ಅರಿಶಿಣ ಕುಟ್ಟುವುದರೊಂದಿಗೆ ಶೋಭಿತಾ -ನಾಗ ಚೈತನ್ಯ ಮದುವೆ ಸಂಭ್ರಮ ಶುರು

First Published | Oct 21, 2024, 3:35 PM IST

ಅಕ್ಕಿನೇನಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ ಮದುವೆ ಸಂಭ್ರಮ ಶುರುವಾಗಿದೆ. ಶೋಭಿತಾ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿದ್ದು, ಮದುವೆಯ ಕೆಲ ಶಾಸ್ತ್ರಗಳು ಈಗಾಗಲೇ ಶುರುವಾಗಿವೆ.
 

ಅಕ್ಕಿನೇನಿ ಹಾಗೂ ಶೋಭಿತಾ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ಶೋಭಿತಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಮದುವೆ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
 

ನಾಗ ಚೈತನ್ಯ

ನಾಗ ಚೈತನ್ಯ ಇತ್ತೀಚೆಗೆ ಒಂದು ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ಸೂಪರ್ ಸ್ಟೈಲಿಶ್ ಆಗಿ ನಾಗ ಚೈತನ್ಯ ಮತ್ತು ಶೋಭಿತಾ ಕಾಣಿಸಿಕೊಂಡಿದ್ದರು. ಫೋಟೋಗೆ ರೊಮ್ಯಾಂಟಿಕ್ ಶೀರ್ಷಿಕೆ ಕೂಡ ನೀಡಿದ್ದರು. ಈ ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ನಟ ನಾಗ ಚೈತನ್ಯ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಆದರೆ ಮದುವೆಯ ಬಗ್ಗೆ ಫೋಟೋ ಹಾಕುವ ಮೂಲಕ ಅವರುಸುಳಿವು ನೀಡಿದ್ದಾರೆ ಎಂದು ಶೋಭಿತಾ ಹೇಳಿಕೊಂಡಿದ್ದಾರೆ

ಶೋಭಿತಾ ಧೂಳಿಪಾಳ ಅವರ ಮನೆಯಲ್ಲಿ ಈಗ ಮದುವೆ ಸಂಭ್ರಮ ಶುರುವಾಗಿದ್ದು,ಫೋಟೋಗಳಿಗೆ 'ಗೋಧುಮ ರಾಯಿ ಪಸುಪು ' ಎಂದು ಶೀರ್ಷಿಕೆ ನೀಡಿದ್ದಾರೆ. ಹಿಂದೂ ವಿವಾಹ ಸಂಪ್ರದಾಯದಲ್ಲಿ ಅರಿಶಿನ ರುಬ್ಬುವುದು ಮುಖ್ಯ ವಿಧಿ. ಈ ಕಾರ್ಯಕ್ರಮದೊಂದಿಗೆ ಶೋಭಿತಾ-ನಾಗ ಚೈತನ್ಯ ಮದುವೆ ಸಂಭ್ರಮ ಶುರುವಾಗಿದೆ ಎಂದು ತಿಳಿದುಬಂದಿದೆ.

Tap to resize

ನಾಗ ಚೈತನ್ಯ-ಶೋಭಿತಾ ಮದುವೆ

ಆದರೆ ನಾಗ ಚೈತನ್ಯ ಮದುವೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ,. 2025ರ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಮಾಡುವ ಪ್ಲ್ಯಾನ್ ಇದೆ ಎಂಬ ಗುಸುಗುಸು ಹಬ್ಬಿತ್ತು ವಿದೇಶದಲ್ಲಿ ಮದುವೆ ಆಗಬಹುದು ಎಂಬ ಸುದ್ದಿ ಇತ್ತು. ಆದರೆ ವಿಶಾಖಪಟ್ಟಣದಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಅಲ್ಲಿ ಮದುವೆ ಸಿದ್ಧತೆಗಳು ನಡೆಯುತ್ತಿವೆ ಎನ್ನಲಾಗಿದೆ.

