ಬಾಬಿ ಡಿಯೋಲ್-ನೀಲಂ ಕೊಠಾರಿ 5 ವರ್ಷದ ಪ್ರೀತಿ ಕೊನೆಯಾಗಲು ನಟ ಧರ್ಮೇಂದ್ರ ವಿಲನ್‌!

First Published | Nov 8, 2023, 3:05 PM IST

ನಟಿ ನೀಲಂ ಕೊಠಾರಿ ಸೋನಿ  ಮತ್ತು ನಟ ಬಾಬಿ ಡಿಯೋಲ್‌ನೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್‌ನಲ್ಲಿದ್ದರು. ಈ ಪ್ರೀತಿಗೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ. ನಟ ಧರ್ಮೇಂದ್ರ ಕಾರಣವಂತೆ, ಪೂಜಾ ಭಟ್ ಕೂಡ ಇವರ ಮಧ್ಯೆ ಬಂದರು ಎಂದೆಲ್ಲ ಊಹಾಪೋಹಗಳಿವೆ.

ನಟಿ ನೀಲಂ ಕೊಠಾರಿ ಸೋನಿ ಇತ್ತೀಚೆಗೆ ಮೇಡ್ ಇನ್ ಹೆವೆನ್ ಸೀಸನ್ 2 ನೊಂದಿಗೆ ಬಣ್ಣದ ಬದುಕಿಗೆ ಪುನರಾಗಮನ ಮಾಡಿದರು.  ನೀಲಂ 90 ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದರು. ಅವರು 2011 ರಲ್ಲಿ ಸಮೀರ್ ಸೋನಿ ಅವರೊಂದಿಗೆ ವಿವಾಹವಾಗಿ ಬಣ್ಣದ ಬದುಕಿನಿಂದ ವಿರಾಮ ತೆಗೆದುಕೊಂಡರು.

ಸಮೀರ್‌ನೊಂದಿಗಿನ ನಟಿಯ ಪ್ರೇಮಕಥೆಯ ಬಗ್ಗೆ ಅನೇಕರಿಗೆ ತಿಳಿದಿದ್ದರೂ, ನೀಲಂ ಕೊಠಾರಿ ಸೋನಿ ನಟ ಬಾಬಿ ಡಿಯೋಲ್‌ನೊಂದಿಗೆ ಐದು ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದರು. ಆದರೆ ಬಹುದೊಡ್ಡ ಕಾರಣದಿಂದ ಮದುವೆಯಾಗಲು ಸಾಧ್ಯವಾಗಲಿಲ್ಲ.

Latest Videos


ಇಬ್ಬರು ತಾರೆಯರು ತಾವು ಬಣ್ಣದ ಬದುಕಿಗೆ ಕಾಲಿಡುವ ಮೊದಲೇ  ಸಂಪರ್ಕದಲ್ಲಿದ್ದರು. 1995 ರ ರೊಮ್ಯಾಂಟಿಕ್ ನಾಟಕ ಬರ್ಸಾತ್‌ನಲ್ಲಿ ನಟನೆಗೆ ಪಾದಾರ್ಪಣೆ ಮಾಡುವ ಮೊದಲೇ ನೀಲಂ ಮತ್ತು ಬಾಬಿ ಪರಸ್ಪರ ಡೇಟಿಂಗ್‌ ನಲ್ಲಿದ್ದರು. ಮತ್ತೊಂದೆಡೆ, ನೀಲಂ  1984 ರಲ್ಲಿ ಬಿಡುಗಡೆಯಾದ ಜವಾನಿಯಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. 

ನೀಲಂ ಮತ್ತು ಬಾಬಿ ಅವರ ಸಂಬಂಧ 5 ವರ್ಷಗಳ ಬಳಿಕ ಕೊನೆಯಾಯ್ತು. ಇದಕ್ಕೆ ಕಾರಣ ನಟನ ತಂದೆ  ಪ್ರಸಿದ್ದ ನಟ ಧರ್ಮೇಂದ್ರ ಅವರೇ ಕಾರಣ ಎಂಬ ಊಹಾಪೋಹಗಳು ಇದ್ದವು. ಯಾಕೆಂದರೆ ಮಗ ನಟಿಯೊಬ್ಬಳನ್ನು ಮದುವೆಯಾಗುವುದು ಧರ್ಮೆಂದ್ರ ಅವರಿಗೆ ಇಷ್ಟವಿರಲಿಲ್ಲವಂತೆ.
 

ಹಳೆಯ ಸಂದರ್ಶನವೊಂದರಲ್ಲಿ, ನೀಲಂ ಕೊಠಾರಿ, ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ. ನನ್ನ ನಂಬಿಕೆ, ಈ ನಿರ್ಧಾರವು ಎರಡೂ ಕುಟುಂಬಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಸ್ಟಾರ್‌ಡಸ್ಟ್ ಮ್ಯಾಗಜೀನ್‌ಗೆ ನೀಡಿದ ಸಂದರ್ಶನದಲ್ಲಿ, ಹಮ್ ಸಾಥ್ ಸಾಥ್ ಹೇ ನಟಿ ನೀಲಂ, ಬಾಬಿ ಅವರು ಬಾಲಿವುಡ್‌ನಲ್ಲಿ ಯಶಸ್ವಿ ವೃತ್ತಿಜೀವನವನ್ನು ಮಾಡಲು ಸಾಧ್ಯವಾಗುತ್ತದೆಯೇ ಎಂದು ಖಾತ್ರಿಯಿಲ್ಲದ ಕಾರಣದಿಂದ ಬ್ರೇಕ್‌ಅಪ್‌ ಮಾಡಿಕೊಂಡೆ ಎಂದು ಕಾರಣ ನೀಡಿದ್ದರು.
 

