ಅವಳಿ ಮಕ್ಕಳ ಪೂರ್ಣ ಹೆಸರು ರಿವೀಲ್ ಮಾಡಿದ ನಯನತಾರಾ; ಫೋಟೋ ಹಂಚಿಕೊಂಡ ವಿಘ್ನೇಶ್‌

Published : Apr 03, 2023, 05:31 PM IST

ನಯನತಾರಾ (Nayanthara) ಮತ್ತು ವಿಘ್ನೇಶ್ ಶಿವನ್ (Vignesh Shivan) ಕಾಲಿವುಡ್‌ನ ಅತ್ಯಂತ ಆರಾಧ್ಯ ಜೋಡಿಗಳಲ್ಲೊಂದು. ದಂಪತಿ ಕಳೆದ ವರ್ಷ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಸ್ವಾಗತಿಸಿದ್ದಾರೆ. ಇತ್ತೀಚಿಗೆ ನಟಿ ತಮ್ಮ ಮಕ್ಕಳ ಪೂರ್ಣ ಹೆಸರನ್ನು ಪ್ರಕಟಿಸಿದ್ದಾರೆ. ಉಯಿರ್ ರುದ್ರೋಣಿ ಎನ್ ಶಿವನ್, ಉಲಗ್ ಧೈವಾಗ್ ಎನ್ ಶಿವನ್ ಎಂದು ಅವಳಿ ಮಕ್ಕಳ  ಹೆಸರನ್ನು ನಟಿ ನಯನಾತಾರ ಬಹಿರಂಗಪಡಿಸಿದ್ದಾರೆ.

PREV
19
ಅವಳಿ ಮಕ್ಕಳ ಪೂರ್ಣ ಹೆಸರು ರಿವೀಲ್ ಮಾಡಿದ ನಯನತಾರಾ; ಫೋಟೋ ಹಂಚಿಕೊಂಡ ವಿಘ್ನೇಶ್‌

ಇತ್ತೀಚೆಗೆ, ನಯನತಾರಾ ಅವರು ಚೆನ್ನೈನಲ್ಲಿ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದ್ದರು ಮತ್ತು ಆ ಸಮಯದಲ್ಲಿ ಅವರು ಅವಳಿಗಳ ಪೂರ್ಣ ಹೆಸರನ್ನು ಬಹಿರಂಗಪಡಿಸಿದರು. 

29

ತನ್ನ ಅವಳಿ ಮಕ್ಕಳ ಪೂರ್ಣ ಹೆಸರುಗಳನ್ನು ಕೇಳಿದಾಗ, ಉತ್ಸಾಹದಿಂದ, ನಟಿ ವೇದಿಕೆಯಲ್ಲಿ 'ನನ್ನ ಮೊದಲ ಮಗ ಉಯಿರ್ ರುದ್ರೋನಿಲ್ ಎನ್ ಶಿವನ್ ಮತ್ತು ನನ್ನ ಎರಡನೇ ಮಗ ಉಲಗ್ ಧೈವಾಗ್ ಎನ್ ಶಿವನ್' ಎಂದು ಹೇಳಿದ್ದಾರೆ. 

39

ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಅದರ ನಂತರ , ಈಗ, ವಿಘ್ನೇಶ್ ಶಿವನ್ ಅವರು  ಸೂರ್ಯಾಸ್ತದ ಸಮಯದಲ್ಲಿ ತೆಗೆದ ಕುಟುಂಬ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಮಕ್ಕಳನ್ನು Instagram ನಲ್ಲಿ ಬಹಿರಂಗಪಡಿಸಿದ್ದಾರೆ. 

49

ಹೆಸರಿನಲ್ಲಿ ಎನ್ ಎಂದರೆ ಏನು ಎಂಬುದನ್ನು ಸಹ ಅವರು ಹಂಚಿಕೊಂಡಿದ್ದಾರೆ.  #ಉಯಿರ್ ರುದ್ರೋನೀಲ್ ಎನ್ ಶಿವನ್,#ಉಲಗ್ ದೈವಿಕ್ ಎನ್ ಶಿವನ್. ಎನ್ ಎಂದರೆ ವಿಶ್ವದ ಅತ್ಯುತ್ತಮ ತಾಯಿ #ನಯನತಾರಾ. ನಮ್ಮ ಶಿಶುಗಳ ಹೆಸರನ್ನು ಪರಿಚಯಿಸಲು ನಾವು ಸಂತೋಷಪಡುತ್ತೇವೆ ಮತ್ತು ಹೆಮ್ಮೆಪಡುತ್ತೇವೆ ಎಂದು ವಿಘ್ನೇಶ್‌ ಬರೆದುಕೊಂಡಿದ್ದಾರೆ.

59

ಫೋಟೋಗಳಲ್ಲಿ, ನಯನಾತಾರಾ ಅವರು ಕಿಟಕಿಯಿಂದ ಸೂರ್ಯಾಸ್ತವನ್ನು ನೋಡುವುದನ್ನು ಆನಂದಿಸುತ್ತ ತನ್ನ ಮಕ್ಕಳನ್ನು ತೋಳುಗಳಲ್ಲಿ ಹಿಡಿದಿರುವುದನ್ನು ಕಾಣಬಹುದು. 

69

ಅನೇಕ ವರ್ಷಗಳ ಡೇಟಿಂಗ್ ನಂತರ ಜೂನ್ 9, 2022 ರಂದು, ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ  ಮದುವೆಯಾದರು.  

79

ನಾನುಮ್ ರೌಡಿ ಧಾನ್ ಸೆಟ್‌ನಲ್ಲಿ ಪ್ರೀತಿಸುಲು ಆರಂಭಿಸಿದ ಈ ಜೋಡಿ 5 ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡುತ್ತಿದ್ದರು. ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಚಿತ್ರರಂಗದ ಕುಟುಂಬ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

89

ಮದುವೆಯ ನಾಲ್ಕು ತಿಂಗಳ ನಂತರ, ದಂಪತಿಗಳು ತಮ್ಮ ಮುಗುವಿನ ಆಗಮನವನ್ನು  ಘೋಷಿಸಿದರು ಮತ್ತು ಬಾಡಿಗೆ ತಾಯ್ತನದ ಮೂಲಕ ಅವಳಿ ಹುಡುಗರಾದ ಉಯಿರ್ ಮತ್ತು ಉಲಗ್ ಅವರನ್ನು ಸ್ವಾಗತಿಸಿದರು. 

99

ಅಕ್ಟೋಬರ್‌ನಲ್ಲಿ, ವಿಘ್ನೇಶ್ ಶಿವನ್ ಅವರು ತಮ್ಮ ನವಜಾತ ಶಿಶುಗಳ ಪುಟ್ಟ ಪಾದಗಳನ್ನು ಚುಂಬಿಸುವ ಎರಡು ಸುಂದರವಾದ ಫೋಟೋಗಳನ್ನು ಹಂಚಿಕೊಂಡರು ಮತ್ತು ಅವಳಿಗಳನ್ನು ಸ್ವಾಗತಿಸುವುದಾಗಿ ಘೋಷಿಸಿದರು.  

Read more Photos on
click me!

Recommended Stories