ಶೋಭಿತಾ ವಿಶಾಖಪಟ್ಟಣದಲ್ಲಿ ಓದಿದ್ದು ವಿಶೇಷ. ಎರಡು ವರ್ಷಗಳಿಂದ ನಾಗ ಚೈತನ್ಯ ಮತ್ತು ಶೋಭಿತಾ ರಿಲೇಷನ್ ಶಿಪ್ ನಲ್ಲಿದ್ದಾರೆ. ಆಗಾಗ್ಗೆ ಇವರ ಖಾಸಗಿ ಫೋಟೋಗಳು ಸೋರಿಕೆಯಾಗುತ್ತಿದ್ದವು. ಪ್ರೀತಿಯ ಸುದ್ದಿಯನ್ನು ಈ ಜೋಡಿ ಹಲವು ಬಾರಿ ನಿರಾಕರಿಸಿದ್ದರು. ಆಗಸ್ಟ್ 8 ರಂದು ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದರು. ನಾಗಾರ್ಜುನ ಹೊಸ ಸೊಸೆ ಶೋಭಿತಾ ಧೂಳಿಪಾಳ ಅವರನ್ನು ಅಕ್ಕಿನೇನಿ ಕುಟುಂಬಕ್ಕೆ ಸ್ವಾಗತಿಸಿದರು.

ನಾಗ ಚೈತನ್ಯ-ಶೋಭಿತಾ ಮದುವೆ

ಶೋಭಿತಾ-ನಾಗ ಚೈತನ್ಯ ಮದುವೆ ಹಿನ್ನೆಲೆಯಲ್ಲಿ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಪಟ್ಟು ಸೀರೆಯಲ್ಲಿರುವ ಶೋಭಿತಾ ಸಾಂಪ್ರದಾಯಿಕ ಲುಕ್ ವೈರಲ್ ಆಗುತ್ತಿದೆ. ಪ್ರೇಮಿಗಳಾಗಿದ್ದ ಈ ಸೆಲೆಬ್ರಿಟಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಶೋಭಿತಾ ಧೂಳಿಪಾಳ ಆಂಧ್ರಪ್ರದೇಶದ ತೆನಾಲಿಯಲ್ಲಿ ಹುಟ್ಟಿದ ತೆಲುಗು ಹುಡುಗಿ. ಅವರು ಮಾಡೆಲಿಂಗ್ ಮಾಡಿದ್ದಾರೆ. ಮುಂಬೈನಲ್ಲಿ ಅವರ ವೃತ್ತಿಜೀವನ ಆರಂಭವಾಯಿತು. ಬಾಲಿವುಡ್‌ನಲ್ಲಿ ಶೋಭಿತಾ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ಗೂಢಚಾರಿ, ಮೇಜರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಹಂತದಲ್ಲಿರುವ ಗೂಢಚಾರಿ 2 ರಲ್ಲೂ ಶೋಭಿತಾ ನಟಿಸುತ್ತಿದ್ದಾರೆ ಎನ್ನಲಾಗಿದೆ. ಮಂಕಿ ಮ್ಯಾನ್ ಶೀರ್ಷಿಕೆಯ ಹಾಲಿವುಡ್ ಚಿತ್ರದಲ್ಲೂ ಅವರು ನಟಿಸಿದ್ದಾರೆ.

ನಾಗಾರ್ಜುನ ಅವರ ಹಿರಿಯ ಮಗ ನಾಗ ಚೈತನ್ಯಗೆ ಇದು ಎರಡನೇ ಮದುವೆ. 2017 ರಲ್ಲಿ ನಟಿ ಸಮಂತಾ ಅವರನ್ನು ಪ್ರೇಮ ವಿವಾಹವಾಗಿದ್ದರು. ಸುಮಾರು ನಾಲ್ಕು ವರ್ಷಗಳ ದಾಂಪತ್ಯದ ನಂತರ ಭಿನ್ನಾಭಿಪ್ರಾಯದಿಂದ ಬೇರ್ಪಟ್ಟರು. 2021 ರಲ್ಲಿ ಸಮಂತಾ-ನಾಗ ಚೈತನ್ಯ ಅಧಿಕೃತವಾಗಿ ವಿಚ್ಛೇದನ ಘೋಷಿಸಿದರು. ಪ್ರಸ್ತುತ ನಾಗ ಚೈತನ್ಯ ತಂಡೇಲ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಾಗ ಚೈತನ್ಯ

ಇತ್ತ ಸಮಂತಾ ಸಿಂಗಲ್ ಆಗಿದ್ದಾರೆ. ಅವರು ನಟಿಸಿರುವ ವೆಬ್ ಸರಣಿ ಹನಿ ಬನ್ನಿ ಬಿಡುಗಡೆಗೆ ಸಿದ್ಧವಾಗಿದೆ. ಆ ಸರಣಿಯ ನಿರ್ದೇಶಕರಲ್ಲಿ ಒಬ್ಬರಾದ ರಾಜ್ ನಿಡಿಮೋರು ಜೊತೆ ಸಮಂತಾ ರಿಲೇಷನ್ ಶಿಪ್ ನಲ್ಲಿದ್ದಾರೆ ಎಂಬ ಗುಸುಗುಸು ಇದೆ.

Latest Videos

click me!