ಮೆಗಾ ಪವರ್ ಸ್ಟಾರ್, ಗ್ಲೋಬಲ್ ಸ್ಟಾರ್ ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿರುವ ರಾಮ್ ಚರಣ್, ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ ಶಂಕರ್ ನಿರ್ದೇಶನದ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಚಿತ್ರ ಸಂಕ್ರಾಂತಿ ವೇಳೆಗೆ ಬಿಡುಗಡೆಯಾಗಲಿದೆ. ಈ ಮೂವಿಗಾಗಿ ಮೆಗಾ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಚರಣ್ ಸೋಲೋ ಹೀರೋ ಆಗಿ ನಟಿಸ್ತಿರೋ ಮೊದಲ ಪ್ಯಾನ್ ಇಂಡಿಯಾ ಮೂವಿ ಇದಾಗಿರೋದ್ರಿಂದ ನಿರೀಕ್ಷೆಯನ್ನು ಮೂಡಿಸಿದೆ.
ಕೆಜಿಎಫ್ ಮತ್ತು ಸಲಾರ್ ಖ್ಯಾತಿಯ ಸ್ಟಾರ್ ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹೊರ ಬಂದಿತ್ತು. ಈ ಇಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಹೇಗಿರುತ್ತೆ ಎಂದು ಕುತೂಹಲ ಮನೆ ಮಾಡಿದ್ದು, ಸದ್ಯ ಬ್ಬರ ಕಮಿಟ್‌ಮೆಂಟ್ಸ್ ಮುಗಿದ ಮೇಲೆ ಚಿತ್ರದ ಕೆಲಸಗಳು ಶುರುವಾಗಲಿವೆಯಯಂತೆ.
ಈಗ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಕ್ರೇಜ್ ಹೊಂದಿರುವ ನಿರ್ದೇಶಕರಲ್ಲಿ ಪ್ರಶಾಂತ್ ನೀಲ್ ಒಬ್ಬರು. ರಾಜಮೌಳಿ, ಪ್ರಶಾಂತ್ ನೀಲ್, ಸಂದೀಪ್ ರೆಡ್ಡಿ ವಂಗ, ಸುಕುಮಾರ್, ಲೋಕೇಶ್ ಕನಕರಾಜ್ ಇವರೆಲ್ಲ ತಮ್ಮ ರೇಂಜ್‌ನ್ನ ಹೆಚ್ಚಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ ಸಿನಿಮಾ ಸ್ಟ್ಯಾಂಡರ್ಡ್ಸ್‌ನ್ನೂ ಹೆಚ್ಚಿಸಿದ್ದಾರೆ. ಇವರ ಜೊತೆ ಸಿನಿಮಾ ಅಂದ್ರೆ ಹೈಪ್ ಒಂದು ರೇಂಜ್‌ನಲ್ಲಿ ಇರುತ್ತದೆ.
ಅದರ ಭಾಗವಾಗಿಯೇ ಪ್ರಶಾಂತ್ ನೀಲ್ ಜೊತೆ ರಾಮ್ ಚರಣ್ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿ ಕುತೂಹಲ ಮೂಡಿಸಿದೆ. ಮೆಗಾ ಫ್ಯಾನ್ಸ್‌ಗೆ ಗೂಸ್‌ಬಂಪ್ಸ್ ತರಿಸೋ ವಿಷಯ ಅಂತಾನೆ ಹೇಳ್ಬೇಕು. ರಾಮ್ ಚರಣ್ ತರಹ ಮಾಸ್ ಹೀರೋಗೆ ನೀಲ್ ಸಿಕ್ಕಿದ್ರೆ ಮೂವಿ ರೇಂಜ್ ಹೆಚ್ಚಾಗುತ್ತೆ. ಅದೇ ಸಮಯದಲ್ಲಿ ಹೀರೋ ಆಗಿ ರಾಮ್ ಚರಣ್ ಸ್ಟ್ಯಾಂಡರ್ಡ್ಸ್ ಕೂಡ ಹೆಚ್ಚಾಗುತ್ತೆ.
ಇಬ್ಬರ ಕಾಂಬಿನೇಷನ್ ಚಿತ್ರ ನೋಡಲು ಸೂಪರ್ ಆಗಿರುತ್ತೆ ಎಂದು ಫ್ಯಾನ್ಸ್ ಖುಷಿಯಾಗಿದ್ದಾರೆ. ಸಿನಿಮಾ ಬೇಗ ಸೆಟ್ಟೇರಲಿ ಎಂದು ಕೆಲವರು ಪೂಜೆಗಳನ್ನು ಸಹ ಮಾಡಿದ್ದರು. ಆದರೆ ಚಿತ್ರತಂಡದಿಂದ ಹೊಸ ಟ್ವಿಸ್ಟ್ ಸಿಕ್ಕಿದ್ದು, ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ವಿಷಯ ಹೊರ ಬಂದಿದೆ. ಆ ವಿಷಯ ಏನು ಅಂತ ನೋಡೋಣ ಬನ್ನಿ.
