ಪಿಂಕ್ ಗೌನ್‌ನಲ್ಲಿ ಮಿಂಚಿದ ಮೃಣಾಲ್ ಠಾಕೂರ್; ಸೀತಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

Published : Oct 02, 2022, 04:20 PM IST

ಪಿಂಕ್ ಬಣ್ಣದ ಗೌನ್ ನಲ್ಲಿ ಮಸ್ತ್ ಪೋಸ್ ನೀಡಿರುವ ಮೃಣಾಲ್ ಠಾಕೂರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೃಣಾಲ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. 

PREV
16
ಪಿಂಕ್ ಗೌನ್‌ನಲ್ಲಿ ಮಿಂಚಿದ ಮೃಣಾಲ್ ಠಾಕೂರ್; ಸೀತಾ ಸೌಂದರ್ಯಕ್ಕೆ ಫ್ಯಾನ್ಸ್ ಫಿದಾ

ಮೃಣಾಲ್ ಠಾಕೂರ್ ಈ ಹೆಸರು ಈಗ ಸೌತ್ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್. ಮೃಣಾಲ್ ಠಾಕೂರ್ ಎನ್ನುವುದಕ್ಕಿಂತ ಸೀತಾ ಎಂದರೆ ಥಟ್ ಅಂತ ಗೊತ್ತಾಗಲಿದೆ. ಹೌದು ಸೀತಾ ರಾಮಂ  ಸಿನಿಮಾ ಮೂಲಕ ಸೌತ್‌ಗೆ ಎಂಟ್ರಿ ಕೊಟ್ಟ ಮೃಣಾಲ್ ಮೊದಲ ಸಿನಿಮಾದಲ್ಲೇ ದೊಡ್ಡ ಮಟ್ಟದ ಖ್ಯಾತಿಗಳಿಸಿದರು. ಅಪಾರ ಸಂಖ್ಯೆಯ ಅಭಿಮಾನಿಗಳಳನ್ನು ಸಂಪಾದಿಸಿದರು. 

26

ಸೀತಾ ರಾಮಂನಲ್ಲಿ ಮಲಯಾಳಂ ಸ್ಟಾರ್ ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ಮೃಣಾಲ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಿತ್ತು. ಸೀತಾ ಪಾತ್ರ ಇವತ್ತಿಗೂ ಪ್ರೇಕ್ಷಕರ ಹಾಟ್ ಫೇವರಿಟ್. 

36

ಸೀತಾ ರಾಮಂ ಸಿನಿಮಾ ಮೃಣಾಲ್ ಠಾಕೂರ್ ಅವರಿಗೆ ದೊಡ್ಡ ಮಟ್ಟದ ಬ್ರೇಕ್ ತಂದುಕೊಟ್ಟಿದೆ. ಈ ಸಿನಿಮಾ ಬಳಿಕ ಮೃಣಾಲ್ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಸದ್ಯ ಮೃಣಾಲ್ ಸಾಮಾಜಿಕ ಜಾಲತಾಣದಲ್ಲಿ ಸುಂದರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಮೃಣಾಲ್ ಹೊಸ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

46

ಪಿಂಕ್ ಬಣ್ಣದ ಗೌನ್ ನಲ್ಲಿ ಮಸ್ತ್ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೃಣಾಲ್ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. 

56
Mrunal Thakur

ಕಿರುತೆರೆ ಮೂಲಕ ಬಣ್ಣದ ಲೋಕದ ಜರ್ನಿ ಆರಂಭಿಸಿದ ಮೃಣಾಲ್ ಠಾಕೂರ್ ಇದೀಗ ಭಾರತೀಯ ಚಿತ್ರರಂಗದ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಹಿಂದಿಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮೃಣಾಲ್ ಸದ್ಯ ಸೌತ್ ಸಿನಿಮಾರಂಗದಲ್ಲೂ ಮಿಂಚಿತ್ತಿದ್ದಾರೆ.

66

ಸೀತಾ ರಾಮಂ ಸೂಪರ್ ಹಿಟ್ ಬಳಿಕ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಸಿನಿಮಾ ಮಾಡುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಸಿನಿಮಾಗಳಿಗೆ ಆಫರ್ ಬಂದಿದ್ದು ಸ್ಟಾರ್ ನಟರ ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಮೃಣಾಲ್ ಮುಂದಿನ ಸಿನಿಮಾ ಯಾವುದು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. 

Read more Photos on
click me!

Recommended Stories