ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

Suvarna News   | Asianet News
Published : Jun 03, 2020, 06:53 PM ISTUpdated : Jun 03, 2020, 07:05 PM IST

ಜೂನ್ 2 ಭಾರತೀಯ ಚಿತ್ರರಂಗದ ಪಾಲಿಗೆ ಮರೆಯಲಾಗದಂತಹ ದಿನ.ಇಬ್ಬರೂ ದಿಗ್ಗಜರು ಒಂದೇ ದಿನ ಹುಟ್ಟಿರುವುದು ಈ ದಿನದ ವಿಶೇಷ.ಹೌದು ಸ್ವರ ಶಿಖರ ಇಳಯರಾಜ ಮತ್ತು ಕ್ಲಾಸಿಕ್ ನಿರ್ದೇಶಕ ಮಣಿರತ್ನಂ ಈ ಕಾಂಬಿನೇಷನ್ ತಮ್ಮ ಸಿನಿಮಾಗಳ ಮೂಲಕ ಹೇಗೆ ಮೋಡಿ ಮಾಡಿದ್ದಾರೋ ಹಾಗೇ ಹುಟ್ಟಿದ ದಿನಾಂಕದಲ್ಲೂ ಜೊತೆಯಾಗಿ ಅಭಿಮಾನಿಗಳಿಗೆ ಒಂದು ಅಪರೂಪದ ದಿನವಾಗಿಸಿದ್ದಾರೆ. 

PREV
112
ಸಿನಿಮಾ ಮಾತ್ರವಲ್ಲ ಹುಟ್ಟಿನಿಂದಲೇ ಇಳಯ-ಮಣಿ ಜೋಡಿ ಸೂಪರ್ ಹಿಟ್ !

ಸಂಗೀತ ನಿರ್ದೇಶಕ ಇಳಯರಾಜ ಅವರು 1943 ಜೂನ್ 2 ರಂದು ಜನಿಸಿದರು.

212

ನಿರ್ದೇಶಕ ಮಣಿರತ್ನಂ ಅವರು 1956 ಜೂನ್ 2 ರಂದು ಜನಿಸಿದರು. 

312

ಇಳಯರಾಜ ಅವರ ಅವರ ಮೂಲ ಹೆಸರು ಜ್ಞಾನದೇಶಿಕನ್.ಮದ್ರಾಸಿನ ಮೂಲದವರಾದ ಇವರು ಸಂಗೀತ ಕ್ಷೇತ್ರದಲ್ಲಿ ಅದೆಷ್ಟೋ ಮೈಲಿಗಲ್ಲುಗಳನ್ನು ದಾಟಿದವರು.ಇವರ ಪುತ್ರ ಯುವನ್ ಶಂಕರ್ ರಾಜ ಕೂಡ ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ. 

412

ಮಣಿರತ್ನಂ ಅವರು 1983 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.

512

'ಸಾಗರ ಸಂಗಮಂ' (ತೆಲುಗು), 'ಸಿಂಧು ಭೈರವಿ' (ತಮಿಳು), 'ರುದ್ರವೀಣ'(ತೆಲುಗು), 'ಪಜಾಸ್ಸಿ ರಾಜ'(ಮಲಯಾಳಂ) ಚಿತ್ರಗಳು ಇಳಯರಾಜ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟ ಚಿತ್ರಗಳು ಇದನ್ನೂ ಮೀರಿ ಅದೆಷ್ಟೋ ಪ್ರಶಸ್ತಿಗಳು ಇವರನ್ನು ಅರಸಿಬಂದಿವೆ. 

612

ಬಾಲಿವುಡ್ ನಟ ಅನಿಲ್ ಕಪೂರ್ ಕೂಡ ನಟಿಸಿದ ಮೊದಲ ಸಿನಿಮಾ ಪಲ್ಲವಿ ಅನು ಪಲ್ಲವಿ. ಇದಕ್ಕೆ ಇಳಯರಾಜ ಅವರು ನೀಡಿದ್ದ ಹಾಡುಗಳು ಈಗಲೂ ಕೇಳುಗರ ಮನದಲ್ಲಿ ಶಾಶ್ವತ ಸ್ಥಾನ ಗಿಟ್ಟಿಸಿಕೊಂಡಿವೆ. ಇದಕ್ಕೆ ಮಣಿ ರತ್ನಂ ನಿರ್ದೇಶಿಸಿದ್ದು ಎನ್ನುವುದು ಮತ್ತೊಂದು ಹೆಗ್ಗಳಿಕೆ. 

712

ಬಹುಭಾಷಾ ನಟಿ ಹಸನ್ಮುಖಿ ಸುಹಾಸಿನಿ ಅವರು ಮಣಿರತ್ನಮ್ ಅವರ ಧರ್ಮಪತ್ನಿ.  

812

ಇಳಯರಾಜ ಸಂಗೀತ ನಿರ್ದೇಶನದ ಅನೇಕ ಗೀತೆಗಳನ್ನು ಎಸ್.ಪಿ.ಬಾಲಸುಬ್ರಹ್ಮಣ್ಯ ಹೇಳಿದ್ದಾರೆ. ಅಬ್ಬಾ, ಇಧೆಂಥ ಅಮೋಘ ಜೋಡಿ.

912

ಕನ್ನಡದಲ್ಲೂ ಅನೇಕ ಹಿಟ್ ಹಾಡುಗಳನ್ನು ಇಳಯರಾಜ ಅವರು ನೀಡಿದ್ದಾರೆ ಅವುಗಳೆಂದರೆ  ಗೀತಾ,ಜನ್ಮಜನ್ಮದ ಅನುಬಂಧ,ನಮ್ಮೂರ ಮಂದಾರ ಹೂವೇ,ಪಲ್ಲವಿ ಅನುಪಲ್ಲವಿ.ಈ ಎಲ್ಲಾ ಚಿತ್ರಗಳಲ್ಲಿ ಮೂಡಿರುವ ಅವರ ಸಂಗೀತ ಶ್ರೇಷ್ಠಮಟ್ಟದ್ದು.

1012

ಮಣಿರತ್ನಂ ಅವರು ಪದ್ಮಶ್ರೀ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

1112

ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಹೀಗೆ ಮಣಿರತ್ನಂ ಮಾಡಿದ ಎಲ್ಲಾ ಸಿನಿಮಾಗಳೂ ಯಶಸ್ಸು ಕಂಡಿರುವುದು ವಿಶೇಷ ಅಲ್ಲದೇ ಈಗಿನ ಎಲ್ಲಾ ಭಾಷೆಯ ಯುವ ನಿರ್ದೇಶಕರಿಗೆ ಮಾನಸ ಗುರುವಾಗಿದ್ದಾರೆ. 

1212

ಮಣಿರತ್ನಂ, ಎ.ಆರ್.ರೆಹಮಾನ್, ಎಸ್ಪಿ ಬಾಲಸುಬ್ರಹ್ಮಣ್ಯ, ಇಳಯರಾಜ, ಕಮಲ್ ಹಾಸನ್, ರಜನೀಕಾಂತ್, ಸುಹಾಸಿನಿ...ಈ ಎಲ್ಲರೂ ದಕ್ಷಿಣ ಭಾರತ ಸಿನಿಮಾ ರಂಗದ ಅನರ್ಘ್ಯ ರತ್ನಗಳು ಎಂಬುದರಲ್ಲಿ ಅನುಮಾನವೇ ಇಲ್ಲ.

click me!

Recommended Stories