ರಾಮ್ ಚರಣ್ ಈಗ `ಗೇಮ್ ಚೇಂಜರ್` ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಸಿನಿಮಾ ಸಂಕ್ರಾಂತಿಗೆ ಬರ್ತಿದೆ. ಆಮೇಲೆ ಬುಚ್ಚಿಬಾಬು ಸನಾ ನಿರ್ದೇಶನದಲ್ಲಿ ಇನ್ನೊಂದು ಭಾರಿ ಆಕ್ಷನ್ ಮೂವಿ ಮಾಡ್ತಾರೆ. ಉತ್ತರಾಂಧ್ರದಲ್ಲಿ ಈ ಮೂವಿ ನಡೆಯುತ್ತೆ. ಅದಾದ್ಮೇಲೆ ರಾಮ್ ಚರಣ್.. ಸುಕುಮಾರ್ ನಿರ್ದೇಶನದಲ್ಲಿ ಒಂದು ಸಿನಿಮಾ ಮಾಡ್ಬೇಕು. ಬುಚ್ಚಿಬಾಬು ಮೂವಿ ಮುಗಿದ ಮೇಲೆ ಸುಕುಮಾರ್ ಸಿನಿಮಾ ಶುರುವಾಗುತ್ತೆ. ಇವುಗಳ ನಂತರ ಪ್ರಶಾಂತ್ ನೀಲ್ ಸಿನಿಮಾ ಶುರುವಾಗುತ್ತೆ ಎಂಬ ಮಾಹಿತಿ ಹೊರ ಬಂದಿದೆ.
ಇತ್ತ ಪ್ರಶಾಂತ್ ನೀಲ್.. NTR ಜೊತೆ ಸಿನಿಮಾ ಮಾಡ್ತಿದ್ದಾರೆ. ಭಾರಿ ಆಕ್ಷನ್ ಮೂವಿ ಇದಾಗಲಿದೆ. ಪ್ರಶಾಂತ್ ನೀಲ್ ಯೂನಿವರ್ಸ್‌ನ ಭಾಗವಾಗಿ NTR ಮೂವಿ ಇರಲಿದೆಯಂತೆ. ಬೇಗನೆ ರೆಗ್ಯುಲರ್ ಶೂಟಿಂಗ್ ಶುರುವಾಗಲಿದೆ. ಈ ಸಿನಿಮಾ ಮುಗಿದ ಮೇಲೆ ಪ್ರಶಾಂತ್ ನೀಲ್.. ಪ್ರಭಾಸ್ ಜೊತೆ `ಸಲಾರ್ 2` ಮಾಡ್ಬೇಕು.
ಇದರ ಶೂಟಿಂಗ್ ಫೂಟೇಜ್ ಕೂಡ ಇದೆ. ಸುಮಾರು 30%, 40% ಸಿನಿಮಾ ಮುಗಿದಿದೆ ಅಂತ ಗೊತ್ತಾಗ್ತಿದೆ. ಆಮೇಲೆ `ಕೆಜಿಎಫ್ 3` ಸಿನಿಮಾ ಮಾಡ್ಬೇಕು. ಈ ಸಿನಿಮಾಗಳನ್ನ ಮುಗಿಸಿ ರಾಮ್ ಚರಣ್ ಸಿನಿಮಾಗೆ ಬರ್ತಾರೆ ಪ್ರಶಾಂತ್ ನೀಲ್. ರಾಮ್ ಚರಣ್ ಕಮಿಟ್‌ಮೆಂಟ್ಸ್, ಪ್ರಶಾಂತ್ ನೀಲ್ ಕಮಿಟ್‌ಮೆಂಟ್ಸ್ ಮುಗಿಯೋಕೆ ಇನ್ನೂ ಎರಡು ಮೂರು ವರ್ಷ ಬೇಕು.
ಅಂದ್ರೆ ರಾಮ್ ಚರಣ್, ಪ್ರಶಾಂತ್ ನೀಲ್ ಸಿನಿಮಾ ಶುರುವಾಗೋಕೆ ಇನ್ನೂ ಮೂರು ವರ್ಷ ಬೇಕು ಅಂತ ಹೇಳಬಹುದು. ಅಲ್ಲಿವರೆಗೂ ಈ ಪ್ರಾಜೆಕ್ಟ್ ಅದೇ ಕಮಿಟ್‌ಮೆಂಟ್‌ನಲ್ಲಿ ಇರುತ್ತಾ? ಅನ್ನೋದು ಸಸ್ಪೆನ್ಸ್. ಇದೇ ಮೆಗಾ ಫ್ಯಾನ್ಸ್‌ಗೆ ಬೇಜಾರು ಮಾಡೋ ವಿಷಯ. ರಾಮ್ ಚರಣ್, ಪ್ರಶಾಂತ್ ನೀಲ್ ಪ್ರಾಜೆಕ್ಟ್ ಬರ್ತಿದೆ ಅನ್ನೋ ಸುದ್ದಿಗೆ ಖುಷಿ ಪಡ್ಬೇಕೋ? ಇದು ಮೂರು ವರ್ಷ ಆದ್ಮೇಲೆ ಬರುತ್ತೆ ಅನ್ನೋ ಸುದ್ದಿಗೆ ಬೇಜಾರು ಪಡ್ಬೇಕೋ ಅಂತ ಫ್ಯಾನ್ಸ್‌ಗೆ ಗೊತ್ತಾಗ್ತಿಲ್ಲ.