ಮೊದಲು ಹೊಸ ಸಿನಿಮಾ ಅಂದ್ರೆ ಥಿಯೇಟರ್‌ಗೆ ಹೋಗಿ ನೋಡ್ಬೇಕಿತ್ತು. ಈಗ ಒಂದು ತಿಂಗಳು ಕಾದರೆ OTTಯಲ್ಲಿಯೇ ನೋಡಬಹುದು. ಅಕ್ಟೋಬರ್ 7 ರಿಂದ 13 ರವರೆಗೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಟಾಪ್ 10 ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿಯನ್ನು ಓರ್‌ಮ್ಯಾಕ್ಸ್ ಬಿಡುಗಡೆ ಮಾಡಿದೆ.
ರಾತ್ ಜವಾನ್ ಹೈ
10. ಸುಮಿತ್ ವ್ಯಾಸ್ ನಿರ್ದೇಶನದ ಹಿಂದಿ ವೆಬ್ ಸರಣಿ ರಾತ್ ಜವಾನ್ ಹೈ. ಸೋನಿ ಲೈವ್‌ನಲ್ಲಿ 16 ಲಕ್ಷ ವೀಕ್ಷಣೆಗಳೊಂದಿಗೆ 10ನೇ ಸ್ಥಾನದಲ್ಲಿದೆ.
ಹೈವೇ ಲವ್ ಸೀಸನ್ 2
9. ಸಾಹಿರ್ ರಾಜಾ ನಿರ್ದೇಶನದ ಹೈವೇ ಲವ್ ಸೀಸನ್ 2, MX ಪ್ಲೇಯರ್‌ನಲ್ಲಿ 17 ಲಕ್ಷ ವೀಕ್ಷಣೆಗಳೊಂದಿಗೆ 9ನೇ ಸ್ಥಾನದಲ್ಲಿದೆ.
ಪ್ಲೇಗ್ರೌಂಡ್ 4
8. Amazon MX ಪ್ಲೇಯರ್‌ನಲ್ಲಿ ಬಿಡುಗಡೆಯಾದ ಪ್ಲೇಗ್ರೌಂಡ್ ವೆಬ್ ಸರಣಿ ನಾಲ್ಕನೇ ಸೀಸನ್ 18 ಲಕ್ಷ ವೀಕ್ಷಣೆಗಳೊಂದಿಗೆ 8ನೇ ಸ್ಥಾನದಲ್ಲಿದೆ.
ದಿ ಪೆಂಗ್ವಿನ್
7. ಜಿಯೋ ಸಿನಿಮಾದಲ್ಲಿ ಬಿಡುಗಡೆಯಾದ ದಿ ಪೆಂಗ್ವಿನ್ ವೆಬ್ ಸರಣಿ ಹಲವು ಭಾಷೆಗಳಲ್ಲಿ ಲಭ್ಯವಿದ್ದು, 19 ಲಕ್ಷ ವೀಕ್ಷಣೆಗಳೊಂದಿಗೆ 7ನೇ ಸ್ಥಾನದಲ್ಲಿದೆ.
ದಿ ಟ್ರೈಬ್
6. ಓಂಕಾರ್ ನಿರ್ದೇಶನದ ದಿ ಟ್ರೈಬ್, Amazon Prime ನಲ್ಲಿ 24 ಲಕ್ಷ ವೀಕ್ಷಣೆಗಳೊಂದಿಗೆ 6ನೇ ಸ್ಥಾನದಲ್ಲಿದೆ. ಅಲ್ಫಿಯಾ ಜಫ್ರಿ, ಸೃಷ್ಠಿ ಪೊರೆ, ಅಲನಾ ಪಾಂಡೆ ಈ ಸಿರೀಸ್‌ನಲ್ಲಿ ನಟಿಸಿದ್ದಾರೆ.
ಅಮರ್ ಪ್ರೇಮ್ ಕಿ
4. ಸಲಿಂಗಕಾಮವನ್ನು ಕೇಂದ್ರೀಕರಿಸಿದ ಅಮರ್ ಪ್ರೇಮ್ ಕಿ ಪ್ರೇಮ್ ಕಹಾನಿ, ಜಿಯೋ ಸಿನಿಮಾದಲ್ಲಿ 26 ಲಕ್ಷ ವೀಕ್ಷಣೆಗಳೊಂದಿಗೆ 4ನೇ ಸ್ಥಾನದಲ್ಲಿದೆ.
CTRL ಸಿನಿಮಾ
3. ವಿಕ್ರಮಾದಿತ್ಯ ನಿರ್ದೇಶನದ CTRL ಚಿತ್ರ Netflix ನಲ್ಲಿ 29 ಲಕ್ಷ ವೀಕ್ಷಣೆಗಳೊಂದಿಗೆ 3ನೇ ಸ್ಥಾನದಲ್ಲಿದೆ. ಅನನ್ಯ ಪಾಂಡೆ ಪ್ರಮುಖ ತಾರಾಗಣದಲ್ಲಿದ್ದಾರೆ.
ದಿ ಗ್ರೇಟ್ ಇಂಡಿಯನ್
2. ಕಳೆದ ವಾರ ಮೂರನೇ ಸ್ಥಾನದಲ್ಲಿದ್ದ ಕಪಿಲ್ ಶರ್ಮಾ ಶೋ ಈ ವಾರ ಎರಡನೇ ಸ್ಥಾನಕ್ಕೆ ಏರಿದೆ. Netflix ನಲ್ಲಿ 38 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.
ತಾಜಾ ಖಬರ್ 2
1. ಭುವನ್ ಬಾಮ್ ನಿರ್ದೇಶನದ ತಾಜಾ ಖಬರ್ ವೆಬ್ ಸರಣಿಯ ಎರಡನೇ ಸೀಸನ್ Disney+ Hotstar ನಲ್ಲಿ 42 ಲಕ್ಷ ವೀಕ್ಷಣೆಗಳೊಂದಿಗೆ ಮೊದಲ ಸ್ಥಾನದಲ್ಲಿದೆ.