ಮದುವೆಯ ನಂತರ ಇನ್ನಷ್ಟು ಸುಂದರಿಯಾದ ಮೌನಿ ಹಾಟ್‌ ಡ್ರೆಸ್‌ನಲ್ಲಿ ಫೋಟೋಶೂಟ್!

First Published | Mar 12, 2022, 3:43 PM IST

ಚಿಕ್ಕ ಪರದೆಯಿಂದ ಹೊರಬಂದ ಮೌನಿ ರಾಯ್ (Mouni Roy) ಈಗ ಹಿರಿತೆರೆಯಲ್ಲಿ ತಮ್ಮ ನಟನಾ ಕೌಶಲ್ಯವನ್ನು ಹರಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ, ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ. ಮದುವೆಯ ನಂತರ ಮೌನಿ ರಾಯ್ ಇನ್ನಷ್ಟು ಸುಂದರವಾಗಿದ್ದಾರೆ.  ಇತ್ತೀಚೆಗೆ, ನಟಿ ಬ್ರೈಟ್‌ ಪರ್ಪಲ್‌ ಥೈ-ಹೈ ಸ್ಲಿಟ್ ಡ್ರೆಸ್‌ನಲ್ಲಿ ಕೆಲವು ಫೋಟೋಗಳನ್ನುಹಂಚಿಕೊಂಡಿದ್ದಾರೆ.  

ಮೌನಿ ರಾಯ್ ತಮ್ಮ ಇನ್ಸ್ಟಾಗ್ರಾಮ್‌ ಆಕೌಂಟ್‌ನಲ್ಲಿ ಹಾಟ್ ಡ್ರೆಸ್‌ನಲ್ಲಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಆಕೆ ಕಿಲ್ಲರ್ ಪೋಸ್ ನೀಡುತ್ತಿದ್ದಾರೆ. ಆಕೆಯ ಈ ಲುಕ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.

ಮೌನಿ ರಾಯ್ ಅವರು ತಿಳಿ ನೇರಳೆ ಬಣ್ಣದ  ಥೈ-ಹೈ ಸ್ಲಿಟ್ ಉಡುಪಿನಲ್ಲಿ ತನ್ನ ಕರ್ವ್‌ ಫಿಗರ್‌ ಪ್ರದರ್ಶಿಸುತ್ತಿದ್ದಾರೆ. ಅವರು ಒಂದಕ್ಕಿಂತ ಹೆಚ್ಚು ಸಿಜ್ಲಿಂಗ್ ಪೋಸ್ ನೀಡುತ್ತಿರುವುದನ್ನು ಕಾಣಬಹುದು.

Tap to resize

ಲುಕ್‌  ಪೂರ್ಣಗೊಳಿಸಲು, ಮೌನಿ ರಾಯ್ ತನ್ನ ಕೂದಲನ್ನು ತೆರೆದು ಅದರಲ್ಲಿ ಕೆಲವು  ಕ್ಲಿಪ್‌ಗಳನ್ನು ಧರಿಸಿದ್ದಾರೆ. ಅವರ ತನ್ನ ಕಿವಿಯಲ್ಲಿ ಡಿಸೈನರ್ ಇಯರ್‌ರಿಂಗ್‌ ಧರಿಸಿದ್ದಾರೆ ಮತ್ತು  ಮೌನಿ ಸ್ಮೋಕಿ ಮೇಕಪ್ ಮಾಡಿದ್ದಾರೆ. ಕಣ್ಣುಗಳನ್ನು ಹೈಲೈಟ್ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ, ಮೌನಿ ರಾಯ್ ಕೆಲವೊಮ್ಮೆ ತಮ್ಮ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡರೆ ಇನ್ನು ಕೆಲವೊಮ್ಮೆ ಮನಮೋಹಕ ಶೈಲಿಯಲ್ಲಿ  ಮತ್ತು ಕೆಲವೊಮ್ಮೆ ಬೋಲ್ಡ್‌ ಅವತಾರದಲ್ಲಿ ಕಾಣಿಸಿ ಕೊಳ್ಳುತ್ತಾರೆ. 

ಇತ್ತೀಚೆಗೆ, ಅವರು ಸಿಮಾರ್ ಸೀರೆಯನ್ನು ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಸಿರು ಸಿಮರ್ ಸೀರೆಯಲ್ಲಿ ಮೌನಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಅವರು ತನ್ನ ಕೂದಲನ್ನು ಕರ್ಲಿಂಗ್ ಮಾಡಿ ಕಟ್ಟದೆ ಹಾಗೆ ಬಿಟ್ಟಿದ್ದರು. ನಟಿಯ  ಸೀರೆಯ ಈ ಪೋಸ್‌ಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ.

ಮೌನಿ ರಾಯ್ ತಮ್ಮ ಬಾಲಿವುಡ್ ವೃತ್ತಿಜೀವನವನ್ನು ಅಕ್ಷಯ್ ಕುಮಾರ್ ಅವರ ಚಿತ್ರ ಗೋಲ್ಡ್ ಮೂಲಕ ಪ್ರಾರಂಭಿಸಿದರು. ಈಗ ಅವರು 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರು ಆಲಿಯಾ ಭಟ್, ರಣಬೀರ್ ಕಪೂರ್ ಮತ್ತು ಅಮಿತಾಬ್ ಬಚ್ಚನ್ ಅವರೊಂದಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೌನಿ ರಾಯ್ ಅವರು ತಮ್ಮ ಲಾಂಗ್‌ ಟೈಮ್‌ ಬಾಯ್‌ಫ್ರೆಂಡ್‌  ಸೂರಜ್ ನಂಬಿಯಾರ್ ಅವರೊಂದಿಗೆ ಜನವರಿ 27 ರಂದು ಗೋವಾದಲ್ಲಿ ಹಸೆಮಣೆ ತುಳಿದರು.

Latest Videos

click me!