ರಿಚಾ ಚಡ್ಡಾ-ಅಲಿ ಫಸಲ್ ಮದುವೆ; 'ಶಕೀಲಾ' ನಟಿಯ ಹಳದಿ ಶಾಸ್ತ್ರದ ಸಂಭ್ರಮ, ಫೋಟೋ ವೈರಲ್

First Published Oct 2, 2022, 11:02 AM IST

ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಶಾಸ್ತ್ರಗಳು ಶುರುವಾಗದ್ದು ರಿಚಾ ಮತ್ತು ಅಲಿ ಫಸಲ್ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. 

ಬಾಲಿವುಡ್‌ನ ಖ್ಯಾತ ನಟಿ ರಿಚಾ ಚಡ್ಡಾ ಮದುವೆ ಸಂಭ್ರಮ ಜೋರಾಗಿದೆ. ಈಗಾಗಲೇ ಶಾಸ್ತ್ರಗಳು ಶುರುವಾಗದ್ದು ರಿಚಾ ಮತ್ತು ಅಲಿ ಫಸಲ್ ಹಳದಿ ಶಾಸ್ತ್ರದ ಫೋಟೋಗಳು ವೈರಲ್ ಆಗಿವೆ. 

ಇತ್ತೀಚಿಗಷ್ಟೆ ರಿಚಾ ಮತ್ತು ಅಲಿ ಫಸಲ್ ಅವರ ಕಾಕ್‌ಟೇಲ್ ಪಾರ್ಟಿ ಮತ್ತು ರಿಸೆಪ್ಷನ್ ಅದ್ದೂರಿಯಾಗಿ ನಡೆದಿತ್ತು. ದೆಹಲಿಯಲ್ಲಿ ನಡೆದ ಪಾರ್ಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈಲರ್ ಆಗಿವೆ. ರಿಚಾ ಮತ್ತು ಅಲಿ ಜೋಡಿ ಆಕರ್ಷವಾಗಿ ಕಾಣಿಸುತ್ತಿದ್ದರು. 

ಇದೀಗ ಹಳದಿ ಶಾಸ್ತ್ರದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈಗಾಗಲೇ ಮದುವೆ ಪೂರ್ವ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿವೆ. ದೆಹಲಿಯ ಹಳೆಯ ಕ್ಲಬ್ ನಲ್ಲಿ ಇಬ್ಬರ ಮದುವೆ ಶಾಸ್ತ್ರಗಳು ನಡೆಯುತ್ತಿವೆ. 

ನಟಿ ರಿಚಾ ಚಡ್ಡಾ ಗ್ರ್ಯಾಂಡ್ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದ್ದಾರೆ. ಹಳದಿ ಶಾಸ್ತ್ರದಲ್ಲಿ ಇಬ್ಬರೂ ಸುಂದರವಾಗಿ ಕಂಗೊಳಿಸಿದ್ದಾರೆ. ಕ್ಯಾಮರಾಗೆ ಮಸ್ತ್ ಪೋಸ್ ನೀಡಿದ್ದಾರೆ. 

ಅಂದಹಾಗೆ ರಿಚಾ ಮತ್ತು ಅಲಿ ಅವರ ಮದುವೆ ಶಾಸ್ತ್ರಗಳಲ್ಲಿ ಆಪ್ತರು ಮತ್ತು ಕುಟುಂಬದವರು ಮಾತ್ರ ಭಾಗಿಯಾಗಿದ್ದಾರೆ. ಸಿನಿಮಾರಂಗದ ಗಣ್ಯರು ಯಾರು ಕಾಣಿಸಿಕೊಂಡಿಲ್ಲ. ಈಗಾಗಲೇ ಅನೇಕ ಫೋಟೋಗಳು ವೈರಲ್ ಆಗಿವೆ.

ಅಂದಹಾಗೆ ರಿಚಾ ಮತ್ತು ಅಲಿ ಅವರ ಮದುವೆ ಪೂರ್ವ ಶಾಸ್ತ್ರಗಳು ದೆಹಲಿ ಹಳೆಯ ಕ್ಲಬ್ ನಲ್ಲಿ ಪ್ರಾರಂಭವಾಗಿದೆ. ರಿಚಾ ಮತ್ತು ಅಲಿ ಇಬ್ಬರೂ ಅಕ್ಟೋಬರ್ 4ರಂದು ಹಸೆಮಣೆ ಏರುತ್ತಿದ್ದಾರೆ. ದೆಹಲಿಯಲ್ಲಿ ಪ್ರಾರಂಭವಾದ ಮದುವೆ ಸಮಾರಂಭ ಮುಂಬೈನಲ್ಲಿ ನಡೆಯುತ್ತಿದೆ.  

ರಿಚಾ ಮತ್ತು ಅಲಿ ಮದುವೆ ಕಾರ್ಯಕ್ರಮ ಸೆಪ್ಟೆಂಬರ್ 30 ರಂದು ದೆಹಲಿಯಲ್ಲಿ ಪ್ರಾರಂಭವಾಗಿದೆ. ಅಕ್ಟೋಬರ್ 7ರಂದು ಮುಂಬೈನಲ್ಲಿ ಮುಗಿಯಲಿವೆ ಎನ್ನುವ ಮಾಹಿತಿ ಬಹಿರಂಗವಾಗಿದೆ. 

ಮದುವೆ ಬಳಿಕ ರಿಚಾ ಮತ್ತು ಅಲಿ ಜೋಡಿ ಸ್ನೇಹಿತರಿಗೆ, ಚಿತ್ರರಂಗದ ಗಣ್ಯರಿಗಾಗಿ ಹಾಗೂ ಆಪ್ತರಿಗೆ ಮುಂಬೈನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರಂತೆ. ಈ ಬಗ್ಗೆ ರಿಚಾ ಕಡೆಯಿಂದ ಇನ್ನು ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.  

click me!