ಪರ್ಪಲ್ ಬಣ್ಣದ ಸೀರೆಯಲ್ಲಿ ಮಿಂಚಿದ ನಯನತಾರಾ; ಬೆಲೆ ಕೇಳಿ ಹೆಣ್ಣುಮಕ್ಕಳು ಶಾಕ್...
ತಮಿಳು ನಾಡು ಕಾಲೇಜಿಗೆ ನೇರಳೆ ಬಣ್ಣದ ಆರ್ಗನ್ಜಾ ಸೀರೆಯಲ್ಲಿ ಮಿಂಚಿದ ನಯನತಾರಾ. ರೇಶ್ಮೆ ಸೀರೆ ಬರ್ತಿತ್ತು ಎಂದ ನೆಟ್ಟಿಗರು...
ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಕೆಲವು ದಿನಗಳ ಹಿಂದೆ ತಮಿಳು ನಾಡಿನಲ್ಲಿರುವ ಪ್ರತಿಷ್ಠಿತ ಕಾಲೇಜ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾಲೇಜ್ ಕಾರ್ಯಕ್ರಮಕ್ಕೆ ನೇರಳೆ ಬಣ್ಣದ ಆರ್ಗನ್ಜಾ ಸೀರೆಯಲ್ಲಿ ಮಿಂಚಿದ್ದಾರೆ. ಕಲರ್ ಸೂಪರ್ ಆಗಿದೆ, ಫೋಟೋ ಸಖತ್ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದವರು ಬೆಲೆ ಕೇಳಿ ಶಾಕ್ ಅಗಿದ್ದಾರೆ.
Under the crecent Moon and Glittering stars ಅಪರೂಪದ ಕಲೆಕ್ಷನ್‌ನ ಅಡಿಯಲ್ಲಿ ಶಿಮಾಯಿ ಜಯಚಂದ್ರ ಡಿಸೈನ್ ಮಾಡಿರುವ ಈ ಸೀರೆ 32, 025 ರೂಪಾಯಿ ಎನ್ನಲಾಗಿದೆ.
'ಅಯ್ಯೋ ರೇಶ್ಮೆ ಸೀರೆ ಬೆಲೆಗೆ ಆರ್ಗನ್ಜಾ ಖರೀದಿ ಮಾಡಿದ್ದೀರಿ ತಲೆ ಕೆಟ್ಟಿದ್ಯಾ ನಿಮಗೆ?' ಎಂದು ಹೆಣ್ಣು ಮಕ್ಕಳು ಶಾಕ್‌ನಿಂದ ಕಾಮೆಂಟ್ ಮಾಡುತ್ತಿದ್ದಾರೆ.
ಸ್ಲೀವ್ ಲೆಸ್ ಬ್ಲೌಸ್‌ಗೆ ನಯನತಾರಾ ಹೈ ಬನ್ ಕಟ್ಟಿ ಹೂ ಮುಡಿದಿದ್ದಾರೆ. ಬೆಳ್ಳಿ ಕಿವಿ ಓಲೆ ಬಿಟ್ಟು ಬೇರೆ ಯಾವ ಆಭರಣವೂ ಧರಿಸಿಲ್ಲ ಅನ್ನೋದೇ ಹೈಲೈಟ್.
ತುಂಬಾ ಬೋಲ್ಡ್ ಆಂಡ್ ಬ್ಯೂಟಿಫುಲ್ ಆಗಿರುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ನಯನತಾರಾ ಸಾಮಾನ್ಯವಾಗಿ ಪ್ರಚಾರದಿಂದ ದೂರ ಉಳಿಯುತ್ತಾರೆ. ಮದುವೆಯಾಗಿ ನಿರ್ಮಾಪಕಿ ಆದ್ಮೇಲೆ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದಾರೆ.
ಈ ಹಿಂದೆ ನಯನತಾರಾ ಮೇಕಪ್ ಬಗ್ಗೆ ಸ್ಟಾರ್ ನಟಿ ಕಾಮೆಂಟ್ ಮಾಡಿದ್ದರು. ವಿಚಾರ ನಿರ್ಲಕ್ಷ್ಯ ಮಾಡದೆ ನಯನತಾರಾ ಟಾಂಗ್ ಕೊಟ್ಟಿದ್ದರು.