ನಾನು ಅಂತಿಮವಾಗಿ ಸ್ಟಾರ್‌ ಪತ್ನಿಯಾಗಿ ಕೊನೆಗೊಳ್ಳುವ ಬಗ್ಗೆ ಯೋಚಿಸುತ್ತಲೇ ಇದ್ದೆ. ಈ ಆಲೋಚನೆಯು ನನ್ನನ್ನು ತುಂಬಾ ಕಾಡಿತ್ತು. ಚಲನಚಿತ್ರಗಳಲ್ಲಿ ತೊಡಗಿಸಿಕೊಳ್ಳುವ ವ್ಯಕ್ತಿಯೊಂದಿಗೆ ತೊಡಗಿಸಿಕೊಳ್ಳುವ ಆಲೋಚನೆ ಮಾಡಿದ್ದೆ. ಆದರೆ ಬಾಬಿ ಇನ್ನೂ ಸೀರಿಯಸ್‌ ಆಗಿರಲಿಲ್ಲ.  ನನಗೆ ಭಯವಾಯಿತು. ಭಯಂಕರವಾಗಿ ಹೆದರಿದೆ. ನಾನು ಭಯವನ್ನು ವಿವರಿಸಲು ಸಾಧ್ಯವಿಲ್ಲ, ನಾನು ಈ ಬಗ್ಗೆ ತುಂಬಾ ಯೋಚಿಸಿ ಸಂಬಂಧವನ್ನು ಒಳ್ಳೆಯ ರೀತಿಯಲ್ಲಿ ಕೊನೆಗೊಳಿಸಲು ಮುಂದಾದೆ. ಸಮಯ ಕಳೆಯುತ್ತಿತ್ತು. ಇದು ನನ್ನ ಸುತ್ತಲಿನ ಎಲ್ಲಾ ಸ್ಟಾರ್ ಹೆಂಡತಿಯರ ಬದುಕಲ್ಲಿ ಕೂಡ ನಡೆಯುತ್ತಿತ್ತು.   ನಾನು ತಡವಾಗಿ ನಿರ್ಧರಿಸಿದ್ದೆ ಎಂದಿದ್ದರು.

ಪೂಜಾ ಭಟ್ ಅವರನ್ನು ಇಷ್ಟಪಡಲು ಪ್ರಾರಂಭಿಸಿದ ನಂತರ ನಟ ಬಾಬಿ ನೀಲಂ ಅವರೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದರು ಎಂಬ ಸುದ್ದಿಯೂ ಇತ್ತು. ಆದರೆ ನೀಲಂ ಈ ವದಂತಿಗಳನ್ನು ತಿರಸ್ಕರಿಸಿದರು. ಪೂಜಾ ಭಟ್ ಜೊತೆಗಿನ ಒಳಗೊಳ್ಳುವಿಕೆಯಿಂದಾಗಿ ಬಾಬಿ ಮತ್ತು ನಾನು ಬೇರ್ಪಟ್ಟಿದ್ದೇವೆ ಎಂಬ ವದಂತಿಗಳಲ್ಲಿ ಒಂದಾಗಿದೆ.  ಇದು ಸುಳ್ಳು ಎಂದು  ಜಗತ್ತಿಗೆ ಹೇಳುತ್ತೇನೆ. ಪೂಜಾ ಭಟ್ ಕಾರಣದಿಂದ ನಾನು ಬಾಬಿ ಜೊತೆ ಮುರಿದು ಬೀಳಲಿಲ್ಲ. ಅಥವಾ ಆ ವಿಷಯಕ್ಕೆ ಬೇರೆ ಯಾವುದೇ ಹುಡುಗಿ ಅಲ್ಲ ಎಂದಿದ್ದರು.

ಇನ್ನು 1996 ರಲ್ಲಿ ಬಾಬಿ ಡಿಯೋಲ್ ತಾನ್ಯಾ ಅಹುಜಾ ಅವರನ್ನು ವಿವಾಹವಾದರು ಮತ್ತು ಇಬ್ಬರು  ಪುತ್ರರನ್ನು ಹೊಂದಿದ್ದಾರೆ. ಆರ್ಯಮನ್ ಡಿಯೋಲ್ ಮತ್ತು ಧರಮ್ ಡಿಯೋಲ್. ನೀಲಂ 2000 ರಲ್ಲಿ ಉದ್ಯಮಿಯ ಮಗ ರಿಷಿ ಸೇಥಿಯಾ ಎಂಬವರನ್ನು ವಿವಾಹವಾದರು ಮತ್ತು ವಿಚ್ಛೇದನ ಪಡೆದರು. ನಂತರ ಅವರು 2011 ರಲ್ಲಿ ನಟ ಸಮೀರ್ ಸೋನಿ ಅವರೊಂದಿಗೆ ಎರಡನೇ ಮದುವೆಯಾದರು ಮತ್ತು ಅವರು ಎರಡು ವರ್ಷಗಳ ನಂತರ ಅಹಾನಾ ಸೋನಿ ಎಂಬ ಮಗಳನ್ನು ದತ್ತು ಪಡೆದರು. 
 

click me!