400 ಕೋಟಿ ಒಡೆಯ ದಳಪತಿ ವಿಜಯ್ ಮದುವೆಯಾಗಿದ್ದು ಸಾಧಾರಣ ಹೆಣ್ಣನ್ನು!
ದಕ್ಷಿಣ ಚಿತ್ರರಂಗದಲ್ಲಿ ದಳಪತಿ ವಿಜಯ್ (Thalapathy Vijay ) ಹೆಸರಲ್ಲಿ ಖ್ಯಾತರಾಗಿರುವ ಜೋಸೆಫ್ ವಿಜಯ್ ಇಂದು ತಮ್ಮ 48ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರು 22 ಜೂನ್ 1974 ರಂದು ಚೆನ್ನೈನಲ್ಲಿ ಜನಿಸಿದರು. ವರದಿಗಳ ಪ್ರಕಾರ, ಸೌತ್ ಇಂಡಸ್ಟ್ರಿಯಲ್ಲಿ ಬಾಕ್ಸ್ ಆಫೀಸ್ ರಾಜ ಎಂದು ಕರೆಯಲ್ಪಡುವ ವಿಜಯ್ ಅವರ ಆಸ್ತಿ ಸುಮಾರು 400 ಕೋಟಿ. ಅವರು ಚೆನ್ನೈನ ಐಷಾರಾಮಿ ಪ್ರದೇಶದಲ್ಲಿ ಬಂಗಲೆ ಹೊಂದಿದ್ದಾರೆ. ಅವರು ಯಾವುದೇ ಜನಪ್ರಿಯ ನಟಿ ಅಥವಾ ಯಾವುದೇ ಸೆಲೆಬ್ರಿಟಿಯನ್ನು ಮಾಡಿಲ್ಲ ಆದರೆ ತಮ್ಮದೇ ಅಭಿಮಾನಿಯನ್ನು ತಮ್ಮ ಜೀವನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ವಿಜಯ್ ಅವರ ಆಸ್ತಿ, ಕಾರುಗಳ ಕಲೆಕ್ಷನ್ ಹಾಗೂ ಪರ್ಸನಲ್ ಲೈಫ್ ಬಗ್ಗೆ ಮಾಹಿತಿ ಇಲ್ಲಿದೆ.