು ಕಂಡುಬಂತು. ನೀತು ಮೊದಲು ಗರಿಗಳನ್ನು ಊದುತ್ತಾರೆ ಮತ್ತು ನಂತರ ರಣಬೀರ್ ಸವಾಲನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಅವರಿಗೆ ಫೆದರ್‌ ಅನ್ನು ಸರಿಯಾಗಿ ಹಾರಿಸಲು ಸಾಧ್ಯವಾಗುತ್ತಿಲ್ಲ ಮತ್ತು ನೀತು ಮಗನನ್ನು ನೋಡಿ ನಗುವುದು ವೀಡಿಯೊದಲ್ಲಿ ಕಾಣಬಹುದು.

ನೀತು ಸಿಂಗ್ - ರಣಬೀರ್ ಕಪೂರ್ ಜೊತೆ ಅಭಿಮಾನಿಗಳು ಖುಷಿಪಟ್ಟಿದ್ದಾರೆ.  ಫೆದರ್ ಚಾಲೆಂಜ್ ಅನ್ನು ಪೂರ್ಣಗೊಳಿಸುವ ವೀಡಿಯೊವನ್ನು ನೀತು ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.ಡಿನ್ನರ್‌ ಸಮಯದಲ್ಲಿ ಚಾಲೆಂಜ್ ಪೂರ್ಣಗೊಂಡಿದೆ #lalsinghchaddha ಎಂದು ವೀಡಿಯೊವನ್ನು ಹಂಚಿಕೊಳ್ಳುವಾಗ, ಅವರು ಬರೆದಿದ್ದಾರೆ.

Tap to resize

ಅವರ ಪೋಸ್ಟ್‌ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ತಾಯಿ ಮತ್ತು ಮಗನನ್ನು ಒಟ್ಟಿಗೆ ನೋಡಿ ತುಂಬಾ ಸಂತೋಷಪಟ್ಟಿದ್ದಾರೆ. ವಾವ್ ಮೇಡಮ್ ಎಂದು  ಒಬ್ಬರು ಬರೆದಿದ್ದಾರೆ. ಇದು ಅನಿಮಲ್ ಚಿತ್ರದ ನೋಟವೇ? ಎಂದು ಮತ್ತೊಬ್ಬರು ರಣಬೀರ್ ಕಪೂರ್ ಅವರನ್ನು ಕೇಳಿದರು.

'ತುಂಬಾ ಮುದ್ದಾಗಿದೆ ರಣಬೀರ್ ಸರ್ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದರೆ ಮತ್ತೊಬ್ಬರು ನೀವಿಬ್ಬರು ಒಟ್ಟಿಗೆ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ ಎಂದಿದ್ದಾರೆ. ನಾನು ನಿಮ್ಮ ದೊಡ್ಡ ಅಭಿಮಾನಿ, ಐ ಲವ್ ಯೂ ರಣಬೀರ್ ಸರ್,  ತಾಯಿಯಂತೆ ಮಗ' ಹೀಗೆ ನೀತು ಸಿಂಗ್‌ ವೀಡಿಯೋಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿ ದ್ದಾರೆ. ಅಂತೆಯೇ, ಅನೇಕರು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಹಂಚಿಕೊಂಡಿದ್ದಾರೆ.

ಲಾಲ್ ಸಿಂಗ್ ಚಡ್ಡಾ ಆಗಸ್ಟ್ 11 ರಂದು ಬಿಡುಗಡೆಯಾಗುತ್ತಿದೆ. ಆಮೀರ್ ಖಾನ್ ಮತ್ತು ಕರೀನಾ ಕಪೂರ್ ಅವರ ಚಿತ್ರ ಲಾಲ್ ಸಿಂಗ್ ಚಡ್ಡಾ ಈ ವರ್ಷದ ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಕರೀನಾ-ಆಮೀರ್  ಈ ಚಿತ್ರಕ್ಕಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದು, ಅದೇ ರೀತಿಯಲ್ಲಿ ಇಬ್ಬರೂ ಫೆದರ್ ಚಾಲೆಂಜ್ ಮಾಡಿದ್ದಾರೆ. 

ಕರೀನಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೆದರ್ ಚಾಲೆಂಜ್‌ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ನನ್ನ ಹೀರೋ #ಆಮಿರ್‌ಖಾನ್ ಜೊತೆಗೆ #ಫೆದರ್‌ಚಾಲೆಂಜ್‌ ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ಚಿತ್ರಕ್ಕೂ ಮೊದಲು ಕರೀನಾ-ಆಮೀರ್ ಜೋಡಿ 3 ಈಡಿಯಟ್ಸ್ ಚಿತ್ರದಲ್ಲಿ ಕಾಣಿಸಿಕೊಂಡಿತ್ತು ಮತ್ತು ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಎಂದು ಸಾಬೀತಾಯಿತು.

Latest Videos

click me!