ಎಚ್ಚರಿಕೆಯಿಂದ ಸಿನಿಮಾಗಳನ್ನು ಆಯ್ಕೆ ಮಾಡುವ ಕಾರಣ ಮಹೇಶ್ ಬಾಬು ನಾಯಕನಾಗಿ ನಟಿಸಿರುವ ಸಿನಿಮಾಗಳು ಇನ್ನೂ 30ರ ಗಡಿ ದಾಟಿಲ್ಲ, ತಮ್ಮ ಇಮೇಜ್‌ಗೆ ಸರಿ ಹೊಂದುವ, ಉತ್ತಮ ಕಥೆಗಳನ್ನು ಮಾತ್ರ ಅವರು ಆರಿಸಿಕೊಳ್ಳುತ್ತಾರೆ. ಮಹೇಶ್ ಬಾಬು ಯಶಸ್ಸಿನ ಗುಟ್ಟು ಕೂಡ ಇದೇ. ಮಹೇಶ್ ಬಾಬು ತಮ್ಮ 29ನೇ ಚಿತ್ರವನ್ನು ರಾಜಮೌಳಿ ಜೊತೆ ಮಾಡುತ್ತಿದ್ದಾರೆ. ಹೀಗಿರುವಾಗ ಮಹೇಶ್ ಬಾಬುಗೆ ಒಬ್ಬ ತೆಲಂಗಾಣದ ದೊಡ್ಡ ರಾಜಕಾರಣಿ ಫೋನ್ ಮಾಡಿ ಬೈದಿದ್ರಂತೆ. ಹೀಗಾಗಿ ತಮ್ಮ ಸಿನಿಮಾ ಬಿಡುಗಡೆಯಾದ್ರೆ ಆ ರಾಜಕಾರಣಿ ಏನಂತಾರೋ ಅನ್ನೋ ಭಯ ಮಹೇಶ್ ಬಾಬು ಅವರಿಗಿದೆಯಂತೆ. ಮಹೇಶ್ ಬಾಬುವನ್ನು ಹೆದರಿಸಿದ ಆ ರಾಜಕೀಯ ನಾಯಕ ಯಾರೂ ಅಲ್ಲ, ಮಾಜಿ ಸಚಿವ ಕೆಟಿಆರ್. ಈ ಹಿಂದೆ ಮಹೇಶ್ ಬಾಬು ಅವರ 'ಭರತ್ ಅನ್ನೇ ನೇನು' ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಕೆಟಿಆರ್, ಮಹೇಶ್ ಬಾಬು ಮತ್ತು ಕೊರಟಾಲ ಶಿವ ಭಾಗವಹಿಸಿದ್ದರು.