ಕೊನೆಗೂ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಬಗ್ಗೆ ಮೌನ ಮುರಿದ ಪಾಲಕ್ ತಿವಾರಿ

Published : Apr 03, 2023, 05:28 PM ISTUpdated : Apr 03, 2023, 06:09 PM IST

ಪಾಲಕ್ ತಿವಾರಿ  (Palak Tiwari) ಕಡೆಗೂ ಇಬ್ರಾಹಿಂ ಅಲಿ ಖಾನ್ ಜೊತೆಗಿನ 'ವದಂತಿ' ಡೇಟಿಂಗ್ ಬಗ್ಗೆ ಮೌನ ಮುರಿದ್ದಾರೆ.ಇತ್ತೀಚಿನ ಸಂದರ್ಶನವೊಂದರಲ್ಲಿ, ಪಾಲಕ್ ತಿವಾರಿ ಅವರು ನಿಜವಾಗಿಯೂ ಇಬ್ರಾಹಿಂ ಅಲಿ ಖಾನ್ (Ibrahim Khan) ಅವರೊಂದಿಗೆ ಡೇಟಿಂಗ್ ಮಾಡಿದ್ದೀರಾ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅಷ್ಷಕ್ಕೂ ಪಾಲಕ್‌ ಹೇಳಿದ್ದಾರೆ ನೋಡಿ.

PREV
18
ಕೊನೆಗೂ ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ಬಗ್ಗೆ ಮೌನ ಮುರಿದ ಪಾಲಕ್ ತಿವಾರಿ

ನಟಿ ಶ್ವೇತಾ ತಿವಾರಿ ಅವರ ಪುತ್ರಿ ಪಾಲಕ್ ತಿವಾರಿ, ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಆಕ್ಷನ್-ಎಂಟರ್ಟೈನರ್ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಲಿದ್ದಾರೆ. 

28

ಹಾರ್ಡಿ ಸಂಧು ಅವರ 2021 ರ ಹಿಟ್ ಫುಟ್-ಟ್ಯಾಪಿಂಗ್ ಹಾಡು ಬಿಜ್ಲೀ ಬಿಜ್ಲಿಯಲ್ಲಿ ಪಾಲಕ್ ಕಾಣಿಸಿಕೊಂಡ ನಂತರ, ಅವರು ತಮ್ಮ ಆಕರ್ಷಕ ನೋಟದಿಂದ ಗಮನ ಸೆಳೆಯುತ್ತಿದ್ದಾರೆ.

38

ಅವರು ಸೈಫ್ ಅಲಿ ಖಾನ್ ಅವರ ಮಗ ಇಬ್ರಾಹಿಂ ಅಲಿ ಖಾನ್ ಜೊತೆ ಪಾರ್ಟಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಂತರ ಇದು ಅವರಿಬ್ಬರ ಡೇಟಿಂಗ್ ವದಂತಿಗಳಿಗೆ ಕಾರಣವಾಗಿದೆ. 

48

ಇದೀಗ, ಪಾಲಕ್ ಅವರು ಬಾಲಿವುಡ್ ತಾರೆ ಸಾರಾ ಅಲಿ ಖಾನ್ ಅವರ ಕಿರಿಯ ಸಹೋದರ ಇಬ್ರಾಹಿಂ ಅಲಿ ಖಾನ್ ಅವರೊಂದಿಗಿನ ಸಂಬಂಧದ ವದಂತಿ ಬಗ್ಗೆ ಮಾತನಾಡಿದ್ದಾರೆ.

58

ಕಳೆದ ವರ್ಷ, ಪಾಲಕ್ ತಿವಾರಿ ಮತ್ತು ಇಬ್ರಾಹಿಂ ಅಲಿ ಖಾನ್ ಮುಂಬೈನ ರೆಸ್ಟೋರೆಂಟ್‌ನಿಂದ ಹೊರಬಂದ ನಂತರ ಕಾರಿನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಸಮಯದಲ್ಲಿ ಪಾಲಾಕ್ ಅವರು ಪಾಪರಾಜಿಗಳಿಂದ ತನ್ನ ಮುಖವನ್ನು ಮುಚ್ಚಿಕೊಳ್ಳಲು ಪ್ರಯತ್ನಿಸಿದರು. 

68

ಕಳೆದ ವರ್ಷ ಏಪ್ರಿಲ್‌ನಲ್ಲಿ, ಸಂದರ್ಶನವೊಂದರಲ್ಲಿ, ತಾನು ಮತ್ತು ಇಬ್ರಾಹಿಂ ಸ್ನೇಹಿತರ ಗುಂಪಿನೊಂದಿಗೆ ಹೊರಗಿದ್ದೆವು. ತಾಯಿ ಶ್ವೇತಾ ತಿವಾರಿಯಿಂದ ಮುಚ್ಚಿಡಲು  ಪ್ರಯತ್ನಿಸುತ್ತಿದ್ದೆ, ಎಂದು ಪಾಲಕ್ ಹೇಳಿದ್ದರು. ಏಕೆಂದರೆ ಈ  ಬಗ್ಗೆ ತಾಯಿಗೆ ಸುಳ್ಳು ಹೇಳಿದ್ದರಂತೆ.

78

ಪ್ರಮುಖ ಮನರಂಜನಾ ಪೋರ್ಟಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಪಾಲಕ್ ತಿವಾರಿ, ಇಬ್ರಾಹಿಂ ಅಲಿ ಖಾನ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ವರದಿಗಳನ್ನು ತಳ್ಳಿಹಾಕಿದ್ದಾರೆ.

88

'ಎರಡು ಚಿತ್ರಗಳ ಶೂಟಿಂಗ್ ನನ್ನನ್ನು ತುಂಬಾ ಬ್ಯುಸಿಯಾಗಿರುವಂತೆ ಮಾಡಿ, ಜೀವನದಲ್ಲಿ ತೃಪ್ತಿ ನೀಡಿದೆ. ಇದು ನನ್ನ ಏಕೈಕ ಗಮನ. ನನಗಿದು ಮಹತ್ವದ ವರ್ಷ, ನಾನು ವೃತ್ತಿಯಲ್ಲಿ ಒಂದು ಭಾಗವಾಗಿರುವುದರಿಂದ ಈ ವದಂತಿಗೆ ಕಿವಿಗೊಡುವುದಿಲ್ಲ. ಕೆಲಸದ ಮೇಲೆ ಹೆಚ್ಚು ಗಮನ ಹರಿಸುತ್ತೇನೆ. ಪ್ರೀತಿಯನ್ನು ಎಂದಿಗೂ ಲೆಕ್ಕಾಚಾರ ಮಾಡಲು ಅಥವಾ ಊಹಿಸಲು ಸಾಧ್ಯವಿಲ್ಲ. ಈ ಹಂತದಲ್ಲಿ, ಕೆಲಸ ನಡೆಯುತ್ತಿದೆ ನನಗೆ ಮೊದಲ ಆದ್ಯತೆ .ವೃತ್ತಿಪರವಾಗಿ, ಇದು ನಿರ್ಣಾಯಕ ಸಮಯ, ಆದ್ದರಿಂದ ನಾನು ಅದರ ಮೇಲೆ ನನ್ನ ಶಕ್ತಿಯನ್ನು ಕೇಂದ್ರೀಕರಿಸುತ್ತಿದ್ದೇನೆ' ಎಂದು ಪಾಲಕ್‌ ತಿವಾರಿ ಹೇಳಿದ್ದಾರೆ

Read more Photos on
click me!

Recommended Stories