ಬಾಲಿವುಡ್ ಸ್ಟಾರ್ ನಟಿ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಬಾಲಿವುಡ್ ಮೋಸ್ಟ್ ಬ್ಯೂಟಿಫುಲ್ ಆಂಡ್ ಟ್ಯಾಲೆಂಟೆಡ್ ನಟಿ ಅನುಷ್ಕಾ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಪಿಕೆ, ರಬ್ ದೇ ಬನಾದಿ ಜೋಡಿ, ಫಿಲೋರಿ, ಎನ್ ಹೆಚ್ 10, ಪರಿ, ಸಂಜು ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಿನಿಮಾಗಳ ಆಯ್ಕೆ ವಿಚಾರದಲ್ಲಿ ಸಿಕ್ಕಾಪಟ್ಟೆ ಚೂಜಿಯಾಗಿರುವ ಅನುಷ್ಕಾ ಅನೇಕ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದಾರೆ. ಅನುಷ್ಕಾ ಶರ್ಮಾ ತಿರಸ್ಕರಿಸಿರುವ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅನುಷ್ಕಾ ಬೇಡ ಎಂದು ಬಿಟ್ಟ ಸಿನಿಮಾಗಳಲ್ಲಿ ದೀಪಿಕಾ ಪಡುಕೋಣೆ, ಕರೀನಾ ಕಪೂರ್ ಮತ್ತು ಕತ್ರಿನಾ ಕೈಫ್ ಕಾಣಿಸಿಕೊಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದಾರೆ.
ಕಿ ಆಂಡ್ ಕಾ
ಅನುಷ್ಕಾ ರಿಜೆಕ್ಟ್ ಮಾಡಿದ ಸಿನಿಮಾಗಳಲ್ಲಿ ಕಿ ಅಂಡ್ ಕಾ ಸಿನಿಮಾ ಕೂಡ ಒಂದು. ಈ ಸಿನಿಮಾಗೆ ಮೊದಲು ಅನುಷ್ಕಾ ಅವರಿಗೆ ಆಫರ್ ಮಾಡಲಾಗಿತ್ತು. ಆದರೆ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಲು ತಿರಸ್ಕರಿಸಿದ ಕಾರಣ ಕರೀನಾ ಕಪೂರ್ ಅವರನ್ನು ಆಯ್ಕೆ ಮಾಡಲಾಯಿತು.
ತಮಾಷ
ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟನೆಯ ತಮಾಷ ಸಿನಿಮಾದ ಮೊದಲು ಆಫರ್ ಹೋಗಿದ್ದು ಅನುಷ್ಕಾ ಶರ್ಮಾಗೆ. ಇಮ್ತಿಯಾಜ್ ಅಲಿ ಅವರ ತಮಾಷ ಸಿನಿಮಾದಲ್ಲಿ ಅನುಷ್ಕಾ ಬದಲಿಗೆ ದೀಪಿಕಾ ಪಡುಕೋಣೆ ಕಾಣಿಸಿಕೊಂಡರು.
2 ಸ್ಟೇಟ್
ಅಲಿಯಾ ಭಟ್‌ಗೂ ಮೊದಲು ಈ ಸಿನಿಮಾದ ಆಫರ್ ಹೋಗಿದ್ದು ಅನುಷ್ಕಾ ಶರ್ಮಾ ಅವರಿಗೆ. ಆದರೆ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿದರು. ಬಳಿಕ ಅಲಿಯಾ ಭಟ್ ನಟಿಸಿದರು. ಈ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.
Image: Anushka SharmaInstagram
ಬಾರ್ ಬಾರ್ ದೇಖೋ
ಕತ್ರಿನಾ ಕೈಫ್ ಆಯ್ಕೆಯಾಗುವ ಮೊದಲು ಬಾರ್ ಬಾರ್ ದೇಖೋ ಚಿತ್ರಕ್ಕೆ ಅನುಷ್ಕಾ ಶರ್ಮಾ ಆಯ್ಕೆಯಾಗಿದ್ದರು. ಆದರೆ ಈ ಸಿನಿಮಾದಲ್ಲೂ ನಟಿಸಲು ಹಿಂದೇಟು ಹಾಕಿದರು. ಈ ಸಿನಿಮಾದಲ್ಲಿ ನಾಯಕನಾಗಿ ಸಿದ್ಧಾರ್ಥ್ ಮಲ್ಹೋತ್ರ ಕಾಣಿಸಿಕೊಂಡಿದ್ದರು.
3 ಇಡಿಯಟ್ಸ್
ಅನುಷ್ಕಾ ತಿರಸ್ಕರಿಸಿದ್ದ ಸಿನಿಮಾಗಳಲ್ಲಿ 3 ಇಡಿಯಟ್ಸ್ ಕೂಡ ಒಂದು. ಪ್ರಿಯಾ ಪಾತ್ರಗೆ ಮೊದಲು ಆಯ್ಕೆಯಾಗಿದ್ದು ಅನುಷ್ಕಾ ಶರ್ಮಾ. ಆದರೆ ಅನುಷ್ಕಾ ಈ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿಲ್ಲ. ಆಮೀರ್ ಖಾನ್, ಮಾಧವನ್ ಮತ್ತು ಶರ್ಮ ಜೋಷಿ ಅಭಿನಯದ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಅನುಷ್ಕಾ ಬದಲಿಗೆ ಈ ಸಿನಿಮಾದಲ್ಲಿ ಕರೀನಾ ಕಪೂರ್ ಕಾಣಿಸಿಕೊಂಡರು.